ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ ಮತಾಂಧರು

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂ ದೇವಾಲಯಗಳು !

ಉಮರ್‌ಕೋಟ್ (ಪಾಕಿಸ್ತಾನ) – ಇತ್ತೀಚೆಗೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮರ್‌ಕೋಟ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಮತಾಂಧರು ದಾಳಿ ಮಾಡಿದ್ದಾರೆ. ಗೂಂಡಾಗಳು ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದೆ. ಈ ಪ್ರಕಾರವು ಈಗ ಮಿತಿ ಮೀರಿದೆ ಎಂದು ‘ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಿಟಿ’ ಹೇಳುತ್ತದೆ.