ಪೋರ್ತುಗಾಲನಲ್ಲಿ ಗರ್ಭಿಣಿ ಭಾರತೀಯ ಮಹಿಳೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಇದ್ದರಿಂದ ಸಾವು

ಆರೋಗ್ಯ ಸಚಿವರಿಗೆ ತ್ಯಾಗಪತ್ರ ನೀಡಬೇಕಾಯಿತು !

ಆರೋಗ್ಯ ಸಚಿವ ಮಾರ್ಟಾ ತೆಮಿಡೋ

ಲಿಸ್ಬನ (ಪೋರ್ತುಗಾಲ) – ಪೋರ್ತುಗಾಲನಲ್ಲಿ ಓರ್ವ ಭಾರತೀಯ ಮಹಿಳೆಗೆ ಸಾವಿನ ನಂತರ ಪೋರ್ತುಗಾಲಿನ ಆರೋಗ್ಯ ಸಚಿವ ಮಾರ್ಟಾ ತೆಮಿಡೋ ಇವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಿಸ್ಬನ ಇಲ್ಲಿ ಹೃದಯಾಘಾತದಿಂದ ೩೪ ವಯಸ್ಸಿನ ಭಾರತೀಯ ಮಹಿಳೆ ಆಸ್ಪತ್ರೆಯಲ್ಲಿ ಸ್ಥಳ ಸಿಗದೇ ಇದ್ದರಿಂದ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದಳು. ತುರ್ತು ಸೇವೆ ನಿಲ್ಲಿಸಿರುವದರಿಂದ ಹಾಗೂ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆಯಿಂದ ಮತ್ತು ಗರ್ಭಿಣಿ ಮಹಿಳೆಗೆ ಯೋಗ್ಯವಾದ ಸೌಲಭ್ಯ ಸಿಗದೇ ಇದ್ದರಿಂದ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಚಿವರನ್ನು ಟೀಕಿಸಲಾಗುತ್ತಿತ್ತು. ಇಂತಹ ಸಮಯದಲ್ಲಿ ಈ ಮಹಿಳೆಯ ಸಾವಿನಿಂದ ಅವರು ರಾಜೀನಾಮೆ ನೀಡಬೇಕಾಯಿತು.

ಭಾರತೀಯ ಮಹಿಳೆ ಪೋರ್ತುಗಾಲನಲ್ಲಿ ಪ್ರವಾಸಕ್ಕಾಗಿ ಬಂದಿದ್ದಳು. ಮಹಿಳೆಯ ಪ್ರಸುತಿಗಾಗಿ ಪೋರ್ತುಗಾಲನಲ್ಲಿನ ಎಲ್ಲಕ್ಕಿಂತ ದೊಡ್ಡ ಆಸ್ಪತ್ರೆಗೆ ಬಂದಿದ್ದಳು; ಆದರೆ ಆ ಆಸ್ಪತ್ರೆಯಲ್ಲಿನ ಪ್ರಸೂತಿಗೃಹದ ಕೋಣೆಯಲ್ಲಿ ಆಕೆಗೆ ಸ್ಥಳಾವಕಾಶ ಸಿಗಲಿಲ್ಲ. ಆದ್ದರಿಂದ ಆಕೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಲಾಯಿತು. ಮಹಿಳೆಗೆ ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಆಕೆಗೆ ಹೃದಯಾಘಾತ ಆಗಿರುವುದರಿಂದ ಸಾವನ್ನಪ್ಪಿದಳು. ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ.