ಆರೋಗ್ಯವಂತ ಶರೀರಕ್ಕಾಗಿ ನಿಯಮಬಾಹ್ಯ ಆಹಾರ ಸೇವಿಸುವುದನ್ನು ತಡೆಯಿರಿ !

೧. ನಿಯಮಬಾಹ್ಯ ಆಹಾರ ಸೇವಿಸುವುದರಿಂದ ಬಾವು ಬರುವುದು

ಊಟದ ಬಳಿಕ ಏನು ಮಾಡಬೇಕು? ಅಥವಾ ಯಾವ ಆಹಾರದ ಬಳಿಕ ಏನು ಕುಡಿಯಬೇಕು ? ಎನ್ನುವುದಕ್ಕೂ ಕೆಲವು ನಿಯಮಗಳಿವೆ. ಈ ನಿಯಮಗಳನ್ನು  ಉಲ್ಲಂಘಿಸುವುದಕ್ಕೆ ‘ನಿಯಮಬಾಹ್ಯ ಆಹಾರ ಎನ್ನುತ್ತಾರೆ. ಊಟ ಮಾಡುವಾಗ ನೆಲದ ಮೇಲೆ ಕಾಲುಗಳನ್ನು ಮಡಚಿಕೊಂಡು ಕುಳಿತುಕೊಳ್ಳಬೇಕು, ಊಟದ ನಂತರ ಕಾಲುಗಳ ರಕ್ತ ಪೂರೈಕೆ ಸರಿಯಾಗಿ ಆಗಲು ಶತಪತ (ನೂರು ಹೆಜ್ಜೆ ನಡೆಯ) ಬೇಕು ಎನ್ನುವ ಒಂದು ನಿಯಮವಿದೆ;  ಕರಿದ, ಬಹಳಷ್ಟು ಚೀಜ್ ಅಥವಾ ಬಟರ (ಬೆಣ್ಣೆ) ಹಾಕಿರುವ ಸ್ನಿಗ್ಧ ಪದಾರ್ಥಗಳನ್ನು ಸೇವಿಸಿದಾಗ ಅದು ಹೊಟ್ಟೆಯಲ್ಲಿ ಎಲ್ಲಿಯೂ ಮೆತ್ತಿಕೊಂಡು ಇರಬಾರದೆಂದು; ಬಿಸಿ ನೀರು ಕುಡಿಯಬೇಕು ಎಂಬ ಒಂದು ನಿಯಮವಿದೆ. ಇಂದು ಬಟರ ಮತ್ತು ಚೀಜ್ ಹಾಕಿರುವ ಪಾವಭಾಜಿ, ಪಿಜ್ಜಾ, ಬರ್ಗರ ಇಂತಹ ಪದಾರ್ಥಗಳನ್ನು ತಿಂದ ಮೇಲೆ ಶೀತಪೇಯವನ್ನು ಕುಡಿಯುವ ಪದ್ಧತಿಯಿದೆ. ಇದು ನಿಯಮಬಾಹ್ಯ ಆಹಾರವಾಗಿದೆ. ಇದರಿಂದ  ಬಾವು ಬರುವಂತಹ  ಕಷ್ಟಕರ ರೋಗಗಳು ಬರಬಹುದು.

೨. ಕಡಿಮೆ ಬೇಯಿಸಿದ ಅಥವಾ ಹಸಿ ಪದಾರ್ಥಗಳಿಂದ ಹೊಟ್ಟೆಯ ರೋಗಗಳು ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ಸೇವಿಸಬಾರದು !

