ಗಾಂಧಿನಗರ (ಗುಜರಾತ) – ಗುಜರಾತನ ಸಮುದ್ರದಲ್ಲಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನದ ‘ಆಲಮಗೀರ’ ಯುದ್ಧನೌಕೆಯನ್ನು ಭಾರತದ ಡಾರ್ನಿಯರ ವಿಮಾನ ಮತ್ತು ಕರಾವಳಿ ಕಾವಲು ಪಡೆಯ ಸೈನಿಕರು ಹಿಂದಕ್ಕೆ ಅಟ್ಟಿದರು. ಈ ಘಟನೆ ಕಳೆದ ತಿಂಗಳು ನಡೆದಿರುವುದು ಎಂದು ಸೂತ್ರಗಳಿಂದ ಬಹಿರಂಗಗೊಂಡಿದೆ.
A #Pakistan Navy warship had attempted to sneak into India last month, but was stopped by the Indian Coast Guard, as per sources.
(@manjeetnegilive)https://t.co/LasH4htL8Z— IndiaToday (@IndiaToday) August 7, 2022
೧. ಆಲಮಗೀರ ಯುದ್ಧನೌಕೆಯು ಗುಜರಾತಗೆ ಹೊಂದಿಕೊಂಡಿರುವ ಭಾರತೀಯ ಸಮುದ್ರದಲ್ಲಿ ನುಸುಳಿರುವದನ್ನು ನೋಡಿ ಸಮದ್ರ ದಡದಲ್ಲಿ ಗಸ್ತು ಹಾಕುವ ಡಾರ್ನಿಯರ ವಿಮಾನವು ಅದನ್ನು ಭಾರತೀಯ ಗಡಿಯಿಂದಾಚೆಗೆ ಹೋಗುವಂತೆ ಎಚ್ಚರಿಕೆಯನ್ನು ನೀಡಿತು. ಇದನ್ನು ಪಾಕಿಸ್ತಾನದ ಯುದ್ಧನೌಕೆಯು ನಿರ್ಲಕ್ಷ್ಯ ಮಾಡಿತು. ವಿಮಾನದ ವೈಮಾನಿಕನು ಪಾಕಿಸ್ತಾನಿ ಯುದ್ಧನೌಕೆಯ ಉದ್ದೇಶವನ್ನು ತಿಳಿದುಕೊಳ್ಳಲು ರೇಡಿಯೋ ಸಂಚಾರ ಸೆಟ್ ಮುಖಾಂತರ ಕಾಲ್ ಕೂಡ ಮಾಡಿದನು; ಆದರೆ ಪಾಕಿಸ್ತಾನಿ ಯುದ್ಧನೌಕೆಯ ಕ್ಯಾಪ್ಟನ್ ಯಾವುದೇ ಉತ್ತರ ನೀಡಲಿಲ್ಲ. ತದನಂತರ ಗಸ್ತು ಪಡೆಯು ಆಕ್ರಮಣಕಾರಿಯಾಗಿ ಸನ್ನದ್ಧರಾದಾಗ ಈ ಯುದ್ಧನೌಕೆಯು ಹಿಂದೆ ತಿರುಗಿತು.
೨. ಆಲಮಗೀರ ಯುದ್ಧನೌಕೆಯು ೨೦೧೦ ರಲ್ಲಿ ಅಮೇರಿಕಾವು ಪಾಕಿಸ್ತಾನಕ್ಕೆ ನೀಡಿತ್ತು. ಅದರ ಮೇಲೆ ೨ ಹೆಲಿಕಾಪ್ಟರ ನಿಲ್ಲಿಸಲು ಸಾಧ್ಯವಿದೆ. ಅಮೇರಿಕಾದಿಂದ ಪಾಕಿಸ್ತಾನಕ್ಕೆ ಬರುವಾಗ ಈ ಯುದ್ಧನೌಕೆಯು ಸ್ಪೇನ, ತುರ್ಕಿ ಮತ್ತು ಸೌದಿ ಅರೇಬಿಯಾಗಳ ನೌಕಾದಳದೊಂದಿಗೆ ಯುದ್ಧಾಭ್ಯಾಸ ಮಾಡಿದೆ.
ಸಮಪಾದಕೀಯ ನಿಲುವುಆಕಾಶ, ಭೂಮಿ ಮತ್ತು ನೀರು ಈ ಮಾರ್ಗದಿಂದ ಭಾರತದಲ್ಲಿ ನಿರಂತರವಾಗಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನದಲ್ಲಿ ಈಗ ಭಾರತವು ಒಂದೇ ಸಲ ನುಗ್ಗಿ ಅದಕ್ಕೆ ಶಾಶ್ವತವಾಗಿ ಪಾಠ ಕಲಿಸಬೇಕು ! |