ಲವ್ ಜಿಹಾದ್ ಮತ್ತು ಮತಾಂತರಗಳ ವಿರುದ್ಧ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರದೇಶದಲ್ಲಿ ೫ ಲಕ್ಷ ಹಿಂದೂಗಳನ್ನು ಸಂಘಟಿಸುವರು !

ಮತ್ತೆ ಘರ್ ವಾಪಸಿ ಅಭಿಯಾನ ನಡೆಸುವರು !

ಪ್ರಯಾಗರಾಜ (ಉತ್ತರ ಪ್ರದೇಶ) – ವಿಶ್ವ ಹಿಂದೂ ಪರಿಷತ್ತಿನಿಂದ ಮತಾಂತರಕ್ಕೆ ಕಡಿವಾಣ ಹಾಕುವುದಕ್ಕಾಗಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಲಿದೆ. ‘ಕಾಶಿ ಪ್ರದೇಶದಲ್ಲಿ ಎಲ್ಲಾ ೧೯ ಜಿಲ್ಲೆಗಳಲ್ಲಿ ೫ ಲಕ್ಷ ಜನರು ಲವ್ ಜಿಹಾದ್ ಮತ್ತು ಮತಾಂತರದ ವಿರುದ್ಧ ಸಂಗಟನೆ ಮಾಡಲಾಗುವುದು. ನವೆಂಬರ್ ೬ ರಿಂದ ೨೦ ವರೆಗಿನ ಕಾಲಾವಧಿಯಲ್ಲಿ ಈ ಅಭಿಯಾನ ನಡೆಸಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಚಂಪತ ರಾಯ್ ಇವರು ಮಾಹಿತಿ ನೀಡಿದರು. ‘ಜುಲೈ ೨೩ ಮತ್ತು ೨೪ ಈ ೨ ದಿನದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು, ಎಂದೂ ಸಹ ಅವರು ಹೇಳಿದರು.

ರಾಯ್ ತಮ್ಮ ಮಾತನ್ನು ಮುಂದುವರೆಸುತ್ತಾ, ಯಾರು ಹಿಂದೂ ಧರ್ಮ ಬಿಟ್ಟು ಹೋಗಿದ್ದಾರೆ, ಇವರನ್ನು ಸಂಪರ್ಕಿಸಿ ಅವರಲ್ಲಿ ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ನಿರ್ಮಾಣ ಮಾಡಲಾಗುವುದು. ಈ ಮೂಲಕ ಅವರನ್ನು ‘ಘರವಾಪಸಿ’ (ಮತಾಂತರ ಆಗಿರುವ ಹಿಂದುಗಳಿಗೆ ಪುನಃ ಹಿಂದೂ ಧರ್ಮದಲ್ಲಿ ಪ್ರವೇಶ) ಮಾಡಲು ಪ್ರೇರೇಪಿಸುವುದು. ವಿಶ್ವ ಹಿಂದೂ ಪರಿಷತ್ತಿಗೆ ೬೦ ವರ್ಷ ಪೂರ್ಣವಾಗಲಿದೆ, ಈ ಹಿನ್ನಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.