ಕೆಲವೊಂದು ಸಲ ದೇವಸ್ಥಾನದಲ್ಲೇ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸಮಸ್ಯೆ ಆಗುತ್ತಿದ್ದರೆ ಅದನ್ನು ಮುಚ್ಚುವುದೇ ಸೂಕ್ತ !

  • ದೇವಸ್ಥಾನದ ಪೂಜೆಯ ವಿಷಯದಲ್ಲಿ ಎರಡು ಗುಂಪುಗಳ ನಡುವಿನ ವಾದದ ಕುರಿತು ಮದ್ರಾಸ ಉಚ್ಚ ನ್ಯಾಯಾಲಯದ ಹೇಳಿಕೆ !

  • ಸಾಮಾಜಿಕ ಮಾಧ್ಯಮದಿಂದ ನ್ಯಾಯಾಲಯದ ಹೇಳಿಕೆಗೆ ವಿರೋಧ ವ್ಯಕ್ತ !

ಚೆನ್ನೈ (ತಮಿಳುನಾಡು) – ಭಕ್ತರು ದೇವಸ್ಥಾನದಲ್ಲಿ ಶಾಂತಿಯನ್ನು ಹುಡುಕಲು ಹೋಗುತ್ತಿರುತ್ತಾರೆ; ಆದರೆ ದೇವಸ್ಥಾನವೇ ಈಗ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸಮಸ್ಯೆಯಾಗುತ್ತಿದೆ. ಅದರ ಮುಖ್ಯ ಉದ್ದೇಶವೇ ನಷ್ಟವಾಗಿದೆ. ಇಂತಹ ಪ್ರಕರಣದಲ್ಲಿ ದೇವಸ್ಥಾನಗಳನ್ನು ಮುಚ್ಚುವುದೇ ಸೂಕ್ತ ಮಾರ್ಗವಾಗಿದೆ. ಇದರಿಂದ ಈ ಪ್ರದೇಶದಲ್ಲಿ ಶಾಂತಿ ಮತ್ತು ಸಾಮಾನ್ಯ ಸ್ಥಿತಿ ನಿರ್ಮಾಣವಾಗಬಹುದು, ಎಂದು ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆನಂದ ಇವರು ಒಂದು ದೇವಸ್ಥಾನದ ಪೂಜೆ ಮಾಡುವ ವಿಷಯದ ಕುರಿತು ಎರಡು ಗುಂಪುಗಳ ನಡುವೆ ಇದ್ದ ವಾದದ ಕುರಿತ ಒಂದು ಪ್ರಕರಣದ ಆಲಿಕೆಯ ಸಂದರ್ಭದಲ್ಲಿ ತೀರ್ಪು ನೀಡಿದರು. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ವಿರೋಧಿಸಲಾಗುತ್ತಿದೆ.

೧. ನ್ಯಾಯಮೂರ್ತಿ ಆನಂದ ಇವರು ತಮ್ಮ ಮಾತು ಮುಂದುವರಿಸುತ್ತಾ, ವ್ಯಕ್ತಿಯ ಅಹಂಕಾರವನ್ನು ಕಡಿಮೆ ಮಾಡಲು ದೇವಸ್ಥಾನದಲ್ಲಿ ವಾತಾವರಣ ನಿರ್ಮಾಣಮಾಡಬೇಕು; ಆದರೆ ಇದರ ವಿರುದ್ಧ ದೇವಸ್ಥಾನವು ಜನರ ಅಹಂಕಾರದಿಂದ ವಿವಾದದ ಕೇಂದ್ರವಾಗುತ್ತಿದೆ ಮತ್ತು ದೇವರನ್ನು ಬದಿಗೆ ಸರಿಸುತ್ತಿದ್ದಾರೆ.

೨. ಈ ಪ್ರಕರಣ ಒಂದು ಕುಟುಂಬಕ್ಕೆ ಸಂಬಂಧಿಸಿದೆ. ಅರ್ಜಿದಾರನು ತನ್ನ ಕುಟುಂಬದ ದೇವತೆಯ ದೇವಸ್ಥಾನದಲ್ಲಿ ಪೂಜೆ ಮಾಡಲು ಪೊಲೀಸ ಸಂರಕ್ಷಣೆ ಸಿಗಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಪೂಜೆ ಮಾಡುವ ಬಗ್ಗೆ ಎರಡು ಗುಂಪುಗಳ ಮಧ್ಯೆ ದಾಂದಲೆ ನಡೆಯುತ್ತಿದ್ದರಿಂದ ಈ ರೀತಿ ಮನವಿ ಮಾಡಲಾಗಿತ್ತು.

