ತಾಪಮಾನ ಏರಿಕೆಯಿಂದ ಯುರೋಪಿನಲ್ಲಿ ಇದುವರೆಗೆ ೧೯೦೦ ಜನರು ಸಾವನ್ನಪ್ಪಿದ್ದಾರೆ

ಲಂಡನ (ಬ್ರಿಟನ) : ಕಳೆದ ಕೆಲವು ದಿನಗಳಿಂದ ಯುರೋಪ ಖಂಡದಲ್ಲಿ ಬೇಸಿಗೆಯ ಬಿಸಿಯ ವಾತಾವರಣ ಕಂಡು ಬರುತ್ತಿದೆ. ತಾಪಮಾನವು ೪೦ ಡಿಗ್ರಿ ಸೆಲ್ಸಿಯಸಗೆ ಏರಿದೆ. ಈ ಬೇಸಿಗೆಯಲ್ಲಿ ಯುರೋಪಿನ ೧೯೦೦ ಜನರು ಸಾವನ್ನಪ್ಪಿದ್ದಾರೆ. ಬ್ರಿಟನನ ರಸ್ತೆಗಳ ಡಾಂಬರು ಮತ್ತು ವಿಮಾನ ನಿಲ್ದಾಣದ ರನವೇಗಳು ಕರಗುತ್ತಿರುವುದನ್ನು ಗಮನಿಸಲಾಗಿದೆ. ಈ ಹಿಂದೆ ೨೦೦೩ರಲ್ಲಿ ಯುರೋಪನಲ್ಲಿ ಇದೇ ರೀತಿಯ ಬೇಸಿಗೆ ಬಂದಿತ್ತು. ಅದರಲ್ಲಿ ೭೦ ಸಾವಿರ ಜನರು ಸತ್ತಿದ್ದರು !

ಸಂಪಾದಕೀಯ ನಿಲುವು

ನಿಸರ್ಗಕ್ಕೆ ವಿರುದ್ಧವಾಗಿ ವರ್ತಿಸಿದರೆ ಪ್ರಕೃತಿಯು ಕೆಲವೊಮ್ಮೆ ತನ್ನ ರೌದ್ರ ರೂಪವನ್ನು ತೋರಿಸುತ್ತದೆ ಎಂಬುದು ಈ ಸನ್ನಿವೇಶದಿಂದ ತಿಳಿಯುತ್ತದೆ!