ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನಕ್ಕನುಸಾರ ಜಾಹೀರಾತುಗಳ ಧ್ಯೇಯವನ್ನು ಪೂರ್ಣಗೊಳಿಸುವಾಗ ಸಾಧಕರಿಗೆ ಬಂದ ಅನುಭೂತಿಗಳು

ಪೂ. ರಮಾನಂದ ಗೌಡ

‘ಸನಾತನದ ೭೫ ನೇ ಸಂತರಾದ ಪೂ. ರಮಾನಂದ ಗೌಡ (ರಮಾನಂದ ಅಣ್ಣ ನವರು) ಇವರು ಕರ್ನಾಟಕ ರಾಜ್ಯದಲ್ಲಿನ ಸಾಧಕರಿಗೆ ‘ಜಾಹೀರಾತುಗಳ ಸೇವೆಯನ್ನು ಒಳ್ಳೆಯ ರೀತಿಯಿಂದ ಹೇಗೆ ಮಾಡಬಹುದು ?’, ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಮಾಡಿದರು. ಆ ಮಾರ್ಗದರ್ಶನದ ನಂತರ ಸಾಧಕರು ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಿದರು. ಕೊರೊನಾ ಮಹಾಮಾರಿಯಿಂದ ಬಿಕಟ್ಟಾದ ಸ್ಥಿತಿಯಿಂದ ಮತ್ತು ಹದಗೆಟ್ಟಿರುವ ಜನಜೀವನದಿಂದ ಯಾರಿಗೂ ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಹೀಗಿದ್ದರೂ ಸಾಧಕರು ಮನೆಯಲ್ಲಿದ್ದು ಸತತವಾಗಿ ಸತ್‌ನಲ್ಲಿರುವ ತಳಮಳದಿಂದ ಸಾಧಕರು ಜಾಹೀರಾತುಗಳ ಸೇವೆಯನ್ನು ಪೂರ್ಣಗೊಳಿಸಿದರು. ಅವರು ಇಟ್ಟಿರುವ ಧ್ಯೇಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರು. ‘ತಳಮಳ ಮತ್ತು ಶ್ರದ್ಧೆಯಿಂದ ಪ್ರಯತ್ನಿಸಿದರೆ ಶ್ರೀ ಗುರುಗಳ ಕೃಪೆ ಮತ್ತು ಗುರುತತ್ತ್ವವು ಹೇಗೆ ಕಾರ್ಯನಿರತವಾಗುತ್ತದೆ ?’, ಎಂಬುದರ ಪ್ರತ್ಯಕ್ಷ ಅನುಭೂತಿಯನ್ನು ಈ ಸೇವೆಯಿಂದ ಸಾಧಕರು ಪಡೆದರು. (ಭಾಗ ೧)

೧. ಪೂ. ರಮಾನಂದ ಅಣ್ಣನವರಿಂದ ಎಲ್ಲ ಸಾಧಕರಿಗಾಗಿ ‘ಆನ್‌ಲೈನ್’ ಸತ್ಸಂಗದ ಆಯೋಜನೆ

ಕರ್ನಾಟಕ ರಾಜ್ಯದಲ್ಲಿ ೨೦೨೦ ರಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನ ದರ್ಶನ’ ಎಂಬ ಕನ್ನಡ ಗ್ರಂಥದ ೧ ಆವೃತ್ತಿ ಮತ್ತು ಜಿಲ್ಲೆಯ ಸ್ತರದಲ್ಲಿ ಗುರುಪೂರ್ಣಿಮೆಗೆ ಸಂಬಂಧಿಸಿದ ೧೦ ವಿಶೇಷ ಸ್ಮರಣಿಕೆಗಳನ್ನು ಮುದ್ರಿಸುವ ಆಯೋಜನೆಯಾಗಿತ್ತು. ಈ ಅವಧಿಯಲ್ಲಿ ‘ಸಾಧಕರಿಗೆ ಆಧಾರವಾಗಬೇಕು ಮತ್ತು ಸಾಧಕರ ಹಾಗೂ ಸಮಾಜದಲ್ಲಿನ ವ್ಯಕ್ತಿಗಳ ಸಾಧನೆಯಾಗಬೇಕು’, ಎಂದು ಪೂ. ರಮಾನಂದ ಅಣ್ಣನವರು ಎಲ್ಲ ಜಿಲ್ಲೆಗಳ ಸಾಧಕರನ್ನು ಒಟ್ಟುಗೂಡಿಸಿ ಎಲ್ಲರಿಗಾಗಿ ‘ಆನ್‌ಲೈನ್’ ಸತ್ಸಂಗವನ್ನು ಆಯೋಜಿಸಿದರು.

