ಉದಯಪುರದಲ್ಲಿ ಕನ್ಹಯ್ಯಾಲಾಲ್‌ರ ಬರ್ಬರ ಹತ್ಯೆ ಕುರಿತು ‘ವಿಶೇಷ ಸಂವಾದ’ !
ಉದಯಪುರದಲ್ಲಿ ಜಿಹಾದಿಗಳು ಕನ್ಹಯ್ಯಾಲಾಲ್ ಎಂಬ ಹಿಂದೂ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈದಿರುವುದು ಸಾಮಾನ್ಯ ಘಟನೆಯಲ್ಲ ಬದಲಾಗಿ ದೇಶದ ಸಾರ್ವಭೌಮತ್ವ, ಸುಸಂಸ್ಕೃತ ಸಮಾಜ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಈ ಹತ್ಯೆಯ ಹಿಂದೆ ಇಬ್ಬರು ಮುಸ್ಲಿಮರು ಮಾತ್ರವಲ್ಲದೆ ಅವರ ‘ಬ್ರೈನ್ ವಾಶ್’ ಮಾಡುವ ಮದರಸಾಗಳು, ಮೌಲ್ವಿಗಳು ಮತ್ತು ಕಟ್ಟರವಾದಿ ಇಸ್ಲಾಮಿಕ್ ಸಂಘಟನೆಗಳು ಅಷ್ಟೇ ಜವಾಬ್ದಾರವಾಗಿವೆ. ಹಿಂದೂಗಳನ್ನು ಕೊಲ್ಲುವ ಇಂತಹ ಸಮಾಜ ಘಾತಕ ವೃತ್ತಿಯ ಮನೆಯ ಮೇಲೆ ಮಾತ್ರವಲ್ಲ, ಈ ಜಿಹಾದಿ ಸಿದ್ಧಾಂತದ ಮೇಲೂ ‘ಬುಲ್ಡೋಜರ್‌ಗಳನ್ನು’ ಹತ್ತಿಸಬೇಕಾಗಿದೆ. ಸರಕಾರ ಮತ್ತು ಆಡಳಿತ ವ್ಯವಸ್ಥೆಗಳು ಈ ಜಿಹಾದಿಗಳಿಗೆ ಕಡಿವಾಣ ಹಾಕದಿದ್ದರೆ ಹಿಂದೂ ಸಮಾಜ ಒಗ್ಗಟ್ಟಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ‘ವಿಶ್ವ ಹಿಂದೂ ಪರಿಷತ್ತಿ’ನ ರಾಷ್ಟ್ರೀಯ ವಕ್ತಾರ ಶ್ರೀ. ವಿನೋದ ಬನ್ಸಾಲ ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಭಾರತದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಮನಸ್ಥಿತಿ ?’ ಎಂಬ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಪ್ರಶಿಕ್ಷಣವನ್ನು ನೀಡುವ ಮದರಸಾಗಳನ್ನು ಮುಚ್ಚಬೇಕು ! – ಹಿಂದೂ ಜನಜಾಗೃತಿ ಸಮಿತಿ
ಉದಯಪುರದಲ್ಲಿ ಕನ್ಹಯ್ಯಾಲಾಲ್ ಅವರ ಅಂಗಡಿಗೆ ಗಿರಾಕಿಗಳಂತೆ ಬಂದು ಗೌಪ್ಯವಾಗಿ ಮುಸ್ಲಿಮರು ಅವರ ಹತ್ಯೆ ಮಾಡಿದರು ಮತ್ತು ಕಮಲೇಶ್ ತಿವಾರಿ ಅವರನ್ನು ಸಹ ಅದೇ ರೀತಿಯಲ್ಲಿ ಹತ್ಯೆ ಮಾಡಲಾಯಿತು. ಇದು ವೀರತ್ವ ಅಲ್ಲ ಬದಲಾಗಿ ನಪುಂಸಕತೆಯಾಗಿದೆ. ಹಿಂದೂ ಸಮಾಜ ಹೀಗಿಲ್ಲ. ಇದಕ್ಕೆ ವಿರುದ್ಧವಾಗಿ, ಸಾಂವಿಧಾನಿಕವಾಗಿ, ತಮ್ಮ ಪಕ್ಷವನ್ನು ಮುಂದೆ ಪ್ರಸ್ತುತಪಡಿಸುತ್ತದೆ. ಯಾವುದೇ ಸಂಯಮವಿಟ್ಟುಕೊಳ್ಳದೇ ಚಾಕುವಿನಿಂದ ಕೊಲ್ಲುವುದು ಯಾವ ರೀತಿಯ ಧರ್ಮ ? ‘ಭಯೋತ್ಪಾದನೆಯು