ನೂಪುರ ಶರ್ಮಾ ಯಾವ ತಪ್ಪು ಹೇಳಿಕೆ ನೀಡಿದ್ದರು ಎಂಬುದನ್ನು ಮೌಲ್ವಿಗಳು ಹೇಳಬೇಕು !

ಮುಸ್ಲಿಂ ಚಿಂತಕ ಅತಿಕುರ್ ರೆಹಮಾನ್ ಅವರ ಮನವಿ

ಮುಂಬಯಿ : ಮೊಹಮ್ಮದ್ ಪೈಗಂಬರರ ಬಗ್ಗೆ ನೂಪುರ ಶರ್ಮಾ ಹೇಳಿಕೆಯಲ್ಲಿ ತಪ್ಪಿಲ್ಲ. ನೂಪುರ ಶರ್ಮಾ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಯಾರಿಗಾದರೂ ಅನಿಸಿದರೆ, ಯಾರಾದರೂ ಹಿರಿಯ ಮೌಲ್ವಿಗಳು ಮುಂದೆ ಬಂದು, ‘ಶರ್ಮಾ ಏನು ತಪ್ಪು ಹೇಳಿಕೆ ನೀಡಿದ್ದಾರೆ?’ ಎಂಬುದು ಹೇಳಬೇಕು ಎಂದು ಮುಸ್ಲಿಂ ಚಿಂತಕ ಅತಿಕುರ್ ರಹಮಾನ ಇವರು ‘ಇಂಡಿಯಾ ನ್ಯೂಸ್’ ಈ ವಾರ್ತಾವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಹೇಳಿದ್ದಾರೆ. ರಹಮಾನ ಇವರು ಸಾಮಾಜಿಕ ಮಾಧ್ಯಮದಿಂದ ಈ ಕುರಿತು ಪ್ರಸಾರವಾಗುವ ದ್ವೇಷ ಮತ್ತು ಬೆದರಿಕೆಗಳ ಕುರಿತು ಖೇದವನ್ನು ವ್ಯಕ್ತಪಡಿಸಿದರು, ಎಂದು ‘ಆಪ್ ಇಂಡಿಯಾ’ ವರದಿ ಮಾಡಿದೆ. ಈ ಚರ್ಚಾಕೂಟದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ವಿನೋದ ಬನ್ಸಲ್ ಕೂಡ ಭಾಗವಹಿಸಿದ್ದರು.

ನೂಪುರ ಶರ್ಮಾ ತಪ್ಪಾಗಿ ಏನು ಹೇಳಿದ್ದಾರೆ, ಸ್ಪಷ್ಟಪಡಿಸಿ ! – ವಿನೋದ ಬನ್ಸಾಲ್, ವಿಹಿಂಪ

ಈ ಸಮಯದಲ್ಲಿ ವಿನೋದ ಬನ್ಸಲ್ ಅವರು ಮಾತನಾಡುತ್ತಾ, ‘ಮಹಮ್ಮದ್ ಪೈಗಂಬರರ ಜೀವನದ ಕುರಿತು ಚರ್ಚೆಯಾಗಬೇಕು ಎಂಬ ಅತಿಕುರ್ ರೆಹಮಾನ್ ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ’ ಎಂದು ಹೇಳಿದರು; ‘ಏಕೆಂದರೆ ಪೈಗಂಬರರ ಜೀವನದಿಂದ ಕಲಿಯಬೇಕಾದ ಆವಶ್ಯಕತೆಯಿದೆ. ಭಾರತವು ಶ್ರೀರಾಮ ಮತ್ತು ಭಗವಾನ್ ಕೃಷ್ಣನ ಜೀವನವನ್ನು ಚರ್ಚಿಸುವ ದೇಶವಾಗಿದೆ. ಅದರಿಂದ ಸ್ಫೂರ್ತಿ ಪಡೆಯಲಾಗಿದೆ. ಇಂತಹ ಸಮಯದಲ್ಲಿ ನಾವು ಪೈಗಂಬರರ ಜೀವನದಿಂದ ಏಕೆ ಕಲಿಯಬಾರದು ? ನೂಪುರ ಶರ್ಮಾ ಹೇಳಿದ್ದನ್ನು ಇಸ್ಲಾಮಿನ ಗ್ರಂಥಗಳನ್ನು ಉಲ್ಲೇಖಿಸಿ ಹೇಳಲಾಗಿದೆ ಮತ್ತು ಕೆಲವು ಮುಸ್ಲಿಂ ವಿದ್ವಾಂಸರು ಕೂಡ ಅದನ್ನೇ ಹೇಳಿದ್ದಾರೆ. ಆದ್ದರಿಂದ ನಾನು ಅತಿಕುರ್ ರೆಹಮಾನ್ ಅವರನ್ನು, ಶರ್ಮಾ ಅವರ ಹೇಳಿಕೆಯಲ್ಲಿ ಏನು ತಪ್ಪಾಗಿದೆ? ಅವರು ಹೇಳಿದ್ದು ತಪ್ಪಿದೆಯೇ ? ಅಥವಾ ಅವರ ಶೈಲಿ ಮತ್ತು ನಡವಳಿಕೆ ತಪ್ಪಾಗಿದೆಯೇ ? ಇಸ್ಲಾಮಿನ ಗ್ರಂಥಗಳಲ್ಲಿ ಬರೆದಿರುವುದು ತಪ್ಪೇ ? ಹಾಗಾದರೆ ಮುಸ್ಲಿಂ ಮೂಲಭೂತವಾದಿಗಳು ಅವರ ಶಿರಚ್ಛೇದಕ್ಕೆ ಏಕೆ ಒತ್ತಾಯಿಸುತ್ತಿದ್ದಾರೆ ? ಎಂದು ಪ್ರಶ್ನಿಸಲು ಬಯಸುತ್ತೇನೆ ಎಂದರು.