ಪೂ. ಅಣ್ಣನವರು ಜಾಹೀರಾತುಗಳ ಸೇವೆಯ ಕುರಿತು ಸಾಧಕರಿಗೆ ಮಾಡಿದ ಮಾರ್ಗದರ್ಶನ

೨ ಅ. ಆಪತ್ಕಾಲದಲ್ಲಿ ಸ್ಥಿರವಾಗಿರಲು ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವೇಗವನ್ನು ಹೆಚ್ಚಿಸಬೇಕು ! : ‘ಆಪತ್ಕಾಲವು ಯಾವುದೇ ಸಮಯದಲ್ಲಿ ಬರಲಿ ಮತ್ತು ಹೇಗೇ ಇರಲಿ, ನಾವು ಸ್ಥಿರವಾಗಿದ್ದು ಸಾಧನೆಯನ್ನು ಮಾಡಬೇಕು. ನಾವು ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ವೇಗವನ್ನು ಹೆಚ್ಚಿಸಬೇಕು. ಸಾಧನೆಯೇ ನಮಗೆ ಆಧಾರವಾಗಿದೆ. ಯಾವುದೇ ಪರಿಸ್ಥಿತಿ ಬಂದರೂ, ನಮ್ಮ ಜೊತೆಗೆ ಗುರುದೇವರಿದ್ದಾರೆ. ಆದುದರಿಂದ ನಕಾರಾತ್ಮಕ ವಿಚಾರ ಮತ್ತು ಚಿಂತೆ ಮಾಡಬಾರದು. ನಾವು ಸತತ ಸತ್‌ನಲ್ಲಿರಬೇಕು. ನಾವು ಗುರುಗಳ ಸೇವೆಯಿಂದ ದೂರವಾಗಬಾರದು. ಆಪತ್ಕಾಲದ ಬಗ್ಗೆ ಅನೇಕ ವರ್ಷಗಳಿಂದ ಗುರುದೇವರು ನಮಗೆ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಅವರು ನಮ್ಮ ಮನಸ್ಸಿನ ಸಿದ್ಧತೆಯನ್ನು ಮಾಡಿಸಿಕೊಂಡಿದ್ದಾರೆ.

೨ ಆ. ಸಮಾಜದಲ್ಲಿನ ಸಾತ್ತ್ವಿಕ ಜೀವಗಳನ್ನು ಜಾಹೀರಾತುಗಳ ಮಾಧ್ಯಮದಿಂದ ಧರ್ಮಕಾರ್ಯದಲ್ಲಿ ಸೇರಿಸಿ ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳಬೇಕು ! : ಇಂತಹ ಸ್ಥಿತಿಯಲ್ಲಿ ನಮ್ಮ ವ್ಯಷ್ಟಿ ಮತ್ತು ಅದರ ಜೊತೆಗೆ ಸಮಷ್ಟಿ ಸಾಧನೆಯೂ ಆಗಬೇಕು. ಸಮಾಜದಲ್ಲಿ ಒಳ್ಳೆಯ ಮತ್ತು ಸಾತ್ತ್ವಿಕವಾಗಿರುವ ಜೀವಗಳಿವೆ, ಅವರಿಗೆ ಸಾಧನೆಯನ್ನು ಹೇಳಿ ಅವರಿಂದ ಧರ್ಮಕಾರ್ಯಕ್ಕಾಗಿ ಅರ್ಪಣೆಯನ್ನು ತೆಗೆದುಕೊಂಡು ಆ ಮಾಧ್ಯಮದಿಂದ ಅವರ ಸಾಧನೆಯನ್ನು ಮಾಡಿಸಿಕೊಳ್ಳಬೇಕು. ಶ್ರೇಷ್ಠವಾಗಿರುವ ಗುರು ಕಾರ್ಯಕ್ಕಾಗಿ, ಧರ್ಮಕಾರ್ಯಕ್ಕಾಗಿ ಜಾಹೀರಾತುಗಳ ಮಾಧ್ಯಮದಿಂದ ಅರ್ಪಣೆ ನೀಡುವುದರಿಂದ ಸಮಾಜದಲ್ಲಿನ ವ್ಯಕ್ತಿಗಳ ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಅಡಚಣೆಗಳು ದೂರವಾಗುತ್ತವೆ. ಅವರ ಪ್ರಾರಬ್ಧ, ಹಾಗೆಯೇ ಕೊಡುಕೊಳ್ಳುವ ಲೆಕ್ಕ ಕಡಿಮೆಯಾಗುತ್ತದೆ. ಸಾಧನೆಯಾಗಿ ಅವರ ರಕ್ಷಣೆಯೂ ಆಗುತ್ತದೆ.

