ಪಾಕಿಸ್ತಾನದಲ್ಲಿ ಹಿಂದೂ ನಾಗರಿಕರ ಮೇಲೆ ಈಶ್ವರ ನಿಂದೆಯ ಸುಳ್ಳು ಆರೋಪವನ್ನು ಹೊರಿಸಿ ಅವರನ್ನು ಹತ್ಯೆಗೈಯ್ಯುವ ಪ್ರಯತ್ನ!

ಹೈದರಾಬಾದ(ಪಾಕಿಸ್ತಾನ) – ಕುರಾನ ವಿಷಯದಲ್ಲಿ ತಥಾಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾರಣದಿಂದ ಅಶೋಕ ಕುಮಾರ ಎಂಬ ಸ್ವಚ್ಛತಾ ಕಾರ್ಮಿಕನ ವಿರುದ್ಧ ಈಶ್ವರ ನಿಂದೆಯ ದೂರನ್ನು ದಾಖಲಿಸಲಾಗಿದೆ. ಅಶೋಕ ಕುಮಾರ ಇವರ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯ ಬಳಿಕ ಮುಸಲ್ಮಾನರು ಅವರ ಮನೆಯ ಹೊರಗೆ ಒಟ್ಟುಗೂಡಿ ಅವರ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದರು; ಆದರೆ ಅದೇ ಸಮಯದಲ್ಲಿ ಪೊಲೀಸರು ಘಟನಾಸ್ಥಳಕ್ಕೆ ತಲುಪಿದ್ದರಿಂದ ಕುಮಾರ ಸ್ವಲ್ಪದರಲ್ಲಿ ಬಚಾವಾದರು. ಗುಂಪು ಪೊಲೀಸರಲ್ಲಿ ‘ಅಶೋಕರನ್ನು ನಮ್ಮ ವಶಕ್ಕೆ ಕೊಡಬೇಕು’, ಎಂದು ಕೋರಿದರು. ಇದೇ ಸಮಯದಲ್ಲಿ ಗುಂಪನ್ನು ಚದುರಿಸಲು ಪೊಲೀಸರಿಗೆ ಲಾಠಿಚಾರ್ಜ ಮಾಡಬೇಕಾಯಿತು. ಸಧ್ಯಕ್ಕೆ ಅಶೋಕ ಕುಮಾರ ಇವರನ್ನು ಹೈದರಾಬಾದಿನ ರಾಬಿಯಾ ಸೆಂಟರನಲ್ಲಿ ಇಡಲಾಗಿದೆ. ಅಶೋಕ ಕುಮಾರ ಇವರೊಂದಿಗೆ ನಡೆದಿರುವ ಜಗಳದ ಬಳಿಕ ಒಬ್ಬ ಸ್ಥಳೀಯ ರಹಿವಾಸಿಯು ಅವರ ವಿರುದ್ಧ ದೂರು ದಾಖಲಿಸಿದ್ದನು, ಸ್ಥಳೀಯ ರಹಿವಾಸಿಯೊಂದಿಗೆ ವೈಯಕ್ತಿಕ ಜಗಳದ ಕಾರಣದಿಂದ ಅಶೋಕ ಕುಮಾರ ಇವರನ್ನು ಗುರಿ ಮಾಡಿರುವುದಾಗಿ ಪೊಲೀಸರು ತಿಳಿಸಿದರು.

ಪಾಕಿಸ್ತಾನದಲ್ಲಿ ಈಶ್ವರ ನಿಂದೆಯ ಕಾನೂನು ಕಠೋರವಾಗಿದೆ. ಈ ಕಾನೂನಿನ ಅಡಿಯಲ್ಲಿ ಗಲ್ಲು ಶಿಕ್ಷೆ ವಿಧಿಸಬಹುದಾಗಿದೆ. ಈಶ್ವರ ನಿಂದೆಯ ಆರೋಪದ ಕಾರಣದಿಂದ ಅನೇಕರನ್ನು ಹತ್ಯೆ ಮಾಡಲಾಗಿದೆ. ಡಿಸೆಂಬರ ೨೦೨೧ ರಲ್ಲಿ ಒಂದು ಕೈಗಾರಿಕೆಯ ಶ್ರೀಲಂಕೆಯ ನಾಗರಿಕನಾಗಿರುವ ಮಾಲೀಕನನ್ನು ಈಶ್ವರ ನಿಂದೆಯ ಆರೋಪದ ಕಾರಣದಿಂದ ಪಾಕಿಸ್ತಾನಿ ಗುಂಪು ಹತ್ಯೆ ಮಾಡಿ ಸುಟ್ಟು ಹಾಕಿತ್ತು.

ಸಂಪಾದಕೀಯ ನಿಲುವು

ಭಾರತದಲ್ಲಿ ಪ್ರತಿದಿನ ಹಿಂದೂಗಳ ದೇವತೆಗಳ ಅಪಮಾನವಾಗುತ್ತಿರುವಾಗ ಆರೋಪಿಗೆ ಕಠಿಣ ಶಿಕ್ಷೆಯನ್ನು ನೀಡುವ ಯಾವುದೇ ಕಾನೂನು ಇಲ್ಲ!