ಸೋವಿಯತ್ ಯೂನಿಯನ್‌ನ ಮಾಜಿ ರಾಷ್ಟ್ರ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ಹ ದೀರ್ಘ ಕಾಲದ ಅನಾರೋಗ್ಯದಿಂದ ನಿಧನ

ಮಾಸ್ಕೋ (ರಷ್ಯಾ) – ಸೋವಿಯತ್ ಯೂನಿಯನ್‌ನ ಮಾಜಿ ರಾಷ್ಟ್ರ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ಹ ಇವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ ೯೧ ವರ್ಷ ವಯಸ್ಸಾಗಿತ್ತು. ಮಿಖಾಯಿಲ್ ಗೋರ್ಬಚೆವ್ಹ ಇವರು ಕಿಡ್ನಿಯ ಕಾಯಿಲೆಯಿಂದ ತೀವ್ರವಾಗಿ ಅನಾರೋಗ್ಯದಿಂದ ಬಳಲಿದ್ದರು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಷ್ಯಾಯಾದ ರಾಷ್ಟ್ರಅಧ್ಯಕ್ಷ ಬ್ಲಾಡಿಮಿರ್ ಪುತಿನ ಇವರು ಗೋರ್ಬಚೆವ್ಹ ಇವರ ನಿಧನದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ. ಗೋರ್ಬಚೆವ್ಹ ಇವರು ಶೀತಲ ಸಮರದ ಕಾಲದಲ್ಲಿ ತೆಗೆದುಕೊಂಡಿರುವ ನಿಲುವು ಅತ್ಯಂತ ಮಹತ್ವದ್ದಾಗಿತ್ತು; ಆದರೆ ಸೋವಿಯತ ಯೂನಿಯನ್‌ನ ವಿಭಜನೆ ತಡೆಯುವಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ.