ಪುರುಷರು ಮತ್ತು ಮಹಿಳೆಯರು ಉಪಯೋಗಿಸುವ ಶೌಚಾಲಯದ ಹೊರಗಿನ ಭಾಗದ ಛಾಯಾಚಿತ್ರದಲ್ಲಿ ಮುಸಲ್ಮಾನ ಪುರುಷ ಮತ್ತು ಹಿಂದೂ ಮಹಿಳೆಯ ಉಪಯೋಗ

  • ದೆಹಲಿ ವಿಮಾನನಿಲ್ದಾಣ ಶೌಚಾಲಯದ ಹೊರಗೆ ಛಾಯಾಚಿತ್ರದ ಮೂಲಕ ಲವ್ ಜಿಹಾದಗೆ ಪ್ರಚೋದನೆ !

  • ‘ಇಸ್ಕಾನ’ ವಕ್ತಾರ ರಾಧಾರಮಣ ದಾಸ ಇವರ ಆಕ್ಷೇಪ !

ನವ ದೆಹಲಿ – ದೆಹಲಿಯ ವಿಮಾನನಿಲ್ದಾಣದಲ್ಲಿರುವ ಶೌಚಾಲಯದ ಹೊರಗೆ ಪುರುಷ ಮತ್ತು ಮಹಿಳೆಯರ ಶೌಚಾಲಯವನ್ನು ತೋರಿಸಲು ಒಬ್ಬ ಪುರುಷನ ಮತ್ತು ಮಹಿಳೆಯ ಛಾಯಾಚಿತ್ರವನ್ನು ಹಚ್ಚಲಾಗಿದೆ. ಇದರಲ್ಲಿ ಪುರುಷರ ಛಾಯಾಚಿತ್ರದಲ್ಲಿ ಗೋಲಾಕಾರದ ಟೊಪ್ಪಿಗೆಯನ್ನು ಹಾಕಿರುವ ಮುಸಲ್ಮಾನ ಯುವಕನ ಚಿತ್ರ ಹಾಗೂ ಮಹಿಳೆಯ ಛಾಯಾಚಿತ್ರದಲ್ಲಿ ಒಬ್ಬ ಹಿಂದೂ ಯುವತಿಯದ್ದಾಗಿದೆ.

ಇದಕ್ಕೆ ‘ಇಸ್ಕಾನ’ ವಕ್ತಾರ ರಾಧಾರಮಣ ದಾಸ ಇವರು ಆಕ್ಷೇಪಿಸಿ ಟ್ವೀಟ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಟ್ವೀಟ್ ನಲ್ಲಿ, ‘ನೋಡಿ ಅವರ ಪ್ರಚಾರ ವ್ಯವಸ್ಥೆ ಎಷ್ಟು ಶಕ್ತಿಶಾಲಿಯಾಗಿದೆ. ತಥಾಕಥಿತ ಧಾರ್ಮಿಕ ಸೌಹಾರ್ದಕ್ಕಾಗಿ ಏನು ಮಾಡಿದ್ದಾರೆ ? ಇದು ಜಿಹಾದ ಪ್ರಚಾರದ ಅನುಮತಿಯಾಗಿದೆಯೇ ?’, ಎಂದು ಪ್ರಶ್ನಿಸಿದ್ದಾರೆ. ಅವರು ಈ ವಿಷಯದಲ್ಲಿ ಕೇಂದ್ರೀಯ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇವರಿಗೆ ಟ್ವೀಟ ಮೂಖಾಂತರ ತಿಳಿಸಿದ್ದಾರೆ.