ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಅನ್ವಯಗೊಳಿಸಿರಿ !

ಸದ್ಗುರು ನಂದಕುಮಾರ ಜಾಧವ

೧. ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯ ಅವಶ್ಯಕತೆ !

ಹಿಂದೂಗಳಾದ ನಮ್ಮ ದೇವಸ್ಥಾನಗಳು ಸಾತ್ತ್ವಿಕತೆಯನ್ನು ನೀಡುವ ಕೇಂದ್ರಗಳಾಗಿವೆ. ಭಕ್ತರು ದೇವಸ್ಥಾನಕ್ಕೆ ಹೋಗಿ ದೇವತೆಗಳ ದರ್ಶನ ಪಡೆಯುತ್ತಾರೆ, ಆಗ ಅವರಿಗೆ ಸಾತ್ತ್ವಿಕತೆಯ ಲಾಭವಾಗುತ್ತದೆ. ದೇವಸ್ಥಾನಗಳಲ್ಲಿರುವ ದೇವತೆಗಳ ಮೂರ್ತಿಗಳಿಂದ ದೊಡ್ಡ ಪ್ರಮಾಣದಲ್ಲಿ ಚೈತನ್ಯ ಹಾಗೂ ಶಕ್ತಿ, ಅಂದರೆ ಆಧುನಿಕ ಭಾಷೆಯಲ್ಲಿ ಸಕಾರಾತ್ಮಕ ಸ್ಪಂದನಗಳು (ಪಾಸಿಟಿವ್ ವೈಬ್ರೇಶನ್) ಪ್ರಕ್ಷೇಪಣೆಯಾಗುತ್ತದೆ. ನಮಗೆ ದೇವಸ್ಥಾನಗಳಲ್ಲಿನ ಸಾತ್ತ್ವಿಕತೆಯನ್ನು ಹೆಚ್ಚು ಪ್ರಮಾಣದಲ್ಲಿ ಗ್ರಹಣ ಮಾಡಲಿಕ್ಕಿದ್ದರೆ, ನಮ್ಮ ಆಚರಣೆ ಹಾಗೂ ಉಡುಪು ಸಾತ್ತ್ವಿಕವಾಗಿರಬೇಕು. ನಮ್ಮ ಮನಸ್ಸಿನಲ್ಲಿ ದೇವತೆಯ ಬಗ್ಗೆ ಭಾವವಿರಬೇಕು. ಹೇಗೆ ‘ರೇಡಿಯೊ’ವನ್ನು ಕೇಳಲಿಕ್ಕಿದ್ದರೆ, ಯೋಗ್ಯವಾದ ‘ಫ್ರಿಕ್ವೆನ್ಸಿ’ಯನ್ನು ಹುಡುಕಬೇಕಾಗುತ್ತದೆಯೊ, ಹಾಗೆಯೇ ದೇವತೆಯ ತತ್ತ್ವದೊಂದಿಗೆ ನಮ್ಮ ‘ಫ್ರಿಕ್ವೆನ್ಸಿ’ಯನ್ನು ಜೋಡಿಸಲು ಸತ್ತ್ವಗುಣವು ತುಂಬಾ ಮಹತ್ವದ್ದಾಗಿದೆ. ವೃತ್ತಿ ಸಾತ್ತ್ವಿಕವಾಗಲು ಭಕ್ತರು ಸಾಧನೆ ಮಾಡಬೇಕಾಗುತ್ತದೆ. ಸಾಧನೆಯ ತುಲನೆಯಲ್ಲಿ ಅವರಿಗೆ ಸಾತ್ತ್ವಿಕ ಉಡುಪುಗಳನ್ನು ಧರಿಸಲು ಸಹಜವಾಗಿ ಸಾಧ್ಯವಾಗುತ್ತದೆ. ಆದ್ದರಿಂದ ಅವರಿಗೆ ದೇವತೆಯ ಸಾತ್ತ್ವಿಕತೆಯಿಂದ ಹೆಚ್ಚೆಚ್ಚು ಲಾಭ ಪಡೆಯಲು ಸಾಧ್ಯವಾಗುತ್ತದೆ.