ಒಬ್ಬ ಹುಡುಗನಿಗೆ ಮಲೇರಿಯಾ ಆಗಿತ್ತು. ಮಲೇರಿಯಾ ರೋಗದಲ್ಲಿ ಮೊದಲೇ ಹಸಿವು ಮತ್ತು ಜೀರ್ಣಶಕ್ತಿ ಬಹಳ ಕಡಿಮೆ ಆಗಿರುತ್ತದೆ; ಅದರಲ್ಲಿ ಔಷಧಿಗಳಿಂದಾಗಿ ಹಸಿವು ಸಂಪೂರ್ಣ ನಾಶವಾಗುತ್ತದೆ. ಇದರಿಂದ ಬಹಳ ನಿಃಶಕ್ತಿ ಇರುವಾಗ, ಆ ಹುಡುಗನು ಅದರಿಂದ ಬೇಗನೆ ಹೊರಗೆ ಬರಲು ಪೌಷ್ಠಿಕ ಆಹಾರವೆಂದು ಹಸಿ ತರಕಾರಿಗಳನ್ನು (ಸಲಾಡ) ಮತ್ತು ಮೊಳಕೆ ಬಂದ ಹಸಿ ದ್ವಿದಳ ಧಾನ್ಯಗಳನ್ನು ಸೇವಿಸಲು ಪ್ರಾರಂಭಿಸಿದನು. ೮ ದಿನಗಳ ನಂತರ ಅವನಿಗೆ ಪುನಃ ಜ್ವರ ಬಂದಿತು. ಈ ಸಲ ಎಲ್ಲ ತಪಾಸಣೆಗಳನ್ನು ಮಾಡಿದರೂ ಜ್ವರದ ಕಾರಣ ತಿಳಿಯಲಿಲ್ಲ. ಪಚನಶಕ್ತಿ ಕಡಿಮೆಯಿರುವಾಗ ಇಂತಹ ಹಸಿ ಅಥವಾ ಅರ್ಧಂಬರ್ಧ ಬೇಯಿಸಿದ ಆಹಾರ ಪದಾರ್ಥಗಳನ್ನು ತಿನ್ನುವುದು ನಿಯಮಬಾಹ್ಯ ಆಹಾರವಾಗಿದೆ. ‘ಚೈನೀಸ್’ ಪದಾರ್ಥಗಳಲ್ಲಿ ತರಕಾರಿ ಮತ್ತು ಅಕ್ಕಿಯಂತಹ ಪದಾರ್ಥಗಳನ್ನು ಹೆಚ್ಚಾಗಿ ಅರ್ಧವೇ ಬೇಯಿಸಿರುತ್ತಾರೆ. ಉಪಾಹಾರ ಗೃಹಗಳಲ್ಲಿನ ತಂದೂರಿ ರೋಟಿ, ಉತ್ತಪ್ಪಾ, ದೋಸೆ ಇಂತಹ ಪದಾರ್ಥಗಳು ಬಹಳಷ್ಟು ಸಲ ಹೊರಗಿನಿಂದ ಸುಟ್ಟಿದ್ದು ಮತ್ತು ಒಳಗಿನಿಂದ ಹಸಿಬಿಸಿಯಾಗಿರುತ್ತವೆ. ಇವು ನಿಯಮಬಾಹ್ಯ ಆಹಾರಗಳಾಗಿವೆ. ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ಹೊಟ್ಟೆಯ ಅನೇಕ ರೋಗಗಳು ನಿರ್ಮಾಣವಾಗಬಹುದು.

೩. ಸಂಯೋಗವಿರುದ್ಧ ಪದಾರ್ಥಗಳನ್ನು ಒಟ್ಟಿಗೆ ತಿನ್ನುವುದರಿಂದ ತ್ವಚೆ ರೋಗಗಳು ಅಥವಾ ರಕ್ತ ಕ್ಷಯವಾಗುವ ಸಾಧ್ಯತೆ ಅಧಿಕವಾಗಿರುತ್ತದೆ

ಆಹಾರಶಾಸ್ತ್ರದಲ್ಲಿ ಕೆಲವು ಪದಾರ್ಥಗಳನ್ನು ಒಟ್ಟಿಗೆ ತಿನ್ನುವುದು ನಿಷಿದ್ಧವಾಗಿದೆ. ಮದ್ಯ, ಖಿಚಡಿ, ಪಾಯಸ ಅಥವಾ ಹಾಲು, ಬಾಳೆಹಣ್ಣು, ತಾಳೆಹಣ್ಣು, ಮೊಸರು, ಮಜ್ಜಿಗೆ ಈ ಗುಂಪಿನಲ್ಲಿನ ಯಾವುದೇ ೨ ಪದಾರ್ಥಗಳನ್ನು ಒಟ್ಟಿಗೆ ತಿನ್ನುವುದು ಸಂಯೋಗ ವಿರುದ್ಧವಾಗಿದೆ. ಈ ರೀತಿಯ ಆಹಾರಗಳಿಂದ ರಸ ಮತ್ತು ರಕ್ತಧಾತು ಕೆಟ್ಟು, ತ್ವಚೆಯ ವ್ಯಾಧಿಗಳು ಅಥವಾ ರಕ್ತಕ್ಷಯಗಳಂತಹ ವ್ಯಾಧಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