೨ ಇ. ಸಮಾಜದಿಂದ ಧರ್ಮಕಾರ್ಯಕ್ಕಾಗಿ ಅರ್ಪಣೆಯನ್ನು ಮಾಡಿಸಿಕೊಳ್ಳುವಾಗ ಸಾಧಕರಿಗೆ ಆಗುವ ಲಾಭ : ನಾವು ಸಮಾಜದಲ್ಲಿ ಯಾವಾಗ ಜಾಹೀರಾತುಗಳನ್ನು ಕೇಳುತ್ತೇವೆಯೋ, ಆಗ ನಮ್ಮಲ್ಲಿನ ಸ್ವಭಾವದೋಷಗಳು ದೂರವಾಗಿ ಗುಣವೃದ್ಧಿಯಾಗುತ್ತದೆ, ನಮಗೆ ಸತತವಾಗಿ ಸತ್‌ನಲ್ಲಿರಲು ಆಗುತ್ತದೆ; ಹಾಗೆಯೇ ನಮ್ಮಲ್ಲಿ ಸೇವೆಯ ಚಿಂತನೆಯು ಹೆಚ್ಚುತ್ತದೆ.

೨ ಈ. ಜಿಜ್ಞಾಸುಗಳೊಂದಿಗೆ ಯಾವ ವಿಷಯದ ಬಗ್ಗೆ ಮಾತನಾಡಬೇಕು ? : ಜಿಜ್ಞಾಸುಗಳ ಮನಸ್ಸಿನ ಸ್ಥಿತಿಯನ್ನು ಅಧ್ಯಯನ ಮಾಡಿ ಅವರೊಂದಿಗೆ ಮಾತನಾಡಬೇಕು. ಅವರಿಗೆ ‘ಕೊರೊನಾ ಮಹಾಮಾರಿಯ ಮಾಧ್ಯಮದಿಂದ ಬಂದ ಸಂಕಟದ ಕಾರಣ ಮತ್ತು ಅದಕ್ಕೆ ಉಪಾಯಯೋಜನೆ’, ಇಂತಹ ವಿಷಯಗಳನ್ನು ಮಂಡಿಸಬೇಕು, ಹಾಗೂ ಸಾಧನೆಯ ಬಗ್ಗೆ ಮಾತನಾಡಬಹುದು.

೨ ಉ. ಜಾಹೀರಾತುದಾರರೊಂದಿಗೆ ಮಾತನಾಡುವಾಗ ನಮ್ಮ ಮನಸ್ಸಿನಲ್ಲಿ ‘ನಮ್ಮ ವಾಣಿಯಿಂದ ಗುರುದೇವರ ಚೈತನ್ಯವೇ ಕಾರ್ಯನಿರತವಾಗುತ್ತಿದೆ’, ಎಂಬ ಭಾವವಿರಬೇಕು.

