‘ಲಾಲಸಿಂಹ ಚಡ್ಡಾ’ ಚಲನಚಿತ್ರದಿಂದ ಭಾರತೀಯ ಸೈನ್ಯ ಮತ್ತು ಸಿಖ್ಖರ ಅಪಮಾನ ! – ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾಂಟಿ ಪನೆಸರ

(ಬಲಬದಿಗೆ) ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾಂಟಿ ಪನೆಸರ

ಚಲನಚಿತ್ರ ಬಹಿಷ್ಕರಿಸುವಂತೆ ಮಾಂಟಿ ಪನೆಸರ ಇವರ ಕರೆ !

ಲಂಡನ (ಬ್ರಿಟನ) – ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾಂಟಿ ಪನೆಸರ ಇವರು ನಟ ಆಮೀರ ಖಾನರ ಅಗಸ್ಟ ೧೧ ರಂದು ಬಿಡುಗಡೆಗೊಂಡಿರುವ ‘ಲಾಲಸಿಂಹ ಚಡ್ಡಾ’ ಚಲನಚಿತ್ರವನ್ನು ಟೀಕಿಸಿದ್ದಾರೆ. ಈ ಚಲನಚಿತ್ರದಿಂದ ಭಾರತೀಯ ಸೈನ್ಯ ಮತ್ತು ಸಿಖ್ಖರ ಅಪಮಾನಿಸಲಾಗಿದೆಯೆಂದು ಅವರು ಹೇಳಿದ್ದಾರೆ. ಅಲ್ಲದೇ ಈ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಈ ಚಲನಚಿತ್ರದ ಪ್ರದರ್ಶನದ ಮೊದಲೇ ಭಾರತದಲ್ಲಿ ಇದನ್ನು ಬಹಿಷ್ಕಾರ ಹಾಕಲು ಕರೆ ನೀಡಲಾಗುತ್ತಿದೆ. ಲಾಲಸಿಂಹ ಚಡ್ಡಾ ಚಲನಚಿತ್ರದ ಕಥೆ ೧೯೯೪ ರಲ್ಲಿ ಬಿಡುಗಡೆಗೊಂಡಿರುವ ‘ಫಾರೆಸ್ಟ ಗಂಪ್’ ಈ ಹಾಲಿವುಡ್ ಚಲನಚಿತ್ರವನ್ನು ಆಧರಿಸಿದೆ. ‘ಫಾರೆಸ್ಟ ಗಂಪ್’ ಮಂದಬುದ್ಧಿಯಿರುವ ವ್ಯಕ್ತಿಯ ಜೀವನಾಧಾರಿತ ಚಲನಚಿತ್ರವಾಗಿದೆ.
ಮಾಂಟಿ ಪನೆಸರ ಇವರು ಟ್ವೀಟ ಮಾಡಿ, ‘ಫಾರೆಸ್ಟ ಗಂಪ್’ ಚಲನಚಿತ್ರದ ವ್ಯಕ್ತಿ ಅಮೇರಿಕೆಯ ಸೈನ್ಯದಲ್ಲಿ ಭರ್ತಿಯಾಗುತ್ತಾನೆ; ಕಾರಣ ಅಮೇರಿಕಾ ಮತ್ತು ವ್ಹಿಯೆಟ್ನಾಮ್ ಯುದ್ಧದಲ್ಲಿ ಆವಶ್ಯಕತೆಯನ್ನು ಪೂರೈಸಲು ಅಮೇರಿಕಾವು ಯಾರ ಬುದ್ಧಿ ಕ್ಷಮತೆ ಕಡಿಮೆ ಇದೆಯೋ, ಅಂತಹ ಯುವಕನನ್ನು ಸೈನ್ಯದಲ್ಲಿ ಭರ್ತಿಗೊಳಿಸಿರುತ್ತದೆ. (‘ಫಾರೆಸ್ಟ ಗಂಪ್’ ಈ ಚಲನಚಿತ್ರದ ಕಥೆಯನ್ನು ಯಥಾವತ್ತಾಗಿ ಇಳಿಸಿರುವ ಲಾಲಸಿಂಹ ಚಡ್ಡಾ) ಈ ಚಲನಚಿತ್ರ ಭಾರತೀಯ ಸೈನ್ಯ ಮತ್ತು ಸಿಖ್ಖರ ಅಪಮಾನ ಮಾಡುತ್ತಿದೆ. ಈ ಅಪಮಾನ ಲಜ್ಜಾಸ್ಪದವಾಗಿದೆ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಯಾವುದು ಇಂಗ್ಲೆಂಡ್‌ನ ಸಿಖ್ಖ ಆಟಗಾರನಿಗೆ ಅನಿಸುತ್ತದೆಯೋ, ಅದು ಭಾರತದಲ್ಲಿರುವ ಎಷ್ಟು ಸಿಖ್ಖರಿಗೆ ಮತ್ತು ಭಾರತೀಯರಿಗೆ ಅನಿಸುತ್ತದೆ ?