೪. ಮನಸ್ಸಿನ ವಿರುದ್ಧ ಸೇವಿಸಿದ ಆಹಾರದಿಂದ ಪೋಷಣೆಯಾಗುವುದಿಲ್ಲ, ಆದುದರಿಂದ ಅದರಿಂದ ಶರೀರಕ್ಕೆ ಏನೂ ಉಪಯೋಗವಾಗುವುದಿಲ್ಲ

೮ ವರ್ಷದ ಒಬ್ಬ ಬಾಲಕನಿಗೆ ಹಾಲು ಇಷ್ಟವಾಗುತ್ತಿರಲಿಲ್ಲ, ಆದರೆ ಜಾಹೀರಾತುಗಳನ್ನು ನೋಡಿ ನೋಡಿ ಅವನ ತಾಯಿಗೆ ಮಾತ್ರ ಹಾಲು ತೆಗೆದುಕೊಳ್ಳದಿದ್ದರೆ, ತನ್ನ ಮಗುವಿನ ಬೆಳವಣಿಗೆಯೇ ಆಗುವುದಿಲ್ಲ ಎಂದು ಅನಿಸುತ್ತಿತ್ತು. ಪ್ರತಿದಿನ ಆ ತಾಯಿ ತನ್ನ ಮಗನಿಗೆ ಬಲವಂತವಾಗಿ ಹಾಲು ಕುಡಿಸುತ್ತಿದ್ದಳು ಮತ್ತು ಅವನು ೧೫ ನಿಮಿಷಗಳಲ್ಲಿ ಅದನ್ನು ವಾಂತಿ ಮಾಡುತ್ತಿದ್ದನು. ‘ಅವನು ವಾಂತಿ ಮಾಡುತ್ತಿದ್ದರೆ, ಏಕೆ ಹಾಲು ಕೊಡುತ್ತೀಯಾ ?’ ಎಂದು ಕೇಳಿದರೆ, ಅವಳು ನನಗೆ, ಹಾಲು ‘೧೫ ನಿಮಿಷಗಳಾದರೂ ಹೊಟ್ಟೆಯಲ್ಲಿರುತ್ತದೆಯಲ್ಲ, ಅಷ್ಟು ಸಮಯದಲ್ಲಿ ಶರೀರ ಅದರ ಕೆಲವು ಘಟಕಗಳನ್ನು ಸ್ವೀಕರಿಸುತ್ತಿರಬಹುದು, ಅಷ್ಟೇ ಲಾಭ’ ಎಂದು ಹೇಳುತ್ತಿದ್ದಳು. ಈ ರೀತಿ ಇಷ್ಟವಾಗದ ಪದಾರ್ಥಗಳನ್ನು ಮನಸ್ಸಿನ ವಿರುದ್ಧ ತಿನ್ನಲು ಕೊಡುವುದಕ್ಕೆ ‘ಹೃದಯವಿರುದ್ಧ ತಿನ್ನಲು ಕೊಡುವುದು’ ಎಂದು ಹೇಳುತ್ತಾರೆ.

ದೊಡ್ಡವರಿಗೆ ತಮ್ಮ ಇಷ್ಟದ ಪದಾರ್ಥಗಳನ್ನು ತಿನ್ನಲು ಮತ್ತು ಇಷ್ಟವಿಲ್ಲದ ಪದಾರ್ಥಗಳನ್ನು ತಿನ್ನದಿರಲು ಸ್ವಾತಂತ್ರ್ಯವಿರುತ್ತದೆ, ಆದರೆ ಚಿಕ್ಕ ಮಕ್ಕಳ ಮೇಲೆ ಮಾತ್ರ ಬಲವಂತವನ್ನು ಮಾಡಲಾಗುತ್ತದೆ. ಹಾಲು, ತೊಪ್ಪಲು ಪಲ್ಯ, ಹಾಗಲಕಾಯಿ, ಸಬ್ಬಸಿಗೆ ಇಂತಹ ಇಷ್ಟವಿಲ್ಲದ ಪದಾರ್ಥಗಳನ್ನು ಅವರಿಗೆ ಇಷ್ಟವಿಲ್ಲದಿದ್ದರೂ ತಿನ್ನಬೇಕಾಗುತ್ತದೆ. ಪೋಷಕರು ತಮ್ಮ ಬಾಲ್ಯದಲ್ಲಿ ಅವುಗಳನ್ನು ತಿಂದಿರುವುದಿಲ್ಲ, ಆದರೆ ಮಕ್ಕಳಿಗೆ ಮಾತ್ರ ಅವುಗಳಿಂದ ಬಿಡುಗಡೆಯಿಲ್ಲ. ಪದಾರ್ಥಗಳು ಪೌಷ್ಠಿಕವಾಗಿದ್ದರೂ ಅವುಗಳನ್ನು ಮನಸ್ಸಿನ ವಿರುದ್ಧ ತಿಂದರೆ ಅದರಿಂದ ಶರೀರಕ್ಕೆ ಯಾವುದೇ ಉಪಯೋಗವಾಗುವುದಿಲ್ಲ ?

