ಮೊಬೈಲ್‌ನ ಅತಿ ಉಪಯೋಗ ಅಪಾಯಕಾರಿ !

ಉತ್ತರಪ್ರದೇಶದ ಲಕ್ಷ್ಮಣಪುರಿಯಲ್ಲಿ ‘ಪಬ್ಜಿ ಗೇಮ್’ (ಪಬ್ಜಿ ವಿಡಿಯೋ ಆಟವನ್ನು) ಆಡಲು ವಿರೋಧಿಸಿದ್ದರಿಂದ ೧೬ ವರ್ಷದ ಬಾಲಕ ತನ್ನ ತಾಯಿಯನ್ನೇ ಗುಂಡಿಕ್ಕಿ ಹತ್ಯೆ ಮಾಡಿದನು ಮತ್ತು ತಾಯಿಯ ಮೃತದೇಹವನ್ನು ೩ ದಿನಗಳ ವರೆಗೆ ಮನೆಯಲ್ಲಿಯೇ ಮುಚ್ಚಿಟ್ಟಿದ್ದನು. ಭಾಗ್ಯನಗರದ ಒಬ್ಬ ೧೬ ವರ್ಷದ ಬಾಲಕನು ‘ಗೇಮ್’ನ ‘ಅಡ್ವಾನ್ಸ ಲೇವಲ್’ ಅನ್ನು (ಮುಂದಿನ ಹಂತವನ್ನು) ತಲುಪಲು ತಾಯಿಯ ಬ್ಯಾಂಕಿನ ಖಾತೆಯಿಂದ ೩೬ ಲಕ್ಷ ರೂಪಾಯಿಗಳನ್ನು ತೆಗೆದನು. ಮುಂಬೈಯ ಠಾಣೆಯಲ್ಲಿಯೂ ೩ ಜನ ಮಿತ್ರರು ‘ಪಬ್ಜಿ ಗೇಮ್’ (ವಿಡಿಯೋ ಗೇಮ್)ವನ್ನು ಆಡುವಾಗ ನಡೆದ ವಿವಾದದಲ್ಲಿ ಒಬ್ಬ ಮಿತ್ರನ ಹತ್ಯೆಯನ್ನು ಮಾಡಿದರು. ಇವು ಕಳೆದ ಕೆಲವು ದಿನಗಳ ಉದಾಹರಣೆಯಾಗಿವೆ. ‘ಆನ್‌ಲೈನ್ ಗೇಮಿಂಗ್’ಗಳು ಎಷ್ಟು ಭಯಾನಕವಾಗಿವೆ ಎಂದರೆ, ಈ ‘ಗೇಮ್’ಗಳಿಗಾಗಿ ಇಂದಿನ ಯುವಕರು ಕಳ್ಳತನ, ಬ್ಯಾಂಕಿನಿಂದ  ಹಣ ತೆಗೆಯುವುದು, ಇಷ್ಟೇ ಏನು ತಮ್ಮ ತಂದೆ-ತಾಯಿಯರ ಹತ್ಯೆಯನ್ನು ಮಾಡುವ ಹಂತವನ್ನು ತಲುಪಿದ್ದಾರೆ. ಇದು ಭಾರತದಲ್ಲಿನ ಯುವಪೀಳಿಗೆಯ ಅಧಃಪತನ ಖಂಡಿತವಾಗಿಯೂ ಚಿಂತಾಜನಕವಾಗಿದ್ದು, ಈ ‘ಗೇಮ’ನ  ವಿಷಬಳ್ಳಿಯನ್ನು ತಡೆಯುವುದು ಆವಶ್ಯಕವಾಗಿದೆ.

