ತಮಿಳುನಾಡಿನ ಕ್ರೈಸ್ತ ಶಾಲೆಯ ಶಿಕ್ಷಕ ನಡೆಸಿದ ಹಲ್ಲೆಯಲ್ಲಿ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯ

ದೂರು ನೀಡಲು ಹೋದ ಪೋಷಕರಿಗೆ ಶಾಲೆ ಬಿಡುವಂತೆ ಪ್ರಾಚಾರ್ಯರ ಖೇದಕರ ಸಲಹೆ !

ಚೆನ್ನೈ – ತಮಿಳುನಾಡಿನ ತಿರುವಲ್ಲೂರ ಜಿಲ್ಲೆಯಲ್ಲಿರುವ ತಿರುವಲಂಗಡೂವಿನ ಸೆಂಟ ಜೊಸೆಫ ಶಾಲೆಯ ಶಿಕ್ಷಕನು ಓರ್ವ ೭ ವರ್ಷದ ವಿದ್ಯಾರ್ಥಿಗೆ ಕೋಲಿನಿಂದ ಹಲ್ಲೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಯಲ್ಲಿ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಯಿತು. ಹೆದರಿದ ಪೋಷಕರು ಅವನನ್ನು ಆಸ್ಪತ್ರೆಗೆ ಭರ್ತಿ ಮಾಡಲು ಹೋಗುತ್ತಿರುವಾಗಲೇ ಅವನು ವಾಂತಿ ಮಾಡಿಕೊಂಡನು ಮತ್ತು ಅವನ ಪ್ರಜ್ಞೆ ತಪ್ಪಿತು. ‘ಈ ವಿದ್ಯಾರ್ಥಿಯು ಎರಡನೇಯ ತರಗತಿಯಲ್ಲಿ ಕಲಿಯುತ್ತಿದ್ದು, ಅವನು ಗದ್ದಲ ಮಾಡಿದ್ದರಿಂದ ಅವನಿಗೆ ಥಳಿಸಲಾಯಿತು’, ಎಂದು ಶಿಕ್ಷಕನು ಹೇಳಿದನು.

ಈ ಪ್ರಕರಣದಲ್ಲಿ ದೂರು ದಾಖಲಿಸಲು ಪೋಷಕರು ಶಾಲೆಗೆ ಹೋದಾಗ ಶಾಲೆಯ ವ್ಯವಸ್ಥಾಪಕ ಮಂಡಳಿಯು ಅವರಿಗೆ ಉಡಾಫೆಯ ಉತ್ತರ ನೀಡಿತು. ಪ್ರಾಂಶುಪಾಲರು ಅವರಿಗೆ ದೂರು ನೀಡುವ ಬದಲು ‘ಶಾಲೆ ಬಿಡುವ ದಾಖಲಾತಿಗಳನ್ನು ತೆಗೆದುಕೊಳ್ಳಿ’ವಂತೆ ಹೇಳಿ ಅವರನ್ನು ಅಪ್ರತ್ಯಕ್ಷವಾಗಿ ‘ತೊಲಗಿರಿ !’, ಎಂದು ಸಲಹೆ ನೀಡಿದರು. ಪೋಷಕರು ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

ಈ ಪ್ರಕರಣದಲ್ಲಿ ಕ್ರೈಸ್ತ ಶಾಲೆಯ ಮೇಲೆ ಆರೋಪ ಬರುತ್ತಿರುವುದರಿಂದ ಮುಖ್ಯ ವಾಹಿನಿಯ ಹಿಂದುದ್ವೇಷಿ ಪ್ರಸಾರಮಾಧ್ಯಮಗಳು ಸುಮ್ಮನಿವೆ. ಇದರ ಬದಲಾಗಿ ರಾಷ್ಟ್ರೀಯ ಸ್ವಯಂ ಸಂಘ ಅಥವಾ ಇತರ ಒಂದು ಹಿಂದೂ ಶಾಲೆಯಲ್ಲಿ ಇಂತಹ ಘಟನೆ ನಡೆದಿದ್ದರೆ, ಇಷ್ಟರ ವರೆಗೆ ಆಕಾಶ-ಪಾತಾಳ ಒಂದು ಮಾಡಿ ಹಿಂದೂಗಳನ್ನು ಹಿಗ್ಗಾ ಮುಗ್ಗಾ ಜಾಡಿಸುತ್ತಿದ್ದರು, ಎನ್ನುವುದನ್ನು ತಿಳಿಯಿರಿ !

ರಾಜ್ಯದಲ್ಲಿ ಹಿಂದೂದ್ವೇಷಿ ದ್ರಮುಕ(ದ್ರವಿಡ ಮುನ್ನೇತ್ರ ಕಳಘಮ್ ಎಂದರೆ ದ್ರವಿಡ ಪ್ರಗತಿ ಸಂಘ) ಪಕ್ಷದ ಸರಕಾರ ಇರುವಾಗ ಈ ಪ್ರಕರಣದಲ್ಲಿ ಕ್ರೈಸ್ತ ಶಾಲೆಯ ಮೇಲೆ ಕ್ರಮ ಜರುಗಿಸುವುದು ಸಾಧ್ಯವಿಲ್ಲ ಎನ್ನುವುದೂ ಅಷ್ಟೇ ಸತ್ಯ !