೫. ಹುಳ ಹಿಡಿದ, ಕೊಳೆತ, ಮುಗ್ಗುಲು ಬಂದಿರುವ ಮತ್ತು ಒಣಗಿದ ತರಕಾರಿಗಳು ಶರೀರಕ್ಕೆ ಹಾನಿಕರವಾಗಿದೆ ಹಾಗಾಗಿ ಇಂತಹ ತರಕಾರಿಗಳನ್ನು ಸೇವಿಸಬಾರದು!

ಒಮ್ಮೆ ತರಕಾರಿ ಮಾರುಕಟ್ಟೆಯಲ್ಲಿ ಓರ್ವ ಗೃಹಿಣಿಯು ತರಕಾರಿ ಮಾರುವವನೊಂದಿಗೆ ೫ ರೂಪಾಯಿಗಳಿಗಾಗಿ ವಾದ ಮಾಡುತ್ತಿದ್ದಳು, ‘ನೀವು ತರಕಾರಿಗಳನ್ನು ಬಹಳ ದುಬಾರಿ ಮಾರುತ್ತೀರಿ, ನಾನು ಯಾವಾಗಲೂ ಇಲ್ಲಿಯೇ ಬಂದು ತರಕಾರಿಗಳನ್ನು ತೆಗೆದುಕೊಳ್ಳುತ್ತೇನೆ. ಬೇರೆ ತರಕಾರಿ ಮಾರುವವರಲ್ಲಿ ಬೆಲೆ ಬಹಳ ಕಡಿಮೆಯಿದೆ ಎಂದು ಹೇಳುತ್ತಿದ್ದಳು. ಆಗ ತರಕಾರಿ ಮಾರುವವನು ಸಿಡಿಮಿಡಿಗೊಂಡು, “ಅಮ್ಮಾ, ಇದು ಆರಿಸಿಟ್ಟ ತರಕಾರಿ. ಇದರಲ್ಲಿನ ಹಾಳಾದ ತರಕಾರಿಯನ್ನು ನಾವು ಬೇರೆ ಚೀಲದಲ್ಲಿ ತೆಗೆದಿಟ್ಟಿದ್ದೇವೆ. ಅದನ್ನು ಅಕ್ಕಪಕ್ಕದ ಉಪಹಾರಗೃಹದವರು ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ನೀವು ಕೇಳಿದಷ್ಟು ಹಣ ಕೊಟ್ಟು ಅದನ್ನು ತಿನ್ನುತ್ತೀರಿ, ಆದರೆ ಬಡವನಿಗೆ ಮಾತ್ರ ೫ ರೂಪಾಯಿ ಕೊಡಲು ಹಿಂದೆ ಮುಂದೆ ನೋಡುತ್ತಿದ್ದೀರಿ?” ಎಂದು ಹೇಳಿದನು, ಆಹಾರ ಪದಾರ್ಥಗಳು ಗುಣಸಂಪನ್ನವಾಗಿರುವುದು ಆವಶ್ಯಕವಾಗಿರುತ್ತದೆ. ಹುಳ ಹಿಡಿದ, ಕೊಳೆತ, ಮುಗ್ಗಲು ಬಂದ ಮತ್ತು ಒಣಗಿದ ತರಕಾರಿಗಳಿಂದ ಉತ್ತಮ ಮತ್ತು ಶುದ್ಧ ಪೌಷ್ಠಿಕಾಂಶಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಮಾರಾಟದ  ಖಾದ್ಯ ಪದಾರ್ಥಗಳಿಗೆ ಅವರು ಏನು ಉಪಯೋಗಿಸುತ್ತಾರೆ, ಹೇಗೆ ತಯಾರಿಸತ್ತಾರೆ ಎಂದು ನಮಗೆ ತಿಳಿದಿರುವುದಿಲ್ಲ, ನಾವು ಮಾತ್ರ ರುಚಿಯಾಗಿದೆ ಎನ್ನುತ್ತಾ ತಿನ್ನುತ್ತೇವೆ.