೩. ಪೂ. ಅಣ್ಣನವರು ಸಾಧಕರಿಗೆ ಗುರುದೇವರ ರೂಪವನ್ನು ಸ್ಮರಿಸಿ ‘ಯಾರಿಂದ ಜಾಹೀರಾತುಗಳನ್ನು ತೆಗೆದುಕೊಳ್ಳಬಹುದು ?’, ಅಂತಹ ಜಿಜ್ಞಾಸುಗಳ ಪಟ್ಟಿಯನ್ನು ಸಿದ್ಧಪಡಿಸಿ ಧ್ಯೇಯವನ್ನು ಬರೆಯಲು ಹೇಳುವುದು

ಪೂ. ರಮಾನಂದ ಅಣ್ಣನವರು ಎಲ್ಲ ಸಾಧಕರಿಗೆ ೫ ನಿಮಿಷ ಕಣ್ಣುಗಳನ್ನು ಮುಚ್ಚಲು ಹೇಳಿದರು. ‘ಗುರುದೇವರು ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ರೂಪವಾಗಿದ್ದಾರೆ’, ಎಂಬ ಭಾವವನ್ನಿಟ್ಟು ಆ ರೂಪಕ್ಕೆ ಚರಣಗಳಿಂದ ಹಿಡಿದು ತಲೆಯವರೆಗೆ ಕಣ್ಣುತುಂಬ ನೋಡಲು ಹೇಳಿದರು. ಆ ಸಮಯದಲ್ಲಿ ‘ನಾವು ಯಾರ‍್ಯಾರಿಂದ ಜಾಹೀರಾತುಗಳನ್ನು ತೆಗೆದುಕೊಳ್ಳಬಹುದು ?’, ಎಂಬ ವಿಚಾರವನ್ನು ಮಾಡಿ ‘ಆ ಸಮಯದಲ್ಲಿ ಯಾರ ಯಾರ ಹೆಸರು ಕಣ್ಣುಗಳ ಮುಂದೆ ಬರುತ್ತವೆ ?’, ಅವರ ಹೆಸರುಗಳನ್ನು ಬರೆದು ಅದರ ಮುಂದೆ ಧ್ಯೇಯವನ್ನೂ ಬರೆಯಲು ಹೇಳಿದರು.

ಎಲ್ಲರೂ ಮೇಲಿನ ಭಾವಪ್ರಯೋಗವನ್ನು ಮಾಡಿ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳನ್ನು ಜವಾಬ್ದಾರ ಸಾಧಕರಿಗೆ ಕೊಟ್ಟರು. ಪ್ರತಿಯೊಬ್ಬರು ತಮ್ಮ ತಮ್ಮ ಧ್ಯೇಯವನ್ನು ಹೇಳಿದರು.

೪. ಪೂ. ಅಣ್ಣನವರ ಮಾರ್ಗದರ್ಶನದಿಂದ ಸಾಧಕರ ಮನಸ್ಸಿನ ನಕಾರಾತ್ಮಕ ವಿಚಾರಗಳು ದೂರವಾಗಿ ಅವರ ಉತ್ಸಾಹವು ಹೆಚ್ಚುವುದು

‘ಸೇವೆಯನ್ನು ಮಾಡುವಾಗ ನಮಗೆ ಗುರುದೇವರ ಅಸ್ತಿತ್ವವನ್ನು ಅನುಭವಿಸುವುದಿದೆ’, ಎಂದು ಪೂ. ಅಣ್ಣನವರು ಹೇಳಿದ್ದರು. ಆದುದರಿಂದ ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಮತ್ತು ನಿರುತ್ಸಾಹವು ದೂರವಾಯಿತು. ಕೌಟುಂಬಿಕ ಮತ್ತು ಆಧ್ಯಾತ್ಮಿಕ ಅಡಚಣೆಗಳಿಂದ ದಣಿದಿರುವ ಸಾಧಕರಿಗೆ ಪೂ. ಅಣ್ಣನವರ ಚೈತನ್ಯದಾಯಿ ಸತ್ಸಂಗದಿಂದ ಸಂಜೀವನಿಯಂತೆ ಪ್ರೇರಣೆ ಸಿಕ್ಕಿತು. ಸಾಧಕರಿಗೆ ಆಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆ ದೂರವಾಗಿ ಅವರಿಗೆ ಚೈತನ್ಯದ ಸ್ತರದಲ್ಲಿ ಲಾಭವಾಯಿತು.

