ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ‘ಹುಣಸೆ ಮರದ ಕೆಳಗೆ ರಾತ್ರಿ ಮಲಗಬಾರದು ಕಾರಣ ಅಲ್ಲಿ ಪಿಶಾಚಿಗಳ ವಾಸ್ತವ್ಯವಿರುತ್ತದೆ’ ಎಂದು ಹೇಳುತ್ತಿದ್ದರು ಹಾಗೂ ಹೆದರಿಕೆಯಿಂದ ಜನರು ರಾತ್ರಿಯ ಸಮಯದಲ್ಲಿ ಹುಣಸೆ ಮರದ ಕೆಳಗೆ ಹೋಗುತ್ತಿರಲಿಲ್ಲ, ಹಾಗೆ ಮಲಗುತ್ತಿರಲಿಲ್ಲ. ಇದರ ಹಿಂದಿನ ವೈಜ್ಞಾನಿಕ ಕಾರಣವೆಂದರೆ ರಾತ್ರಿಯ ಸಮಯದಲ್ಲಿ ತುಳಸಿಯೊಂದು ಬಿಟ್ಟು ಬೇರೆಲ್ಲ ಮರಗಳು ಕಾರ್ಬನಡೈಆಡೈಆಕ್ಸೈಡನ್ನು ಬಿಡುಗಡೆಗೊಳಿಸುತ್ತವೆ. ಅದರಲ್ಲಿಯು ಹುಣಸೆ ಮರಕ್ಕೆ ಹೆಚ್ಚು ಎಲೆಗಳಿರುವುರಿಂದ ಅದು ಹೆಚ್ಚು ಪ್ರಮಾಣದಲ್ಲಿ ಕಾರ್ಬನಡೈಆಡೈಕ್ಸೈಡನನ್ನು ಬಿಡುಗಡೆ ಮಾಡುತ್ತವೆ ಹಾಗೂ ಬೇಕಾದಷ್ಟು ಆಮ್ಲಜನಕ ಸಿಗದೆ ಜೀವಕ್ಕೆ ಉಸಿರಾಡಲು ಕಷ್ಟವಾಗಿ ಮರಣವು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಗ ವಿಜ್ಞಾನದಲ್ಲಿ ಪ್ರಗತಿಯಾಗಿರಲಿಲ್ಲ ಹಾಗೂ ಜನರು ಭೂತ ಪಿಶಾಚಿಗಳಿಗೆ ಹೆದರುತ್ತಿದ್ದರು ಎಂದೇ ‘ಹುಣಸೆ ಮರದ ಕೆಳಗೆ ಮಲಗಬಾರದು ಕಾರಣ ಅಲ್ಲಿ ಭೂತ ಪಿಶಾಚಿಗಳ ವಾಸವಿರುತ್ತದೆ’, ಎಂಬ ಹೆದರಿಕೆಯನ್ನು ತೋರಿಸುತ್ತಿದ್ದರು ಹಾಗೂ ತುಳಸಿಯ ಗಿಡದ ಪೂಜೆಯನ್ನು ಮಾಡಿ ಅದನ್ನು ಕಾಪಾಡಬೇಕು ಎಂದು ಹೇಳಲಾಗುತ್ತಿತ್ತು.
ಸಂಪಾದಕರು – ಹ.ಭ.ಪ. ವಿಠಲಬುವಾ ಶೆಳಕೆ (ಕೃಪೆ – ಸಾಮಾಜಿಕ ಜಾಲತಾಣ)