೩. ಈ ಬಗ್ಗೆ ರಾಜ್ಯ ಸರಕಾರದ ನ್ಯಾಯವಾದಿ ನ್ಯಾಯಾಲಯಕ್ಕೆ, ಎರಡು ಗುಂಪುಗಳ ನಡುವೆ ನಡೆಯುವ ದಾಂದಲೆಯ ಬಳಿಕ ಸ್ಥಿತಿ ಸಾಮಾನ್ಯವಾಗುವ ವರೆಗೆ ದೇವಸ್ಥಾನವನ್ನು ಮುಚ್ಚಲಾಗಿದೆ ಎಂದು ಹೇಳಿದರು. ಇದಕ್ಕೆ ನ್ಯಾಯಾಲಯವು, ಇಂತಹ ಸ್ಥಿತಿಯಲ್ಲಿ ದೇವಸ್ಥಾನದ ಆಡಳಿತವನ್ನು ಬೇರೆ ಸೂಕ್ತವಾದ ವ್ಯಕ್ತಿಯ ಕಡೆ ಒಪ್ಪಿಸಬೇಕು. ಇದರಿಂದ ಎರಡೂ ಗುಂಪು ಸ್ವತಃ ತಮ್ಮನ್ನು ಶ್ರೇಷ್ಠವೆಂದು ತಿಳಿಯುವುದಿಲ್ಲ ಎಂದು ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಿಂದ ಟೀಕೆ

ಮಸೀದಿ ಮುಚ್ಚುವಂತಹ ತೀರ್ಪು ನೀಡಲಾಗುತ್ತದೆಯೇ ?

ನ್ಯಾಯಾಲಯದ ತೀರ್ಪಿನ ಬಗ್ಗೆ ಸಾಮಾಜಿಕ ಮಾಧ್ಯಮದಿಂದ ವಿವಿಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಟೋಟಲ ವೋಕ’ (Total Woke) ಹೆಸರಿನ ಟ್ವಿಟರ ಖಾತೆಯಲ್ಲಿ ‘ಎಂದಾದರೂ ಯಾವುದಾದರೂ ಮುಸಲ್ಮಾನ ನ್ಯಾಯಾಧೀಶರನ್ನು ಈ ರೀತಿ ಹೇಳುತ್ತಿರುವುದನ್ನು ಕೇಳಲಾಗಿದೆಯೇ, ‘ಪ್ರತಿ ಶುಕ್ರವಾರ ಮಸೀದಿಯಿಂದ ಕಲ್ಲು ತೂರಾಟ ಆಗುತ್ತದೆ’, ‘ಅನೇಕ ಗಂಟೆಗಳ ಕಾಲ ಧ್ವನಿವರ್ಧಕವನ್ನು ಉಪಯೋಗಿಸಲಾಗುತ್ತದೆ’, ‘ಅಲ್ಲಿ ಹೋಗುವುದರಿಂದ ಜನರು ಕಟ್ಟರವಾದಿಗಳಾಗುತ್ತಾರೆ’, ‘ಅಲ್ಲಿ ಗಲಭೆಯ ಷಡ್ಯಂತ್ರ್ಯ ನಡೆಯುತ್ತದೆ’, ‘ರಸ್ತೆ ಬಂದ್ ಮಾಡಲಾಗುತ್ತದೆ’, ‘ಚಿಕ್ಕ ಮಕ್ಕಳ ಲೈಂಗಿಕ ಶೋಷಣೆ ಮಾಡಲಾಗುತ್ತದೆ’ ಮತ್ತು ‘ಮಹಿಳೆಯರಿಗೆ ಪ್ರವೇಶ ನೀಡಲಾಗುವುದಿಲ್ಲ’, ಈ ಎಲ್ಲ ಕಾರಣಗಳಿಂದ ಮಸೀದಿಯನ್ನು ಮುಚ್ಚಬೇಕು.

ನ್ಯಾಯಾಲಯವು ಕೆಲವು ಸಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ !

explorer Pratss ಹೆಸರಿನ ಟ್ವಿಟರ ಖಾತೆಯಲ್ಲಿ, ನ್ಯಾಯಾಲಯವು ನ್ಯಾಯದ ಸ್ಥಾನವಾಗಿದೆ; ಆದರೆ ದುರಾದೃಷ್ಟಕರದಿಂದ ಹೆಚ್ಚಿನ ಸಲ ಅದು ಅನ್ಯಾಯದ ಕಾರಣವಾಗುತ್ತದೆ ಮತ್ತು ಅದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗೆ ಜನ್ಮ ನೀಡುತ್ತದೆ. ಎಂದು ಹೇಳಲಾಗಿದೆ.