ಪಾಕಿಸ್ತಾನದಲ್ಲಿ ೧ ಸಾವಿರ ೨೦೦ ವರ್ಷಗಳ ಹಿಂದಿನ ಹಿಂದೂ ಮಂದಿರ ಅತಿಕ್ರಮಣದಿಂದ ಮುಕ್ತ !

ವಾಲ್ಮೀಕಿ ದೇವಸ್ಥಾನ

ಲಾಹೊರ (ಪಾಕಿಸ್ತಾನ) – ಪಾಕಿಸ್ತಾನದ ಪಂಜಾಬ ಪ್ರಾಂತದ ೧ ಸಾವಿರ ೨೦೦ ವರ್ಷಗಳಷ್ಟು ಪ್ರಾಚೀನ ಹಿಂದೂ ಮಂದಿರವನ್ನು ಕಾನೂನುಬಾಹಿರ ನಿಯಂತ್ರಣದಿಂದ ಮುಕ್ತಗೊಳಿಸಲಾಗಿದೆ. ಹಿಂದೂಗಳು ಓರ್ವ ಕ್ರೈಸ್ತ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದು ಮಂದಿರ ಮುಗ್ತಗೊಳಿಸಿದ್ದಾರೆ. ಇದರ ಪ್ರಯುಕ್ತ ಸ್ಥಳೀಯ ಹಿಂದೂಗಳು ಮಂದಿರದಲ್ಲಿ ಆಗಸ್ಟ್ ೩ ರಂದು ಧಾರ್ಮಿಕ ಸಮಾರಂಭ ಆಯೋಜಿಸಿದ್ದಾರೆ.

ನಗರದ ಪ್ರಸಿದ್ಧ ಅನಾರಕಲಿ ಮಾರುಕಟ್ಟೆಯಲ್ಲಿರುವ ವಾಲ್ಮೀಕಿ ಮಂದಿರ ೨೦ ವರ್ಷಗಳಿಂದ ಓರ್ವ ಕ್ರೈಸ್ತ ಕುಟುಂಬದ ವಶದಲ್ಲಿತ್ತು. ಮಂದಿರದ ಮೇಲೆ ಅಧಿಕಾರ ಹೊಂದಿರುವಂತೆ ಹೇಳಿಕೊಳ್ಳುತ್ತಿದ್ದ ಕ್ರೈಸ್ತ ಕುಟುಂಬ ಹಿಂದೂ ಧರ್ಮ ಸ್ವೀಕರಿಸಿರುವುದಾಗಿ ಹೇಳುತ್ತಿತ್ತು. ಈಗ ಹಿಂದೂಗಳು ಮಂದಿರದ ಅಧಿಕಾರ ಪಡೆದ ನಂತರ ಆದಷ್ಟು ಬೇಗನೆ ಮಂದಿರದ ಜೀರ್ಣೋದ್ಧಾರ ಮಾಡಲಾಗುವುದು.

ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ನಂತರ ೧೯೯೩ ರಲ್ಲಿ ಸಶಸ್ತ್ರ ಗುಂಪಿನಿಂದ ವಾಲ್ಮೀಕಿ ಮಂದಿರದ ಮೇಲೆ ದಾಳಿ ನಡೆದಿತ್ತು. ಆ ಸಮಯದಲ್ಲಿ ದೇವಸ್ಥಾನದ ದೇವರ ಮೂರ್ತಿಯೂ ನಾಶಗೊಳಿಸಲಾಗಿತ್ತು ಎಂದು ಸೂತ್ರಗಳು ಮಾಹಿತಿ ನೀಡಿವೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಎಂದಾದರೂ ಹಿಂದೂಗಳು ಕಾನೂನುಬಾಹಿರವಾಗಿ ಚರ್ಚ್ ಅಥವಾ ಮಸೀದಿಯನ್ನು ಅತಿಕ್ರಮಿಸುವ ಬಗ್ಗೆ ಕನಸಿನಲ್ಲಾದರೂ ಯೋಚನೆ ಮಾಡುವರೆ?