ಜಿಹಾದಿ ಪಾಕಿಸ್ತಾನದಲ್ಲಿ ಹಿಂದೂಗಳ ದಯನೀಯಸ್ಥಿತಿ !
ಮತಾಂತರ ಮತ್ತು ಹಿಂದೂ ಹುಡುಗಿಯರ ಅಪಹರಣದಲ್ಲಿಯೂ ಅತ್ಯಧಿಕ ಏರಿಕೆ !
ಇಸ್ಲಾಮಾಬಾದ (ಪಾಕಿಸ್ತಾನ) – ಜಿಹಾದಿ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಒಂದೆಡೆ ಅಲ್ಲಿಯ ಹಿಂದೂಗಳ ಮತಾಂತರ, ಅಪಹರಣ, ಹತ್ಯೆ ಇವುಗಳಲ್ಲಿ ಹೆಚ್ಚಳವಾಗುತ್ತಿದೆ. ಇನ್ನೊಂದೆಡೆ ಅಲ್ಲಿಯ ಈಶನಿಂದನೆಯ ಕಾನೂನಿನ ದುರುಪಯೋಗ ಪಡೆಸಿಕೊಂಡು ಹಿಂದೂಗಳ ಮೇಲಿನ ತನಿಖೆ ಹೆಚ್ಚಾಗುತ್ತಿದೆ. ಇಸ್ಲಾಂನ ತಥಾಕಥಿತ ಅಪಮಾನ ಮಾಡಿರುವ ಬಗ್ಗೆ ಕೇವಲ ೨೦೨೧ ವರ್ಷದಲ್ಲಿ ೫೮೫ ಜನರನ್ನು ಬಂಧಿಸಲಾಗಿತ್ತು, ಎಂಬ ಮಾಹಿತಿ ಬಹಿರಂಗವಾಗಿದೆ.
Atrocities on Hindus, Sikhs in Pakistan: Will CAA help ?https://t.co/CPgCzZThOO
— Rajat Sharma (@RajatSharmaLive) August 23, 2022
ಕೆಲವು ದಿನಗಳ ಹಿಂದೆ ಹೈದರಾಬಾದಿನ ಅಶೋಕ ಕುಮಾರ ಹೆಸರಿನ ಹಿಂದೂವಿನ ಮೇಲೆ ಅವರು ಇಸ್ಲಾಂನ ಅಪಮಾನ ಮಾಡಿದ್ದಾರೆಂದು ಅಪಾದನೆ ಹೊರಿಸಿ ಪೊಲೀಸರು ಅವರನ್ನು ಬಂಧಿಸಿದರು. ಅದಕ್ಕಿಂತ ಮೊದಲು ಮುಸಲ್ಮಾನರ ಗುಂಪು ಅವರ ಮನೆಯ ಮೇಲೆ ದಾಳಿ ಮಾಡಿತ್ತು. ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗದ ಹೇಳಿಕೆಯನುಸಾರ ಬಂಧಿಸಿರುವ ೫೮೫ ಜನರಲ್ಲಿ ಹಿಂದೂ, ಕ್ರೈಸ್ತ ಮತ್ತು ಮುಸಲ್ಮಾನದ ಅಹಮದೀಯ ಜಾತಿಯ ಜನರ ಪ್ರಮುಖ ಸಮಾವೇಶವಿದೆ. ಹಾಗೆಯೇ ಈಶ ನಿಂದನೆಯ ಆರೋಪ ಮಾಡುತ್ತಾ ಕಳೆದ ವರ್ಷ ೩ ಜನರ ಹತ್ಯೆ ಮಾಡಲಾಯಿತು.
ಹಿಂದೂ ಹುಡುಗಿಯರ ಅಪಹರಣ ಮತ್ತು ಮತಾಂತರ ಈ ಪ್ರಕರಣದಲ್ಲಿಯೂ ಶರವೇಗದಲ್ಲಿ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಹಿಂದೂ ಹುಡುಗಿಯರ ಅಪಹರಣ ಮಾಡಿ ಅವರಿಗೆ ಒತ್ತಡ ಹಾಕಿ ‘ಮುಸಲ್ಮಾನ ಯುವಕನೊಂದಿಗೆ ಪ್ರೇಮ ವಿವಾಹ ಮಾಡಿಸಿದ್ದಾರೆ’, ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡುವಂತೆ ಮಾಡಿ ಅವರ ಮತಾಂತರಗೊಳಿಸುವ ಪ್ರಕರಣದಲ್ಲಿ ಹೆಚ್ಚಳವಾಗಿದೆ.
ಪಂಜಾಬ ಪ್ರಾಂತ್ಯದಲ್ಲಿ ಬಲವಂತ ಮತಾಂತರದ ಪ್ರಕರಣದಲ್ಲಿ ಮೂರು ಪಟ್ಟು ಹೆಚ್ಚಳ !ಪಂಜಾಬ ಪ್ರಾಂತ್ಯದ ಹಿಂದೂ ಅಥವಾ ಕ್ರೈಸ್ತರ ಬಲವಂತವಾಗಿ ಮತಾಂತರದ ಪ್ರಕರಣಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ೨೦೨೦ ರಲ್ಲಿ ಮತಾಂತರದ ೧೩ ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ೨೦೨೧ ರಲ್ಲಿ ಇಂತಹ ೩೬ ಪ್ರಕರಣಗಳು ಜರುಗಿದವು. ಸಿಂಧ ಪ್ರಾಂತ್ಯದ ಸ್ಥಿತಿಯೇನೂ ಹೊರತಾಗಿಲ್ಲ. |
ಸಂಪಾದಕೀಯ ನಿಲುವು
|