ನೀವು ಹಿಂದೂಗಳು ಗೋಮೂತ್ರದಿಂದ ಸ್ನಾನ ಮಾಡುತ್ತೀರಿ, ನೀವು ಭಾರತವನ್ನು ನಾಶ ಮಾಡಿದ್ದೀರಿ ಮತ್ತು ಅಮೆರಿಕಾವನ್ನು ಮಾಡುತ್ತಿದ್ದೀರಿ !

ಅಮೇರಿಕಾದಲ್ಲಿ ಹಿಂದೂ ದ್ವೇಷದ ಹೇಳಿಕೆ ನೀಡುವ ಒಬ್ಬ ವ್ಯಕ್ತಿಯ ವಿಡಿಯೋ ಪ್ರಸಾರ

ಕ್ಯಾಲಿಫೋರ್ನಿಯ (ಅಮೆರಿಕಾ) – ಇಲ್ಲಿಯ ಪ್ರಿಮೋಂಟ ನಗರದಲ್ಲಿ ಹಿಂದೂಗಳನ್ನು ದ್ವೇಷಿಸುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಒಬ್ಬ ವಿದೇಶಿ ಪ್ರಜೆ ಭಾರತಿಯ ವ್ಯಕ್ತಿಗೆ ಅಶ್ಲೀಲ ಬೈಗುಳ ಬೈಯುತ್ತಿರುವುದು ಕಾಣುತ್ತಿದೆ. ಈ ಘಟನೆ ಜೂನ್ ೨೧, ೨೦೨೨ ರಂದು ನಡೆದಿರುವುದೆಂದು ಹೇಳಲಾಗುತ್ತಿದೆ.

೧. ಕೃಷ್ಣನ್ ಜಯರಾಮನ್ ಇವರು ಇಲ್ಲಿಯ ಒಂದು ಉಪಹಾರ ಗೃಹದಲ್ಲಿ ಕುಳಿತಿರುವಾಗ ಒಬ್ಬ ವ್ಯಕ್ತಿ ಬಂದು ಅವರಿಗೆ ಬೈಯುತ್ತಿರುವುದು. ಆತ ‘ನೀವು ಎರಡನೇ ದರ್ಜೆಯ ಜನ ಇಲ್ಲಿಗೆ ಏಕೆ ಬಂದಿದ್ದೀರಿ ? ಇದು ಭಾರತವಲ್ಲ ! ನೀವು ಭಾರತವನ್ನು ನಾಶ ಮಾಡಿದ್ದೀರಿ ಮತ್ತು ಈಗ ಅಮೆರಿಕಾವನ್ನು ನಾಶ ಮಾಡುತ್ತಿದ್ದೀರಿ ಎಂದು ಹೇಳುತ್ತಿದ್ದಾನೆ.

೨. ಕೃಷ್ಣನ್ ಅವರು, ಆತ, ‘ನೀವು ಹಿಂದೂಗಳು ಗೋಮುತ್ರದಿಂದ ಸ್ನಾನ ಮಾಡುತ್ತೀರಿ.’ ಅವನು ನನ್ನ ಮುಖದ ಮೇಲೆ ಡಾಲರ್ ಎಸೆದ ಮತ್ತು ಎಲ್ಲಾ ಕಡೆ ಉಗುಳಿದನು. ಆತ ಹಿಂದಿ ಮತ್ತು ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದನು. ಅವನು ಇಂದಿರಾ ಗಾಂಧಿ ಇವರ ಹೆಸರು ಹೇಳಿ ಬಾಂಬ್ ಎಸೆಯುವ ಬಗ್ಗೆ ಮಾತನಾಡುತ್ತಿದ್ದನು. ಅವನು ಭಾರತೀಯನಾಗಿರುವನು ಮುತ್ತು ಅವನ ಸಂಬಂಧ ಖಲಿಸ್ತಾನವಾದಿಗಳ ಜೊತೆ ಇರುವುದು ಎಂದು ನನಗೆ ಅನಿಸಿತು. ಆ ಸಮಯದಲ್ಲಿ ಪೊಲೀಸರನ್ನು ಕರೆಸಿದ ನಂತರ ಅವನು ಶಾಂತನಾದನು ಎಂದು ಕೃಷ್ಣನ್ ಅವರು ಹೇಳಿದರು.

ಸಂಪಾದಕೀಯ ನಿಲುವು

ಅಮೇರಿಕಾ ಯಾವಾಗಲೂ ಭಾರತದಲ್ಲಿ ತಥಾಕಥಿತವಾಗಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಆರೋಪ ಮಾಡುತ್ತದೆ; ಆದರೆ ತನ್ನದೇ ದೇಶದಲ್ಲಿ ಅನೇಕ ಶತಕಗಳಿಂದ ವರ್ಣ ದ್ವೇಷದ ಘಟನೆ ಘಟಿಸುತ್ತಾ ಬಂದಿದ್ದರು ಅದರ ಕಡೆಗೆ ಕಣ್ಣು ಮುಚ್ಚಿ ಕುಳಿತಿದೆ !