ಜಯಪುರದಲ್ಲಿ ಲವ್‌ ಜಿಹಾದ : ಹಿಂದೂ ಯುವತಿಯೊಂದಿಗೆ ‘ನಿಕಾಹ’ ಮಾಡಿಕೊಂಡವರಿಗೆ ೨೫ ಲಕ್ಷ ರೂಪಾಯಿಗಳು!

(* ನಿಕಾಹ ಅಂದರೆ ಇಸ್ಲಾಮಿ ಪದ್ಧತಿಯ ಅನುಸಾರ ಮಾಡಲಾದ ವಿವಾಹ)

ಯುವತಿಯೊಂದಿಗೆ ನಿಕಾಹ ಮಾಡಲು ನೀಡದಿದ್ದರೆ, ತಂದೆ ಹಾಗೂ ಯುವತಿಯ ಶಿರಚ್ಛೇದ ಮಾಡುವುದಾಗಿ ಮತಾಂಧರ ಬೆದರಿಕೆ !

ಜಯಪುರ – ಇಲ್ಲಿನ ಸಲಮಾನರವರ ಮಕ್ಕಳಾದ ಅಸಲೀನ ಮತ್ತು ಕಾಲೂ ಖಾನರವರು ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ೨ ಬಾರಿ ಅಪಹರಿಸಿದರು. ಎರಡೂ ಬಾರಿ ಪೊಲೀಸರು ಆಕೆಯನ್ನು ಹುಡುಕಿ ಆಕೆಯನ್ನು ಪುನಃ ಕರೆತಂದರು. ಸದ್ಯ ಆಕೆಯು ಬಾಲಿಕಾಗೃಹದಲ್ಲಿ ಇದ್ದಾಳೆ. ಆರೋಪಿ ಸಲಮಾನನು ದೂರು ನೀಡಿರುವ ಕುಟುಂಬದವರಿಗೆ ಬೆದರಿಕೆ ಹಾಕುತ್ತ, ‘ನಾನು ಓರ್ವ ಹಿಂದೂ ಹುಡುಗಿಯೊಂದಿಗೆ ‘ನಿಕಾಹ’ ಮಾಡಿಕೊಂಡರೆ ನಮಗೆ ನಮ್ಮ ಸಮಾಜದಿಂದ ೨೫ ಲಕ್ಷ ರೂಪಾಯಿಗಳು ದೊರೆಯುತ್ತವೆ. ಜುಲೈ ೧೫ರಂದು ನಿಮ್ಮ ಮಗಳು ೧೮ ವರ್ಷದವಳಾಗುವಳು. ನಾವು ಪುನಃ ಆಕೆಯ ಅಪಹರಣ ಮಾಡಿ ಆಕೆಯೊಂದಿಗೆ ನಿಕಾಹ ಮಾಡಿಕೊಳ್ಳುತ್ತೇವೆ. ನೀವು ಇದಕ್ಕೆ ವಿರೋಧಿಸಿದರೆ ಉದಯಪುರದಲ್ಲಿನ ಘಟನೆಯಂತೆ (ಕನ್ಹೈಯಾಲಾಲರವರ ಶಿರಚ್ಛೇದ ಮಾಡಿದಂತೆ) ನಿಮ್ಮ (ಯುವತಿಯ ತಂದೆಯ) ಹಾಗೂ ಯುವತಿಯ ಶಿರಚ್ಛೇದ ಮಾಡುವೆವು!’ ಎಂದು ಹೇಳಿದ್ದಾನೆ. ಈ ಘಟನೆಯ ಬಗ್ಗೆ ಪೊಲೀಸ ಠಾಣೆಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.

ಯುವತಿಯ ಕುಟುಂಬದವರು ‘ಸಲಮಾನನು ಯುವತಿಯೊಂದಿಗೆ ನಿಕಾಹ ಮಾಡಿದ ನಂತರ ನಾವು ಆಕೆಗೆ ತಲಾಖ ನೀಡುತ್ತೇವೆ, ಅಥವಾ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾನೆ’ ಎಂದು ಹೇಳಿದ್ದಾರೆ !

ಸಂಪಾದಕೀಯ ನಿಲುವು

* ಲವ್‌ ಜಿಹಾದ ಇದು ಕೇವಲ ಷಡ್ಯಂತ್ರವಾಗಿರದೇ ಹಿಂದುತ್ವನಿಷ್ಠರು ರಚಿಸಿರುವ ಕಟ್ಟುಕತೆಯಾಗಿದೆ’ ಎಂದು ಆಗಾಗ ಆರೋಪಿಸುವ ಜಾತ್ಯಾತೀತವಾದಿಗಳ ಗುಂಪು ಹಾಗೆಯೇ ಪಾಶ್ಚಾತ್ಯ ಪ್ರಸಾರ ಮಾಧ್ಯಮಗಳಿಗೆ ಈಗ ಏನಾದರೂ ಹೇಳಲಿಕ್ಕಿದೆಯೇ ?

* ಇಲ್ಲಿಯವರೆಗೆ ಇಸ್ಲಾಮಿಕ ಸ್ಟೇಟನಿಂದ ಶಿರಚ್ಛೇದದಂತಹ ಘಟನೆಗಳು ಸಾವಿರಾರು ಕಿ.ಮಿ ದೂರದಲ್ಲಿರುವ ಸಿರಿಯಾ, ಇರಾಕ ಇತ್ಯಾದಿ ದೇಶಗಳಲ್ಲಿ ನಡೆಯುತ್ತಿದ್ದವು. ಈಗ ಇಂತಹ ಘಟನೆಗಳು ಹಾಗೂ ಇಂತಹ ಬೆದರಿಕೆಗಳನ್ನು ಭಾರತದಲ್ಲಿ ಹಿಂದೂಗಳಿಗೆ ನೀಡಲಾಗುತ್ತಿದೆ. ಹಿಂದೂಗಳೇ, ಇದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಈಗಲಾದರೂ ಸಂಘಟಿತಾಗಿರಿ !

* ಈ ೨೫ ಲಕ್ಷ ರೂಪಾಯಿಗಳನ್ನು ಯಾರು ಕೊಡುತ್ತಾರೆ ? ಎಂಬುದರ ಮಾಹಿತಿಯೂ ಹಿಂದೂಗಳ ಎದುರು ಬರಬೇಕು ಹಾಗೂ ಹೀಗೆ ನೀಡುವವರ ಮೇಲೆಯೂ ಕಠೋರ ಕಾರ್ಯಾಚರಣೆ ನಡೆಯಬೇಕು !