೨. ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರಸಂಹಿತೆ ಹೇಗಿರಬೇಕು ?

ಈ ಪ್ರಶ್ನೆ ಅನೇಕರ ಮನಸ್ಸಿನಲ್ಲಿರುತ್ತದೆ. ಅನೇಕರ ಮನಸ್ಸಿನಲ್ಲಿ ನಮ್ಮ ಯಾವುದೇ ಧರ್ಮಗ್ರಂಥಗಳಲ್ಲಿ ವಸ್ತ್ರಸಂಹಿತೆಯ ವಿವರಣೆಯಿಲ್ಲ ಎನ್ನುವ ಪ್ರಶ್ನೆ ಮೂಡಿಬರುತ್ತದೆ. ಅದಕ್ಕಾಗಿ ನಾನು ಸ್ಪಷ್ಟ ಪಡಿಸಲು ಇಚ್ಛಿಸುವುದೇನೆಂದರೆ, ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಸಾತ್ತ್ವಿಕ ಉಡುಪುಗಳನ್ನು ಧರಿಸಲಾಗುತ್ತಿತ್ತು. ಆದ್ದರಿಂದ ಪ್ರತ್ಯೇಕ ವಸ್ತ್ರಸಂಹಿತೆಯ ಅವಶ್ಯಕತೆಯಿದೆ ಎಂದು ನಮ್ಮ ಧರ್ಮಶಾಸ್ತ್ರಜ್ಞರಿಗೆ ಅನಿಸಲಿಲ್ಲ. ೧೯೫೦ ರ ನಂತರ ಭಾರತೀಯರ ಪಾಶ್ಚಾತ್ತೀಕರಣ ಹೆಚ್ಚುತ್ತಾ ಹೋದಂತೆ ನಮ್ಮ ಉಡುಗೆತೊಡುಗೆಯಲ್ಲಿ ಬದಲಾವಣೆಯಾಗುತ್ತಾ ಹೋಯಿತು. ಆದ್ದರಿಂದ ಇಂದು ಸಾತ್ತ್ವಿಕ ವಸ್ತ್ರಸಂಹಿತೆಯ ಅವಶ್ಯಕತೆಯ ನಿರ್ಮಾಣವಾಗಿದೆ. ತಮಿಳುನಾಡು ಉಚ್ಚ ನ್ಯಾಯಾಲಯವೂ ‘ಅಲ್ಲಿನ ದೇವಸ್ಥಾನಗಳಲ್ಲಿ ಪ್ರವೇಶಿಸಲು ಸಾತ್ತ್ವಿಕ ಉಡುಪು ಧರಿಸಬೇಕು’, ಎಂಬುದನ್ನು ಮನ್ನಿಸಿ ೧ ಜನವರಿ ೨೦೧೬ ರಿಂದ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸಿದೆ. ಅದಕ್ಕನುಸಾರ ಭಕ್ತರು ಕೇವಲ ಭಾರತೀಯ ಪರಂಪರೆಯ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮಹಿಳೆಯರಿಗೆ ಸೀರೆ, ಲಂಗದಾವಣಿ, ಸಲವಾರ್ ಕುರ್ತಾದಂತಹ ಸಾತ್ತ್ವಿಕ ಉಡುಪಿಗೆ ಮನ್ನಣೆ ನೀಡಲಾಗಿದೆ, ಪುರುಷರಿಗೆ ಜುಬ್ಬಾ, ಪಂಚೆ, ಮುಂಡು ಅಥವಾ ಪೈಜಾಮಾ ಅಥವಾ ಸಾಮಾನ್ಯ ಶರ್ಟ್ ಪ್ಯಾಂಟ್ ಇವುಗಳಿಗೆ ಮನ್ನಣೆ ನೀಡಲಾಗಿದೆ. ಚರ್ಮದ ಬೆಲ್ಟ್ ಮತ್ತು ‘ಪರ್ಸ್’ ಸಹಿತ ‘ಸ್ಕರ್ಟ್’, ‘ಮಿಡಿ’, ‘ಗಿಡ್ಡ ಪ್ಯಾಂಟ್’, ‘ಸ್ಯಾಂಡೋಬನಿಯನ್’, ‘ಜೀನ್ಸ್’ ಇತ್ಯಾದಿ ಪಾಶ್ಚಾತ್ಯ ವಸ್ತ್ರಗಳನ್ನು ವರ್ಜಿಸಲಾಗಿದೆ.

