`ಹಿಂದೂಗಳನ್ನು ಹೊರತುಪಡಿಸಿ ಪ್ರತಿಯೊಬ್ಬ ಧರ್ಮೀಯರಿಗೂ ಅವರವರ ಧರ್ಮದ ಬಗ್ಗೆ ಅಭಿಮಾನವಿದೆ. ಇತರ ಧರ್ಮದ ಜನರು ತಮ್ಮ ಪ್ರಾರ್ಥನಾ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಇದರ ಪರಿಣಾಮವಾಗಿ, ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಮುಸ್ಲಿಮರಿಗೆ ಸ್ಥಳಾವಕಾಶವಿಲ್ಲ, ಭಾನುವಾರದಂದು ಚರ್ಚ್ಗಳು ಕ್ರೈಸ್ತರಿಂದ ತುಂಬಿರುತ್ತವೆ. ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಅಭಿಮಾನವಿಲ್ಲ. ಹಾಗಾಗಿ ಅವರು ಯಾವಾಗಲಾದರೂ ದೇವಸ್ಥಾನಗಳಿಗೆ ಹೋಗುತ್ತಾರೆ. ದೇವಸ್ಥಾನದಲ್ಲಿ ಆರತಿ ಮಾಡುವಾಗ ಯಂತ್ರದ ಸಹಾಯದಿಂದ ಗಂಟೆ ಬಾರಿಸಬೇಕಾದ ಪರಿಸ್ಥಿತಿ ಇದೆ.’