ಒಬ್ಬ ಆಹಾರ ಪರಿವೀಕ್ಷಕನು ‘ಬಿಸ್ಕೀಟುಗಳನ್ನು ತಯಾರಿಸುವ ಅನೇಕ ಹೆಸರಾಂತ ಕಂಪನಿಗಳು ಹುಳಹಿಡಿದ ಮತ್ತು ಬುರುಸು ಬಂದು ಹಾಳಾಗಿರುವ ಧಾನ್ಯಗಳನ್ನು ಉಪಯೋಗಿಸುತ್ತಾರೆ’, ಎಂದಿದ್ದನು. ‘ರೆಡಿ ಟು ಕುಕ್ (ಬೇಯಿಸಲು ಸಿದ್ಧ) ಪದಾರ್ಥಗಳಲ್ಲಿಯಂತೂ ಒಣಗಿದ ತರಕಾರಿಗಳನ್ನು ಉದ್ದೇಶಪೂರ್ವಕವಾಗಿ ಉಪಯೋಗಿಸುತ್ತಾರೆ. ನನ್ನ ಒಬ್ಬ ಸ್ನೇಹಿತೆ ಹಣ ಉಳಿಸಲು ರಾತ್ರಿ ತಡಮಾಡಿ ತರಕಾರಿಗಳನ್ನು ಖರೀದಿಸಲು ಹೋಗುತ್ತಿದ್ದಳು; ಮಾರಿ ಹೋಗದ ತರಕಾರಿಗಳು ಅವಳಿಗೆ ಅರ್ಧ ಬೆಲೆಗೆ ಸಿಗುತ್ತಿದ್ದವು; ಆದರೆ ಆ ತರಕಾರಿಗಳೆಂದರೆ ಜನರು ಬಿಟ್ಟು ಹೋಗಿರುವ ಕಸವೇ ಆಗಿರುತ್ತಿತ್ತು. ಆ ತರಕಾರಿಗಳಲ್ಲಿ ಉಳಿಯುವ ಹಣ ಮತ್ತು ಅದರಿಂದ ಉಂಟಾಗುವ ರೋಗಗಳಿಗೆ ವ್ಯಯವಾಗುವ ಹಣ ಇವುಗಳ ತಾಳೆ ಹಾಕಿ ನಾನು ಒಮ್ಮೆ ಅವಳಿಗೆ ತೋರಿಸಿದೆನು. ಈ ರೀತಿ ಗುಣಸಂಪನ್ನ ಇಲ್ಲದಿರುವ ಆಹಾರವೆಂದರೆ ಅಪೌಷ್ಠಿಕ ಆಹಾರ.

೬.ಅನ್ನಪಚನವಾಗಲು ಪದಾರ್ಥಗಳು ಉಷ್ಣ, ತಾಜಾ ಮತ್ತು ಸ್ನಿಗ್ಧವಾಗಿರುವುದು ಆವಶ್ಯಕವಾಗಿದ್ದು, ಅವುಗಳನ್ನು ಏಕಾಗ್ರಚಿತ್ತದಿಂದ ಮತ್ತು ಹೊಟ್ಟೆಯಲ್ಲಿ ಸ್ವಲ್ಪ ಜಾಗವನ್ನು ಬಿಟ್ಟು ಸೇವಿಸಬೇಕು !

‘ಆಯುರ್ವೇದೀಯ ಆಹಾರಮಂತ್ರ’ ಈ ನನ್ನ (ಮರಾಠಿ) ಪುಸ್ತಕದಲ್ಲಿ ಭೋಜನದ ಸವಿಸ್ತಾರ ಮಾಹಿತಿಯನ್ನು ನೀಡಿದ್ದೇನೆ. ಹಸಿವಾದಾಗ ಕೈಗಳನ್ನು ಸ್ವಚ್ಛ ತೊಳೆದುಕೊಂಡು ಉಷ್ಣ, ತಾಜಾ, ಸ್ನಿಗ್ಧ ಪದಾರ್ಥಗಳನ್ನು ಏಕಾಗ್ರಚಿತ್ತದಿಂದ ಮತ್ತು ಹೊಟ್ಟೆಯಲ್ಲಿ ಸ್ವಲ್ಪ ಜಾಗವನ್ನು ಬಿಟ್ಟು ಊಟ ಮಾಡಬೇಕು, ಎನ್ನುವ ಕೆಲವು ನಿಯಮಗಳಿವೆ. ಆದರೆ ಅವುಗಳ ಕಡೆಗೆ ದುರ್ಲಕ್ಷ ಮಾಡಿ ಸೇವಿಸಿದ ಆಹಾರವೆಂದರೆ ‘ನಿಯಮಬಾಹ್ಯ ಆಹಾರ’.