ಇಂದು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉಜ್ಜೈನಿಯ ಶ್ರೀ ಮಹಾಕಾಳೇಶ್ವರ ಮಂದಿರ, ಮಹಾರಾಷ್ಟ್ರದ ಶ್ರೀ ಘೃಷ್ಣೇಶ್ವರ ಮಂದಿರ, ವಾರಣಾಸಿಯ ಶ್ರೀ ಕಾಶಿ ವಿಶ್ವೇಶ್ವರ ಮಂದಿರ, ಆಂಧ್ರಪ್ರದೇಶದ ಶ್ರೀ ತಿರುಪತಿ ಬಾಲಾಜಿ ಮಂದಿರ, ಕೇರಳದ ಪ್ರಖ್ಯಾತ ಶ್ರೀ ಪದ್ಮನಾಭಸ್ವಾಮಿ ಮಂದಿರ, ಕನ್ಯಾಕುಮಾರಿಯ ಶ್ರೀ ಮಾತಾ ಮಂದಿರ ಮುಂತಾದ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರಿಗೆ ಸಾತ್ತ್ವಿಕ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸಲಾಗಿದೆ. ಜಗತ್ತಿನಾದ್ಯಂತದ ಜನರು ಗೋವಾಗೆ ಪ್ರವಾಸಕ್ಕಾಗಿ ಬರುತ್ತಾರೆ, ಗಿಡ್ಡ ವಸ್ತ್ರವನ್ನು ಧರಿಸಿ ಸಮುದ್ರತೀರದಲ್ಲಿ ತಿರುಗಾಡುತ್ತಾರೆ ಹಾಗೂ ದೇವಸ್ಥಾನದೊಳಗೂ ಹೋಗುತ್ತಾರೆ; ಗೋವಾದ ಅನೇಕ ದೇವಸ್ಥಾನಗಳಲ್ಲಿ ಈ ಹಿಂದೆಯೇ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸಲಾದ ಬಗ್ಗೆ ನನಗೆ ಆನಂದವೆನಿಸುತ್ತದೆ. ಈ ವಸ್ತ್ರಸಂಹಿತೆಯು ವಿದೇಶಿ ಪ್ರವಾಸಿಗಳಿಗೂ ಅನ್ವಯವಾಗುತ್ತದೆ. ದೇವಸ್ಥಾನಗಳು ಪ್ರವಾಸೀತಾಣಗಳಲ್ಲ. ಭಕ್ತರು ಧಾರ್ಮಿಕ ಸ್ಥಳಗಳಿಗೆ ಬರುವಾಗ ಧಾರ್ಮಿಕತೆಯನ್ನು ಪಾಲಿಸಬೇಕು.

೩. ಎಲ್ಲ ಕ್ಷೇತ್ರಗಳಲ್ಲಿ ಉಡುಗೆತೊಡುಗೆಗಳ ನಿಯಮಗಳ ಪಾಲನೆ ಆಗುತ್ತದೆ; ಹಾಗಾದರೆ ದೇವಸ್ಥಾನಗಳಲ್ಲಿ ಏಕಿಲ್ಲ ?