೫. ‘ಗುರುಕೃಪೆ, ಸಾಧಕರ ಸಂಘಟಿತ ಪ್ರಯತ್ನ, ಸೇವೆಯ ತೀವ್ರ ತಳಮಳ’ ಇವುಗಳಿಂದ ಸಾಧಕರು ಜಾಹೀರಾತುಗಳ ಸಂದರ್ಭದಲ್ಲಿ ನಿರ್ಧರಿಸಿದ ಧ್ಯೇಯವು ಪೂರ್ಣವಾಗುವುದು

ಇವೆಲ್ಲದರ ಪರಿಣಾಮವೆಂದು ಎಲ್ಲರೂ ೧ ದಿನದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಗ್ರಂಥಕ್ಕಾಗಿ ಜಾಹೀರಾತುಗಳು, ೪ ದಿನಗಳಲ್ಲಿ ‘ಸನಾತನ ಪಂಚಾಂಗ’ಗಳಿಗಾಗಿ ಜಾಹೀರಾತುಗಳು ಮತ್ತು ೬ ದಿನಗಳಲ್ಲಿ ವಿಶೇಷ ಸ್ಮರಣಿಕೆಗಳ ಜಾಹೀರಾತುಗಳು ಪೂರ್ಣಗೊಳಿಸುವ ಧ್ಯೇಯವನ್ನಿಟ್ಟರು. ಸಾಧಕರ ಪ್ರಯತ್ನಗಳಿಂದಾಗಿ ಒಂದು ದಿನದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಮಯ ಜೀವನದರ್ಶನ’ ಈ ಗ್ರಂಥದ ಜಾಹೀರಾತು ಗಳು ಪೂರ್ಣಗೊಂಡವು, ೩ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿನ ಪಂಚಾಂಗದ ಜಾಹೀರಾತುಗಳು ಪೂರ್ಣಗೊಂಡವು, ೯ ದಿನಗಳಲ್ಲಿ ದಕ್ಷಿಣ ಕರ್ನಾಟಕದಲ್ಲಿನ ಪಂಚಾಂಗಗಳ ಜಾಹೀರಾತುಗಳು, ೫ ಜಿಲ್ಲೆಗಳ ವಿಶೇಷ ಸ್ಮರಣಿಕೆಗಳಿಗಾಗಿ ಜಾಹೀರಾತುಗಳು ಮತ್ತು ಒಂದು ವಿಶೇಷಾಂಕದ ಶೇ. ೭೫ ರಷ್ಟು ಜಾಹೀರಾತುಗಳು ಪೂರ್ಣಗೊಂಡವು. ಎಲ್ಲ ಸಾಧಕರ ಸಂಘಟಿತ ಪ್ರಯತ್ನ, ಸೇವೆಯ ತೀವ್ರ ತಳಮಳ, ಸಂತರ ಮಾರ್ಗದರ್ಶನ ಮತ್ತು ಪ್ರೇರಣೆ, ಇವುಗಳಿಂದ ಗುರುಕೃಪೆಯಿಂದಾಗಿ ೧೦ ದಿನಗಳಲ್ಲಿ ಜಾಹೀರಾತುಗಳ ಸೇವೆಯು ಪೂರ್ಣಗೊಂಡಿತು. ಇದಕ್ಕಾಗಿ ಗುರು ಚರಣಗಳಲ್ಲಿ ಕೋಟಿ ಕೋಟಿ ಭಾವಪೂರ್ಣ ಕೃತಜ್ಞತೆಗಳು !’

– ಶ್ರೀ. ಕಾಶಿನಾಥ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೯), ಸೌ. ಮಂಜುಳಾ ರಮಾನಂದ ಗೌಡ (ಪೂ. ರಮಾನಂದ ಗೌಡ ಇವರ ಪತ್ನಿ, ಆಧ್ಯಾತ್ಮಿಕ ಮಟ್ಟ ಶೇ ೬೫), ಸೌ. ಪೂರ್ಣಿಮಾ ಪ್ರಭು.