ಜಮ್ಮೂ-ಕಾಶ್ಮೀರದಲ್ಲಿನ ‘ಜೀ-೨೦’ ದೇಶಗಳ ಸಮೂಹದ ಸಭೆಯ ಆಯೋಜನೆಯ ವಿಷಯದಲ್ಲಿ ಪಾಕಿಸ್ತಾನದಿಂದ ಟೀಕೆ !

ಇಸ್ಲಾಮಾಬಾದ (ಪಾಕಿಸ್ತಾನ) – ಈ ವರ್ಷ ಭಾರತವು ‘ಜಿ-೨೦’ ದೇಶಗಳ ಸಮೂಹದ ಅಧ್ಯಕ್ಷ ಸ್ಥಾನವನ್ನು ಪಡೆದ ನಂತರ ಜಮ್ಮೂ-ಕಾಶ್ಮೀರದಲ್ಲಿ ಅದರ ಆಯೋಜನೆಯನ್ನು ಮಾಡಲಾಗಿದೆ. ಪಾಕಿಸ್ತಾನವು ಈ ವಿಷಯದಲ್ಲಿ ವಿಷಕಾರಿದೆ.

ಪಾಕಿಸ್ತಾನದ ವಿದೇಶಾಂಗ ವಿಭಾಗವು ‘ಜಮ್ಮೂ-ಕಾಶ್ಮೀರವು ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ವಾದಗ್ರಸ್ತ ಕ್ಷೇತ್ರವಾಗಿದೆ. ೧೯೪೭ರಿಂದ ಕಾಶ್ಮೀರದ ಮೇಲೆ ಭಾರತವು ಕಾನೂನು ಬಾಹಿರವಾಗಿ ಹಿಡಿತವನ್ನು ಸಾಧಿಸಿದೆ. (ಕಳ್ಳನ ಅಳು ! – ಸಂಪಾದಕರು) ಇಲ್ಲಿ ಮಾನವಾಧಿಕರಗಳ ಉಲ್ಲಂಘನೆಯಾಗುತ್ತಿದೆ. ಜಮ್ಮೂ-ಕಾಶ್ಮೀರದಿಂದ ಕಲಮ ೩೭೦ನ್ನೂ ತೆರವುಗೊಳಿಸಿದಾಗಿನಿಂದ ಭಾರತೀಯ ಸೈನ್ಯದ ಕಾರ್ಯಾಚರಣೆಯಲ್ಲಿ ೬೩೯ ನಿರಪರಾಧಿಗಳು ಮೃತರಾಗಿದ್ದಾರೆ. ಆದುದರಿಂದ ಇಂತಹ ಜಾಗದಲ್ಲಿ ಜಿ-೨೦ ಸಮೂಹದ ಸಭೆಯನ್ನು ಆಯೋಜಿಸುವುದು ಹಾಸ್ಯಾಸ್ಪದವಾಗಿದೆ. ಇದನ್ನು ಅಂತರಾಷ್ಟ್ರೀಯ ಸಮುದಾಯವು ಯಾವುದೇ ಪರಿಸ್ಥಿತಿಯಲ್ಲಿ ಸ್ವೀಕರಿಸುವುದಿಲ್ಲ’ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಭಾರತವು ಪಾಕಿಸ್ತಾನವು ಈಗ ಜಮ್ಮೂ-ಕಾಶ್ಮೀರದ ಸಂದರ್ಭದಲ್ಲಿ ಮಾತನಾಡುವ ಬದಲು ತಮ್ಮ ದೇಶದಲ್ಲಿನ ಆರ್ಥಿಕ ದೀವಾಳಿತನದ ಕಡೆಗೆ ಗಮನ ನೀಡಬೇಕು, ಎಂದು ಎಚ್ಚರಿಸಬೇಕು !