ನೂಪುರ ಶರ್ಮಾ ಅವರನ್ನು ಕ್ಷಮಿಸಬಹುದು ! – ಅತಿಕುರ್ ರೆಹಮಾನ್

ಇದಕ್ಕೆ ಉತ್ತರಿಸಿದ ರೆಹಮಾನ್, ನೂಪುರ್ ಶರ್ಮಾ ತಪ್ಪು ಮಾಡಿಲ್ಲ. ಇಸ್ಲಾಮಿಕ್ ವಿದ್ವಾಂಸರು ಅಥವಾ ಮುಸ್ಲಿಮರು ಶರ್ಮಾರವರದ್ದು ತಪ್ಪಿದೆ ಎಂದು ಭಾವಿಸಿದರೆ, ಇಸ್ಲಾಂ ಧರ್ಮದ ಪರಿಧಿಯು ಶರ್ಮರನ್ನು ಕ್ಷಮಿಸುವಷ್ಟು ವಿಶಾಲವಾಗಿದೆ. ನೂಪುರ ಶರ್ಮಾ ಎಲ್ಲಿ ತಪ್ಪಾಯಿತು ಎಂದು ಹಿರಿಯ ಮೌಲ್ವಿಗಳು ಹೇಳಬೇಕು ಎಂದು ಹೇಳಿದರು.
ಅತಿಕುರ್ ರೆಹಮಾನ ತಮ್ಮ ಮಾತನ್ನು ಮುಂದುವರೆಸುತ್ತಾ, ಒಂದು ವೇಳೆ ನೂಪುರ ಶರ್ಮಾ ಅವರನ್ನು ಚರ್ಚೆಗೆ ಆಹ್ವಾನಿಸುವ ಮೂಲಕ ತಪ್ಪು ಮಾಹಿತಿಯನ್ನು ಸರಿಪಡಿಸಲು ನನಗೆ ಸಾಧ್ಯವಾಗದಿದ್ದರೆ, ಇಸ್ಲಾಂ ಧರ್ಮದ ಅನುಯಾಯಿಯಾಗಿ ಚರ್ಚೆಯಲ್ಲಿ ಭಾಗವಹಿಸಲು ನನಗೆ ಯಾವುದೇ ಹಕ್ಕಿಲ್ಲ. ನಾನು ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ವಿರುದ್ಧ ಮಾತನಾಡುವವರನ್ನು ಆಹ್ವಾನಿಸುತ್ತೇನೆ. ಇದು ನನಗೆ ಜಗತ್ತಿಗೆ ‘ಪೈಗಂಬರ ಇವರ ಸಂದೇಶ ಏನು ಇತ್ತು’ ಎಂದು ಹೇಳಲು ಅವಕಾಶವನ್ನು ನೀಡುತ್ತದೆ, ಅದೇ ರೀತಿ ‘ಪ್ರಪಂಚದಲ್ಲಿ ಸಂದೇಶವನ್ನು ಸಾರಲು ಅಲ್ಲಾಹನು ಮಹಮ್ಮದ ಪೈಗಂಬರ ಇವರನ್ನು ಹೇಗೆ ಆರಿಸಿದನು’, ಎಂದು ಸಹ ಹೇಳಬಹುದು ಎಂದು ಹೇಳಿದರು.