ದೇವಸ್ಥಾನಗಳಲ್ಲಿ ಮಂಗಲದಾಯಕ ಅಥವಾ ಪೂರ್ಣ ವಸ್ತ್ರವನ್ನು ಧರಿಸಿ ಹೋಗುವುದೆಂದರೆ ಸುಸಂಸ್ಕೃತವೆನಿಸುತ್ತದೆ. ಈ ಸುಸಂಸ್ಕೃತಿಯನ್ನು ಆಧುನಿಕ ಜನರು ‘ಶಿಷ್ಟಾಚಾರ’ ಎನ್ನುತ್ತಾರೆ. ವ್ಯವಹಾರದಲ್ಲಿ ನಾವು ಆ ಎಲ್ಲ ಶಿಷ್ಟಾಚಾರಗಳನ್ನು ಪಾಲಿಸುತ್ತೇವೆ, ಉದಾ. ವಿವಾಹ ಸಮಾರಂಭಗಳಲ್ಲಿ ಒಳ್ಳೊಳ್ಳೆ ವಸ್ತ್ರಗಳನ್ನು ಧರಿಸಲಾಗುತ್ತದೆ, ಅಲ್ಲಿ ನಾವು ‘ಶಾರ್ಟ್ಸ್’ ಅಥವಾ ‘ಸ್ಯಾಂಡೋ ಟೀ ಶರ್ಟ್’ನಂತಹ ವಸ್ತ್ರಗಳನ್ನು ಧರಿಸುವುದಿಲ್ಲ. ಅಂತ್ಯಸಂಸ್ಕಾರದ ಸಮಯದಲ್ಲಿ ಸುಂದರವಾದ ವಸ್ತ್ರಗಳನ್ನು ಧರಿಸಿ ಹೋಗುವುದಿಲ್ಲ. ಅಲ್ಲಿ ನಾವು ಸಾಮಾನ್ಯ ಅಥವಾ ಸಾಧ್ಯವಿದ್ದರೆ ಬಿಳಿ ವಸ್ತ್ರಗಳನ್ನು ಧರಿಸುತ್ತೇವೆ. ಉಡುಪಿನ ವಿಷಯದಲ್ಲಿ ಸಮಾಜದಲ್ಲಿ ರೂಢಿಯಲ್ಲಿರುವ ಕೆಲವು ಸಂಕೇತಗಳನ್ನು ಯಾರಾದರೂ ಮುರಿದರೆ, ಆ ವ್ಯಕ್ತಿಯನ್ನು ಟೀಕಿಸಲಾಗುತ್ತದೆ. ಕೆಲವು ಕಂಪನಿಗಳಲ್ಲಿ ಅವರ ಕಾರ್ಮಿಕರಿಗಾಗಿ ವಿಶಿಷ್ಟ ಉಡುಪು ಕಡ್ಡಾಯವಿರುತ್ತದೆ, ಮಹಾವಿದ್ಯಾಲಯಗಳಲ್ಲಿಯೂ ವಿದ್ಯಾರ್ಥಿಗಳಿಗಾಗಿ ವಿಶಿಷ್ಟ ಸಮವಸ್ತ್ರವಿರುತ್ತದೆ. ವೈದ್ಯರಿಗೂ ‘ಆಪರೇಶನ್ ಥಿಯೇಟರ್’ಗೆ ಹೋಗಲಿಕ್ಕಿದ್ದರೆ ಅಲ್ಲಿನ ನಿಯಮಕ್ಕನುಸಾರವೇ ಎಲ್ಲ ಜಾಗರೂಕತೆಯನ್ನು ವಹಿಸಿ ನಿರ್ದಿಷ್ಟ ವಸ್ತ್ರ ಧರಿಸಬೇಕಾಗುತ್ತದೆ. ಇಂದು ತಮ್ಮನ್ನು ಪ್ರಗತಿಪರರೆಂದು ಹೇಳಿಸಿಕೊಳ್ಳುವವರು ಔತಣಕೂಟಗಳನ್ನು ಆಯೋಜನೆ ಮಾಡುತ್ತಾರೆ. ಅದರಲ್ಲಿಯೂ ನಿರ್ದಿಷ್ಟ ‘ಡ್ರೆಸ್‌ಕೋಡ್’ ಇರುತ್ತದೆ. ಅದಕ್ಕನುಸಾರ ಉಡುಪನ್ನು ಧರಿಸುವವರಿಗೆ ಮಾತ್ರ ‘ಪಾರ್ಟಿ’ಯಲ್ಲಿ ಪ್ರವೇಶ ನೀಡಲಾಗುತ್ತದೆ. ಸಮಾಜದಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ವಸ್ತ್ರಸಂಹಿತೆಯ ಪಾಲನೆಯಾಗುವಾಗ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅನ್ವಯಿಸುವುದರಲ್ಲಿ ತಪ್ಪೇನಿದೆ ?