ಸುಗ್ರಾಸ ಅನ್ನದ ಆನಂದವನ್ನು ಮನಸ್ಸಿಗೂ ತೆಗೆದುಕೊಳ್ಳಲು ಬರುತ್ತದೆ; ಆದರೆ ಈಗ ದೂರದರ್ಶನದ ಎದುರಿಗೆ ಕುಳಿತುಕೊಂಡು ಅದರಲ್ಲಿ ಏಕಾಗ್ರವಾಗಿ ಊಟ ಮಾಡುವ ಪದ್ಧತಿ ಬಂದಿದೆ. ಇಂತಹ ಸಮಯದಲ್ಲಿ ಎದುರಿಗೆ ನಡೆದಿರುವ ಧಾರಾವಾಹಿ, ಚಲನಚಿತ್ರ ಅಥವಾ ಸುದ್ಧಿಗಳಲ್ಲಿನ ತೀವ್ರ ಭಾವನೆಗಳು ನಮ್ಮ ಮನಸ್ಸಿನ ಮೇಲೆ ರಾಜ್ಯವನ್ನು ಮಾಡುತ್ತಿರುತ್ತವೆ. ಶಾಸ್ತ್ರದಲ್ಲಿ ನಿಮ್ಮ ಆಹಾರ ಎಷ್ಟೇ ಪೋಷಕ, ಹಗುರ ಮತ್ತು ಉತ್ತಮವಾಗಿದ್ದರೂ, ಅದನ್ನು ಸೇವಿಸುವಾಗ ಮನಸ್ಸಿನಲ್ಲಿ ಕಾಮ, ಕ್ರೋಧ, ಮದ, ಮತ್ಸರ ಮತ್ತು ಲೋಭ ಇಂತಹ ಭಾವನೆಗಳಿದ್ದರೆ, ಅದು ಯೋಗ್ಯ ರೀತಿಯಲ್ಲಿ ಪಚನವಾಗುವುದಿಲ್ಲ ಎಂದು ಹೇಳಲಾಗಿದೆ.

೭. ಋತುಗಳಿಗನುಸಾರ ಉಪಲಬ್ಧವಿರುವ ಹಣ್ಣು, ತರಕಾರಿ, ಧಾನ್ಯ, ಹಾಗೆಯೇ ಹಬ್ಬಗಳಂದು ಮಾಡುವ ಅಡುಗೆಯಲ್ಲಿ ವೈವಿಧವಿದ್ದು ಅದು ಆರೋಗ್ಯಕ್ಕೆ ಹಿತಕರವಾಗಿದೆ

