ಕೇರಳದ ಶಾಲೆಗಳಲ್ಲಿ ಗುಜರಾತಿನ ದಂಗೆ ಹಾಗೂ ಮೊಘಲರ ಕಾಲದ ವಿಷಯದ ಬಗ್ಗೆ ಪುನಃ ಕಲಿಸಬೇಕಾಗಿ ಶಿಫಾರಸ್ಸು !

ಗುಜರಾತ ದಂಗೆಗಳು ಹಾಗೂ ಮೊಘಲರ ಕಾಲದ ಬಗೆಗಿನ ವಿಷಯವನ್ನು ಎನ್‌. ಸಿ. ಈ. ಆರ್‌. ಟಿ ಪಠ್ಯಕ್ರಮದಲ್ಲಿ ಪುನಃ ಕಲಿಸಲಿದೆ

ತಿರುವನಂತಪುರಮ್‌ (ಕೇರಳ) – ಕೇರಳ ಸರಕಾರವು ರಾಜ್ಯದಲ್ಲಿರುವ ಶಾಲೆಗಳಲ್ಲಿ ೨೦೦೨ರಲ್ಲಿ ನಡೆದ ಗುಜರಾತ ದಂಗೆಗಳು ಹಾಗೂ ಮೊಘಲರ ಕಾಲದ ಬಗೆಗಿನ ವಿಷಯವನ್ನು ಪಠ್ಯಕ್ರಮದಲ್ಲಿ ಪುನಃ ಕಲಿಸುವ ಸಾಧ್ಯತೆಯಿದೆ. ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಪರಿಷತ್ತು’ (‘ಎನ್‌. ಸಿ. ಈ. ಆರ್‌. ಟಿ’ಯು) ೧೨ನೇ ತರಗತಿಯ ಪಠ್ಯಪುಸ್ತಕದಿಂದ ಈ ಭಾಗವನ್ನು ತೆಗೆದುಹಾಕಿತ್ತು, ಎಂಬ ವಾರ್ತೆಯನ್ನು ‘ದ ಹಿಂದೂ’ ಪ್ರಕಟಿಸಿತ್ತು.

ಪಿನಾರಾಯ್ ವಿಜಯನ್ , ಕೇರಳಾದ ಮುಖ್ಯಮಂತ್ರಿ

‘ರಾಷ್ಟ್ರೀಯ ಶೈಕ್ಷಣಿಕ ಧೋರಣೆ’ಯ ಅನ್ವಯ ‘ಎನ್‌. ಸಿ. ಈ. ಆರ್‌. ಟಿ’ಯು ೬ನೇ ಹಾಗೂ ೧೨ನೇ ತರಗತಿಯ ವರೆಗಿನ ಪಠ್ಯಕ್ರಮದಲ್ಲಿ ತರ್ಕಬದ್ಧವಾದ ಬದಲಾವಣೆಗಳನ್ನು ಮಾಡಿತ್ತು. ಇದರ ಅನ್ವಯ ೧೨ನೇ ತರಗತಿಯ ರಾಜ್ಯಶಾಸ್ತ್ರದ ಪಠ್ಯಪುಸ್ತಕದಲ್ಲಿದ್ದ ‘ಭಾರತೀಯ ರಾಜಕಾರಣದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ಈ ಪಾಠದಲ್ಲಿನ ಗುಜರಾತ ದಂಗೆಯ ಸಂದರ್ಭದಲ್ಲಿನ ಭಾಗ, ದಂಗೆಯ ಘಟನೆಯ ಬಗ್ಗೆ ರಾಷ್ಟ್ರೀಯ ಮಾನವಾಧಿಕಾರ ಆಯೋಗದ ವರದಿಯಲ್ಲಿ ಮಾಡಲಾದ ಉಲ್ಲೇಖ, ಆಗಿನ ಪ್ರಧಾನಮಂತ್ರಿ ಅಟಲಬಿಹಾರಿ ವಾಜಪೇಯಿಯವರ ‘ರಾಜಧರ್ಮ’ದ ವಿಷಯದಲ್ಲಿನ ಟಿಪ್ಪಣೆ, ಹಾಗೆಯೇ ಈ ದಂಗೆಯ ಬಗ್ಗೆ ವೃತ್ತಪತ್ರಿಕೆಗಳಲ್ಲಿನ ವಾರ್ತೆಗಳ ಛಾಯಾಚಿತ್ರ ಎಲ್ಲವುಗಳನ್ನೂ ತೆಗೆದುಹಾಕಿತ್ತು.

ಅನಂತರ ಅದರ ಮೇಲೆ ಟೀಕಿಸಲಾಯಿತು. ಈಗ ಕೇರಳ ‘ರಾಜ್ಯ ಕೌನ್ಸಿಲ್‌ ಆಫ್ ಎಜ್ಯುಕೇಶನಲ್‌ ರಿಸರ್ಚ ಎಂಡ್‌ ಟ್ರೇನಿಂಗ್‌’ (‘ಎನ್‌. ಸಿ. ಈ. ಆರ್‌. ಟಿ’ಯು) ಈ ಭಾಗವನ್ನು ರಾಜ್ಯದಲ್ಲಿನ ವಿದ್ಯಾರ್ಥಿಗಳಿಗಾಗಿ ಶಾಶ್ವತವಾಗಿರಿಸಿ’ ಎಂದು ಸಾಮಾನ್ಯ ಶಿಕ್ಷಣ ವಿಭಾಗದ ಬಳಿ ಶಿಫಾರಸ್ಸು ಮಾಡಿದೆ.

ಸಂಪಾದಕೀಯ ನಿಲುವು

ವಿದ್ಯಾರ್ಥಿಗಳಿಗೆ ‘ಗುಜರಾತ ದಂಗೆ’ಗಳ ಬಗ್ಗೆ ಮಾಹಿತಿ ನೀಡುವ ಕೇರಳದಲ್ಲಿನ ಸಾಮ್ಯವಾದಿ ಸರಕಾರವು ಇದೇ ದಂಗೆಗಳ ಹಿಂದಿನ ಮತಾಂಧ ಮುಸಲ್ಮಾನರು ಹಿಂದೂಗಳನ್ನು ಸುಟ್ಟು ಕೊಂದಿರುವ ’ಗೋಧ್ರಾ ಘಟನೆ’ಯ ಮಾಹಿತಿಯನ್ನು ನೀಡಿದೆಯೇ ? ಇದರಿಂದ ಕೇರಳ ಸರಕಾರದ ಪರಾಕಾಷ್ಠೆಯ ಹಿಂದೂದ್ವೇಷ ಕಂಡುಬರುತ್ತದೆ ! ಕೇಂದ್ರ ಸರಕಾರವು ಇಂತಹ ಹಿಂದೂದ್ವೇಷವನ್ನು ಕಲಿಸುವ ರಾಜ್ಯಸರಕಾರವನ್ನು ವಿಸರ್ಜಿಸಬೇಕು !