ಸದ್ಯ ಹಿಂದೂ ಧರ್ಮವನ್ನು ನಂಬದವರು ಅಥವಾ ದೇವತೆಗಳ ಮೇಲೆ ಶ್ರದ್ಧೆ ಇಲ್ಲದ ಆಧುನಿಕತಾವಾದಿಗಳೇ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವಿರೋಧಿಸುತ್ತಾರೆ. ದೇವಸ್ಥಾನಗಳಲ್ಲಿ ಗಿಡ್ಡ ವಸ್ತ್ರವನ್ನು ಧರಿಸಿ ಅಥವಾ ಪರಂಪರಾಹೀನ ಉಡುಪು ಧರಿಸಿ ದೇವರ ದರ್ಶನಕ್ಕೆ ಹೋಗುವುದನ್ನು ನಾವು ‘ಅಭಿವ್ಯಕ್ತಿಸ್ವಾತಂತ್ರ್ಯ’ವೆಂದು ಹೇಳುವುದಿಲ್ಲ.

ಪ್ರತಿಯೊಬ್ಬರಿಗೂ ‘ತಮ್ಮ ಮನೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಯಾವ ವಸ್ತ್ರವನ್ನು ಧರಿಸಬೇಕು’, ಎಂಬುದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ; ಆದರೆ ದೇವಸ್ಥಾನವೆಂದರೆ ಧಾರ್ಮಿಕ ಸ್ಥಳವಾಗಿದೆ. ಅಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯವಲ್ಲ, ಧರ್ಮಾಚರಣೆಗೆ ಮಹತ್ವವಿದೆ.

೪. ದೇಶದಾದ್ಯಂತ ಪ್ರತಿಯೊಂದು ದೇವಸ್ಥಾನದಲ್ಲಿ ‘ವಸ್ತ್ರಸಂಹಿತೆ’ಯು ಅನ್ವಯವಾಗುವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಿರಿ !

