ಹಿಂದೂ ಹುಡುಗಿಯ ಮೇಲೆ ೩ ವರ್ಷ ಬಲತ್ಕಾರವೆಸಗಿದ ಪೊಲೀಸ ಅಧಿಕಾರಿ ವಸಿ ಅಹಮದ್

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ನ ಇನ್ನೊಂದು ಪ್ರಕರಣ ಬೆಳಕಿಗೆ

ಲಕ್ಷ್ಮಣ ಪುರಿ – ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಪೊಲೀಸ್ ಅಧಿಕಾರಿ ವಸಿ ಅಹಮದ್ ಇವನು ರಿಂಕು ಶುಕ್ಲಾ ಎಂದು ಸುಳ್ಳು ಹೆಸರು ಹೇಳಿ ಒಬ್ಬ ಹಿಂದೂ ಹುಡುಗಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಸತತ ೩ ವರ್ಷಗಳ ಕಾಲ ಆಕೆಯ ಮೇಲೆ ಬಲಾತ್ಕಾರವೆಸಗಿದನು. ಸಂತ್ರಸ್ತೆ ಆರೋಪಿಗೆ ವಿವಾಹ ಮಾಡಿಕೊಳ್ಳಲು ಹೇಳಿದಾಗ ಅವನು ನಿರಾಕರಿಸಿದನು. ಕೆಲವು ದಿನಗಳ ನಂತರ ಸಂತ್ರಸ್ತೆಗೆ ಅವನ ನಿಜವಾದ ಹೆಸರು ವಸಿ ಅಹಮದ ಎಂದು ತಿಳಿಯಿತು.

ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ವಸಿ ಅಹಮದ್ ಇವನ ವಿರುದ್ಧ ದೂರು ದಾಖಲಿಸಲಾಗಿದೆ. ಸಂತ್ರಸ್ತೆಯು ದೂರಿನಲ್ಲಿ ನನ್ನ ಮತ್ತು ವಸಿ ಅಹಮದ್ ಇವನ ನಡುವೆ ೨೦೧೯ ರಿಂದ ಸಂಬಂಧವಿದ್ದು, ವಿವಾಹ ಮಾಡಿಕೊಳ್ಳುವ ಸುಳ್ಳು ಆಶ್ವಾಸನೆ ನೀಡಿ ಅವನು ನನ್ನ ಮೇಲೆ ಸತತ ಬಲತ್ಕಾರವೆಸಗಿದ್ದಾನೆ. ಸಹೋದರಿಯ ವಿವಾಹದ ನಂತರ ನಮ್ಮಿಬ್ಬರ ವಿವಾಹವಾಗುವುದು, ಎಂದು ಅವನು ಯಾವಾಗಲೂ ನಂಬಿಸುತ್ತಿದ್ದನು. ಒಂದು ಸಾರಿ ನಾನು ಅವನನ್ನು ಇನ್ನೊಬ್ಬ ಮಹಿಳೆಯ ಜೊತೆ ಓಡಾಡುವುದು ಕಂಡೆ. ಕೆಲ ದಿನಗಳ ನಂತರ ಅವನು ಮುಸಲ್ಮಾನ ಎಂದು ನನಗೆ ತಿಳಿಯಿತು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ ಕಾನೂನು ಅಸ್ತಿತ್ವದಲ್ಲಿ ಇದೆ, ಆದರೆ ಅಲ್ಲಿಯ ಮುಸಲ್ಮಾನ್ ಪೊಲೀಸರು ಲವ್ ಜಿಹಾದಿಗಳಾಗಿರುವುದರಿಂದ ಅವರೇ ಹಿಂದೂ ಹುಡುಗಿಯರನ್ನು ಮೋಸ ಮಾಡುತ್ತಿದ್ದರೆ, ಆಗ ಹಿಂದೂ ಯುವತಿಯರು ಯಾರ ಹತ್ತಿರ ನ್ಯಾಯ ಕೇಳಬೇಕು ? ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡಲು ಹಿಂದೂಗಳು ಒತ್ತಾಯಿಸಿದರೆ ಅದರಲ್ಲಿ ತಪ್ಪೇನು ?