ಮೇಲೆ ಹೇಳಿದ ಆಹಾರ ನಿಷೇಧದ ನಿಯಮಗಳು ಯಾರಿಗೂ ಇಷ್ಟವಾಗುವುದಿಲ್ಲ. ‘ಇಷ್ಟೆಲ್ಲ ಹೇಳುವುದಕ್ಕಿಂತ ಏನು ಸೇವಿಸಬೇಕು ಅದನ್ನು ಹೇಳಿರಿ’, ಎಂದು ಜನರು ವೈದ್ಯರನ್ನೇ ತಡವರಿಸುವಂತೆ ಮಾಡಿ ಕೇಳುತ್ತಾರೆ. ಬೇಡವಾದ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ರೋಗಗಳು ಬರುತ್ತವೆ; ಆದ್ದರಿಂದ ಯಾವುದಾದರೊಂದು ‘ನಿರ್ದಿಷ್ಟ ಪದಾರ್ಥವನ್ನು ತಿನ್ನಬಾರದು’, ಎಂದು ಮೊದಲೇ ಹೇಳಬೇಕಾಗುತ್ತದೆ. ‘ಯಾವುದನ್ನು ತಿನ್ನಬಾರದು ಎಂದು ಹೇಳಲಾಗಿದೆಯೋ, ಅದರ ವಿರುದ್ಧ ಆಹಾರವನ್ನು ತಿನ್ನಬೇಕು’ ಇದೊಂದು ಸರಳ ನಿಯಮವಾಗಿದೆ, ಉದಾ. ನಿಯಮಗಳ ವಿರುದ್ಧ ತಿನ್ನಬಾರದು, ಅಂದರೆ ಆಹಾರವನ್ನು ನಿಯಮಗಳಂತೆ ತಿನ್ನಬೇಕು ಎಂದಾಗುತ್ತದೆ. ‘ಅಗ್ನಿಯ (ಹಸಿವಿನ) ವಿರುದ್ಧ ತಿನ್ನಬಾರದು’, ಇದರರ್ಥ ಅಗ್ನಿಯ ಪ್ರಮಾಣ ಅಥವಾ ಹಸಿವಿನ ಪ್ರಮಾಣದಲ್ಲಿ ತಿನ್ನಬೇಕು, ಇದು ಸರಳ ಉತ್ತರವಾಗಿದೆ. ‘ತಮ್ಮ ರೂಢಿಯಲ್ಲಿ ಇಲ್ಲದಿರುವ ಪದಾರ್ಥಗಳನ್ನು ತಿನ್ನಬಾರದು’, ಎನ್ನುವುದು ಇದರಲ್ಲಿ ಅಡಗಿದ ಅರ್ಥವಾಗಿದೆ.

೮. ತಮ್ಮ ಪಚನಶಕ್ತಿಯನ್ನು ಉತ್ತಮಪಡಿಸಿಕೊಳ್ಳಬೇಕು !

ನಿಯಮಗಳ ವಿರುದ್ಧ ಭೋಜನ ಜೀರ್ಣವಾಗಲು ಪಚನಶಕ್ತಿ ಉತ್ತಮವಾಗಿರಬೇಕಾಗುತ್ತದೆ. ಉತ್ತಮ ಪಚನಶಕ್ತಿ ಒಂದೋ ಪ್ರಕೃತಿಯಲ್ಲಿರುತ್ತದೆ, ಅಂದರೆ ಅನುವಂಶಿಕವಾಗಿ ಪ್ರಾಪ್ತವಾಗಿರುತ್ತದೆ ಅಥವಾ ನಮಗೆ ಅದನ್ನು ಗಳಿಸಬೇಕಾಗುತ್ತದೆ. ಅದನ್ನು ಗಳಿಸಲು ಶಾರೀರಿಕ ಕಷ್ಟ ಪಡುವುದು ಒಂದೇ ಮಾರ್ಗವಿದೆ. ನಗರಗಳ ಜೀವನದಲ್ಲಿ ನಾವು ಬಹಳಷ್ಟು ಯಂತ್ರಗಳನ್ನು ಉಪಯೋಗಿಸುತ್ತಿದ್ದೇವೆ. ‘ಕಡಿಮೆ ಕಷ್ಟ ಮತ್ತು ಸಾಧ್ಯವಾದಷ್ಟು ಅಧಿಕ ಆಹಾರ’, ಎನ್ನುವ ತಪ್ಪು ಸೂತ್ರವನ್ನು ನಾವು ಅಂಗೀಕರಿಸಿದ್ದೇವೆ. ಯಾರಿಗೆ ನಾಲಿಗೆಯ ಎಲ್ಲ ಆಸೆಗಳನ್ನು ಪೂರೈಸುವುದಿರುತ್ತದೆಯೋ, ಅವರು ತಮಗಾಗಿ ತಮ್ಮ ಕುಟುಂಬಕ್ಕಾಗಿ ಮತ್ತು ದೇಶಕ್ಕಾಗಿ ಬಹಳಷ್ಟು ಶಾರೀರಿಕ ಕಷ್ಟವನ್ನು ಮಾಡಿ ಬಹಳಷ್ಟು ಹಸಿವು ಆಗುವಷ್ಟು ಅಂದರೆ, ಕಲ್ಲನ್ನು ಜೀರ್ಣಿಸಿಕೊಳ್ಳುವಷ್ಟು ಹಸಿವನ್ನು ನಿರ್ಮಿಸಿಕೊಳ್ಳಬೇಕು.

 – ವೈದ್ಯ ಸುಚಿತ್ರಾ ಕುಲಕರ್ಣಿ (೨೯.೧೨.೨೦೧೯)