ಮಹಾರಾಷ್ಟ್ರ ಸರಕಾರವು ಇತ್ತೀಚೆಗಷ್ಟೆ ರಾಜ್ಯದ ಎಲ್ಲ ಸರಕಾರಿ ಕಾರ್ಯಾಲಯಗಳಲ್ಲಿ ವಸ್ತ್ರಸಂಹಿತೆಯನ್ನು ಅನ್ವಯಗೊಳಿಸಿ ‘ಸರಕಾರಿ ಅಧಿಕಾರಿಗಳು ಮತ್ತು ಕಾರ್ಮಿಕರಿಗೆ ‘ಜೀನ್ಸ್ ಪ್ಯಾಂಟ್’, ‘ಟೀ-ಶರ್ಟ್’, ಕಡು ಬಣ್ಣದ ಅಥವಾ ನಕ್ಷೆಗಳಿರುವ ವಸ್ತ್ರ ಹಾಗೂ ‘ಸ್ಲಿಪ್ಪರ್’ ಉಪಯೋಗಿಸಬಾರದೆಂದು ಸ್ಪಷ್ಟಪಡಿಸಿದೆ. ಅಧಿಕಾರಿಗಳು ಮತ್ತು ಕಾರ್ಮಿಕರಿಗೆ ಕೇವಲ ಶೋಭಿಸುವಂತಹ ವಸ್ತ್ರಗಳನ್ನು ಧರಿಸಲು ಕರೆ ಮಾಡಿದೆ. ಜಾತ್ಯತೀತ ಸರಕಾರ ನಿರ್ಧರಿಸಿದ ‘ಡ್ರೆಸ್ ಕೋಡ್’ ಇಷ್ಟವಾಗುತ್ತದೆ; ಆದರೆ ದೇವಸ್ಥಾನಗಳಲ್ಲಿ ಸಂಸ್ಕೃತಿಪ್ರಧಾನ ವಸ್ತ್ರಗಳನ್ನು ಧರಿಸಬೇಕೆಂಬ ಕರೆಯು ನಡೆಯುವುದಿಲ್ಲ. ಇದು ವಿರೋಧಿಗಳ ಭಾರತೀಯ ಸಂಸ್ಕೃತಿದ್ವೇಷವೇ ಆಗಿದೆ. ದೇಶದ ಅನೇಕ ಚರ್ಚ್‌ಗಳಲ್ಲಿಯೂ ‘ಡ್ರೆಸ್‌ಕೋಡ್’ ಇದೆ.

ಮುಸಲ್ಮಾನರಲ್ಲಿ ಮಹಿಳೆಯರಿಗೆ ಎಲ್ಲೆಡೆ ‘ಬುರ್ಖಾ’ ಶಾಶ್ವತವಾದ ‘ಡ್ರೆಸ್‌ಕೋಡ್’ ಆಗಿದೆ. ಅವರನ್ನು ಯಾರೂ ವಿರೋಧಿಸುವುದಿಲ್ಲ; ಆದರೆ ದೇವಸ್ಥಾನಗಳಲ್ಲಿನ ‘ಡ್ರೆಸ್‌ಕೋಡ್’ಗೆ ವಿರೋಧವಾಗುತ್ತದೆ. ಯಾವುದೇ ಸತ್ಕಾರ್ಯಕ್ಕೆ ವಿರೋಧವಾಗುತ್ತಾ ಇರುತ್ತದೆ. ಆದ್ದರಿಂದ ಈ ಉಪಕ್ರಮಕ್ಕೂ ವಿರೋಧವಾಗುವುದು ಸಹಜ. ಆದರೂ ಈ ವಿರೋಧವನ್ನು ಕಾನೂನುಮಾರ್ಗದಿಂದ ಇಂದು ನಾವು ದೇಶದಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ‘ವಸ್ತ್ರಸಂಹಿತೆ’ಯನ್ನು ಅನ್ವಯಗೊಳಿಸಲು ಜನಜಾಗೃತಿ ಮಾಡುವ ಸಂಕಲ್ಪವನ್ನು ಮಾಡೋಣ.

– ಸದ್ಗುರು ನಂದಕುಮಾರ ಜಾಧವ, ಧರ್ಮಪ್ರಚಾರಕ, ಸನಾತನ ಸಂಸ್ಥೆ.

‘ವಸ್ತ್ರಸಂಹಿತೆ’ ಅನ್ವಯಗೊಳಿಸಲು ಮಾಡಬೇಕಾದ ಕೆಲವು ಪ್ರಯತ್ನಗಳು

ಅ. ನಮ್ಮ ಪರಿಸರದಲ್ಲಿ ತಕ್ಷಣ ವಸ್ತ್ರಸಂಹಿತೆ ಅನ್ವಯವಾಗುವಂತಹ ದೇವಸ್ಥಾನಗಳ ಪಟ್ಟಿ ತಯಾರಿಸಬೇಕು.