ಮದರಸಾ ಮನಸ್ಥಿತಿಯಿಂದ ಆರಂಭವಾಗುತ್ತದೆ’, ಎಂದು ಕೇರಳ ರಾಜ್ಯಪಾಲ ಮೊಹಮ್ಮದ್ ಆರಿಫ್ ಅವರು ಹೇಳಿದ್ದಾರೆ. ಹೇಗೆ ಚೀನಾವು ಮದರಸಾಗಳಲ್ಲಿ ಏನನ್ನು ಕಲಿಸಬೇಕು ಮತ್ತು ಕಲಿಸಬಾರದು ಎಂಬುದರ ಮೇಲೆ ನಿಯಂತ್ರಣವನ್ನು ಇಟ್ಟಿದೆಯೋ ಅದೇ ರೀತಿ ಭಾರತ ಸರಕಾರವೂ ಮಾಡಬೇಕು. ಸರಕಾರವು ಮದರಸಾಗಳಿಗೆ ನೀಡುವ ಹಣವನ್ನು ನಿಲ್ಲಿಸಬೇಕು ಹಾಗೂ ಭಯೋತ್ಪಾದನೆಯ ಪ್ರಶಿಕ್ಷಣವನ್ನು ನೀಡುವ ಮದರಸಾಗಳನ್ನು ಮುಚ್ಚಬೇಕು. ‘ಎನ್.ಐ.ಎ.’ಯು ಕೇವಲ ಹಿಂದೂಗಳ ಹತ್ಯೆಯ ಅಪರಾಧಿಗಳನ್ನು ಕೇವಲ ಹುಡುಕದೇ ಹತ್ಯೆಗಾಗಿ ಹಣ ನೀಡುವವರು, ಅವರಿಗೆ ಆಶ್ರಯ ನೀಡಿದವರು ಹಾಗೂ ಪ್ರಶಿಕ್ಷಣವನ್ನು ನೀಡುವವರು ಹೀಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಹೇಳಿದರು.
ಭಾರತವನ್ನು ಜಿಹಾದಿಗಳಿಂದ ಮುಕ್ತಗೊಳಿಸಲು ಕೇಂದ್ರವು ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಬೇಕು ! – ಲಷ್ಕರ್-ಎ-ಹಿಂದ
ನೂಪುರ ಶರ್ಮಾ ಅವರನ್ನು ಬೆಂಬಲಿಸುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ನಂತರ, ತನ್ನ ಜೀವಕ್ಕೆ ಅಪಾಯವಿದೆ ಎಂದು ಕನ್ಹಯ್ಯಾಲಾಲ್ ಅರಿತುಕೊಂಡಾಗ, ಅವರು ಉದಯಪುರ ಪೊಲೀಸ ಠಾಣೆಗೆ ದೂರು ನೀಡಿದರು; ಆದರೆ ರಾಜಕೀಯ ಉದ್ದೇಶದಿಂದ ಪ್ರೇರಿತರಾದ ರಾಜಸ್ಥಾನ ಪೊಲೀಸರು ಇದನ್ನು ನಿರ್ಲಕ್ಷಿಸಿದರು. ಪೊಲೀಸರು ಸಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ಕನ್ಹಯ್ಯಾಲಾಲ್ ಇವರ ಹತ್ಯೆಯನ್ನು ತಪ್ಪಿಸಬಹುದಿತ್ತು. ಜಿಹಾದಿ ಮನಸ್ಥಿತಿಯ ಭಯೋತ್ಪಾದಕರು ಕೇವಲ ಹಿಂದೂಗಳನ್ನು ಮಾತ್ರವಲ್ಲ, ಕ್ರೈಸ್ತರನ್ನು, ಪಾರ್ಸಿಗಳು, ಯಹೂದಿಗಳು ಮತ್ತು ‘ಇಸ್ಲಾಂ’ನಲ್ಲಿ ನಂಬಿಕೆಯಿಲ್ಲದ ಎಲ್ಲರನ್ನೂ ಕೊಲ್ಲುತ್ತಾರೆ. ಕಟ್ಟರವಾದಿ ಮನಸ್ಥಿತಿಯನ್ನು ತೊಲಗಿಸಲು ಮತ್ತು ಭಾರತವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಲು ಕೇಂದ್ರ ಸರಕಾರವು ಪೊಲೀಸ್ ಮತ್ತು ಸೇನೆಗೆ ಸ್ವಾತಂತ್ರ್ಯ ನೀಡಬೇಕು ಎಂದು ಶ್ರೀ. ಈಶ್ವರ ಪ್ರಸಾದ ಖಂಡೇಲವಾಲ ಖಂಡತುಂಡವಾಗಿ ಹೇಳಿದರು.