ಒಂದು ವರದಿಗನುಸಾರ ಕೊರೊನಾದ ನಂತರ ಭಾರತದ ಮಕ್ಕಳ ತೂಕ ೫ ಕಿಲೋದಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿನ ಅನೇಕ ಕಾರಣಗಳಲ್ಲಿನ ಒಂದು ಮುಖ್ಯ ಕಾರಣವೆಂದರೆ ‘ಆನ್‌ಲೈನ್ ಗೇಮಿಂಗ್’. ಮಕ್ಕಳು ಬಹಳಷ್ಟು ಸಮಯ ಒಂದೇ ಸ್ಥಳದಲ್ಲಿ ಕುಳಿತು ‘ವಿಡಿಯೋ ಗೇಮ್’ಗಳನ್ನು ಆಡುವುದು. ಈಗ ಹೊರಗೆ ಮೈದಾನದಲ್ಲಿ ಹೋಗಿ ಆಡುವುದು ಹೆಚ್ಚಿನಂಶ ನಿಂತೇ ಹೋಗಿದೆ. ‘ಸಂಚಾರಿವಾಣಿ’ (ಮೊಬೈಲ್) ಮತ್ತು ಅದಕ್ಕೆ ಸಂಬಂಧಿತ ವಿಷಯಗಳು, ಇವೇ ಈಗ ಯುವಕರ  ಸರ್ವಸ್ವವಾಗುತ್ತಿವೆ.  ಛತ್ರಪತಿ ಶಿವಾಜಿ ಮಹಾರಾಜರು ೧೬ ನೇ ವಯಸ್ಸಿನಲ್ಲಿ ‘ಸ್ವರಾಜ್ಯ ಸ್ಥಾಪನೆ’ಯ ಪ್ರತಿಜ್ಞೆಯನ್ನು ಮಾಡಿದ್ದರು !  ತದ್ವಿರುದ್ಧ ಇಂದಿನ ಯುವಕರು ‘ಆನ್‌ಲೈನ್’ ಆಟಗಳಲ್ಲಿ ಮಗ್ನರಾಗಿದ್ದಾರೆ. ಈ ಸ್ಥಿತಿಯನ್ನು ಬದಲಾಯಿಸಲು ಪೋಷಕರು, ಶಿಕ್ಷಕರು ಮತ್ತು ಸರಕಾರ ಎಲ್ಲರೂ ಎಲ್ಲ ಸ್ತರಗಳಲ್ಲಿ ಪ್ರಯತ್ನಿಸುವುದೂ ಆವಶ್ಯಕವಾಗಿದೆ. ಇಂದಿನ ಯುವಕರಿಗೆ ಪ್ರಭು ಶ್ರೀರಾಮ, ಶ್ರೀಕೃಷ್ಣ, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕ್ರಾಂತಿಕಾರರನ್ನು ಆದರ್ಶವೆಂದು ತಿಳಿದುಕೊಳ್ಳಲು ಕಲಿಸಬೇಕು. ವಿಜ್ಞಾನವು ಮಾನವನಿಗೆ ಅನೇಕ ಭೌತಿಕ ಸೌಲಭ್ಯಗಳನ್ನು ನೀಡಿದೆ; ಆದರೆ ಅದರ ಉಪಯೋಗವನ್ನು ಎಷ್ಟು ಸಮಯ ಮಾಡಬೇಕು ? ಅದರ ಮೇಲೆ ಹೇಗೆ ನಿಯಂತ್ರಣವನ್ನು ಇಡಬೇಕು ?  ಎಂಬುದನ್ನು ವಿಜ್ಞಾನಕ್ಕೆ ಕಲಿಸಲು ಸಾಧ್ಯವಾಗಿಲ್ಲ ಮತ್ತು ಮುಂದೆ ಸಾಧ್ಯವೂ ಆಗುವುದಿಲ್ಲ, ಇದು ಈ ಉದಾಹರಣೆಯಿಂದ ಸಿದ್ಧವಾಗುತ್ತದೆ. ಮನಸ್ಸಿನ ಮೇಲೆ ನಿಯಂತ್ರಣವನ್ನಿಡುವುದು ಅತ್ಯಂತ ಆವಶ್ಯಕವಾಗಿದೆ. ಷಡ್ರಿಪುಗಳು ನಿಯಂತ್ರಣದಲ್ಲಿದ್ದರೆ, ಮಾತ್ರ ಇದು ಸಾಧ್ಯವಿದೆ. ಅವುಗಳನ್ನು ನಿಯಂತ್ರಣದಲ್ಲಿಡಲು ವಿಜ್ಞಾನವಲ್ಲ ಅಧ್ಯಾತ್ಮವೇ ಬೇಕು.

– ಶ್ರೀ. ಅಜಯ ಕೆಳಕರ.