ಆ. ನಮ್ಮ ಪರಿಸರದಲ್ಲಿನ ಸಮವಿಚಾರಿ ಹಿಂದೂ ಸಂಘಟನೆಗಳು, ಸಂಸ್ಥೆ, ಸಂಪ್ರದಾಯ ಮೊದಲಾದವರಿಗೆ ಒಂದು ಸಭೆಯನ್ನು ಆಯೋಜಿಸಿ ಈ ಅಭಿಯಾನದ ಮಾಹಿತಿಯನ್ನು ನೀಡಬೇಕು. ದೇವಸ್ಥಾನಗಳ ಪಟ್ಟಿಯನ್ನು ಓದಿ ‘ಯಾವ ದೇವಸ್ಥಾನದಲ್ಲಿ ಯಾರಿಗೆ ಪರಿಚಯವಿದೆ ? ಈ ಅಭಿಯಾನವನ್ನು ತಕ್ಷಣ ಎಲ್ಲಿ ಹಮ್ಮಿಕೊಳ್ಳಬಹುದು ?’, ಎಂಬುದರ ಚರ್ಚೆ ಮಾಡಬೇಕು.

ಇ. ಈ ಪಟ್ಟಿಯಲ್ಲಿ ಯಾವ ದೇವಸ್ಥಾನದ ವಿಶ್ವಸ್ಥರು ನಮ್ಮ ಪರಿಚಯದವರಾಗಿದ್ದಾರೆ, ಧಾರ್ಮಿಕರಾಗಿದ್ದಾರೆ, ಅದೇ ರೀತಿ ಯಾರು ಈ ಬಗ್ಗೆ ಕೃತಿ ಮಾಡುವರು, ಇಂತಹವರ ಹೆಸರುಗಳನ್ನು ಆದ್ಯತೆಯಿಂದ ಆರಿಸಿ ಸಂಪರ್ಕದ ಆಯೋಜನೆ ಮಾಡಬೇಕು.

ಈ. ಈ ಸಂಪರ್ಕಕ್ಕಾಗಿ ಒಂದು ನಿಯೋಗವನ್ನು ಮಾಡಬೇಕು. ಇದರಲ್ಲಿ ಯಾರ‍್ಯಾರು ಇರಬೇಕು ? ಎಂಬುದರ ಆಯೋಜನೆ ಮಾಡಬೇಕು. ನಿಯೋಗದಲ್ಲಿ ಆ ಪರಿಸರದಲ್ಲಿ ಈ ವಿಷಯಕ್ಕೆ ಪೂರಕವಿರುವ ಪ್ರತಿಷ್ಠಿತ ವ್ಯಕ್ತಿ, ಸಂತರು, ಕೀರ್ತನಕಾರರು ಮತ್ತು ಹಿಂದುತ್ವನಿಷ್ಠರು ಮುಂತಾದವರ ವಿಚಾರ ಮಾಡಬಹುದು. ಈ ನಿಯೋಗವು ದೇವಸ್ಥಾನದ ವಿಶ್ವಸ್ಥರನ್ನು ಭೇಟಿಯಾಗಬೇಕು.

ಉ. ಈ ವಿಷಯವನ್ನು ದೇವಸ್ಥಾನದ ವಿಶ್ವಸ್ಥರಿಗೆ ವಿವರಿಸಿ ಅವರನ್ನು ‘ವಸ್ತ್ರಸಂಹಿತೆ’ಯನ್ನು ಅನ್ವಯಿಸಲು ಉದ್ಯುಕ್ತಗೊಳಿಸಬೇಕು

ಊ. ಯಾವ ದಿನ ದೇವಸ್ಥಾನದಲ್ಲಿ ಜನಸಂದಣಿ ಇರುತ್ತದೋ, ಆ ಸಮಯದಲ್ಲಿ ಆ ದೇವಸ್ಥಾನದ ಪರಿಸರದ ಭಕ್ತರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ವಿತರಣೆ ಮಾಡುವುದು, ದೇವಸ್ಥಾನದ ಪರಿಸರದಲ್ಲಿ ಫಲಕಗಳನ್ನು ಹಚ್ಚುವುದು, ದೇವಸ್ಥಾನದ ಧ್ವನಿವರ್ಧಕದ ಮೂಲಕ ಸೂಚನೆ ನೀಡುವುದು, ಇಂತಹ ಕೆಲವು ಕೃತಿಗಳನ್ನು ಮಾಡಲು ದೇವಸ್ಥಾನದ ವಿಶ್ವಸ್ಥರಲ್ಲಿ ವಿನಂತಿಸಬೇಕು.

ಎ. ದೇವಸ್ಥಾನ ಟ್ರಸ್ಟ್‌ನ (ನ್ಯಾಸ) ವತಿಯಿಂದ ಸ್ಥಳೀಯ ಪ್ರಸಾರ ಮಾಧ್ಯಮಗಳಿಗೆ ಈ ವಿಷಯದ ಪತ್ರಿಕಾ ಪ್ರಕಟಣೆಯನ್ನು ಕಳುಹಿಸಿ ವಾರ್ತೆಯನ್ನು ನೀಡಬೇಕು.

ಐ. ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿ ಈ ಅಭಿಯಾನದ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು.

ಒ. ಸಂತರು, ಕೀರ್ತನಕಾರರು ಮೊದಲಾದವರಿಗೆ ತಮ್ಮ ಕಾರ್ಯಕ್ರಮಗಳಲ್ಲಿ ಈ ವಿಷಯದಲ್ಲಿ ಪ್ರಬೋಧನೆ ಮಾಡುವಂತೆ ಕರೆ ನೀಡಬೇಕು.

ಔ. ‘ಸನಾತನ ಸಂಸ್ಥೆ’ ತಮಗೆ ಈ ಅಭಿಯಾನಕ್ಕಾಗಿ ಬೇಕಾಗುವ ಮನವಿಪತ್ರ, ಕರಪತ್ರಗಳು, ಫಲಕಗಳು ಇತ್ಯಾದಿಗಾಗಿ ವೈಚಾರಿಕ ಭೂಮಿಕೆಯನ್ನು ಸ್ಪಷ್ಟಗೊಳಿಸುವ ಲೇಖನಗಳನ್ನು ಒದಗಿಸಿ ಕೊಡುವುದು. ಅವುಗಳನ್ನು ಸ್ಥಳೀಯ ಸ್ತರದಲ್ಲಿ ಮುದ್ರಿಸಿಕೊಂಡು ಅದರ ಪ್ರಸಾರ ಮಾಡಬೇಕು.

ಎಲ್ಲರಿಗೂ ನಾನು ಕರೆ ನೀಡುವುದೇನೆಂದರೆ, ನಾವು ದೇವಸ್ಥಾನಗಳಲ್ಲಿ ‘ವಸ್ತ್ರಸಂಹಿತೆ’ಯನ್ನು ಅನ್ವಯಿಸುವ ದೇಶವ್ಯಾಪಿ ಆಂದೋಲನವನ್ನು ಉತ್ಸಾಹದಿಂದ ಆರಂಭಿಸೋಣ. ದೇವಸ್ಥಾನಗಳು ಉಳಿದರೆ, ಧರ್ಮ ಹಾಗೂ ಧರ್ಮ ಉಳಿದರೆ ನಾವು ಉಳಿಯಬಹುದು. – ಸದ್ಗುರು ನಂದಕುಮಾರ ಜಾಧವ

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದ ಅನೇಕ ಕಥೆಗಳು ವೇದ-ಪುರಾಣಗಳಲ್ಲಿರುತ್ತವೆ. ‘ಅಥರ್ವವೇದ’ದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ, ಉದಾ. ಅಸುರರು, ರಾಕ್ಷಸರು, ಪಿಶಾಚಿಗಳ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.