‘ಅಗ್ನಿಪಥ’ ಯೋಜನೆಯ ವಿರುದ್ಧ ಆಂದೋಲನ ಮಾಡಲು ವಿದ್ಯಾರ್ಥಿಗಳನ್ನು ಕೆರಳಿಸಲಾಯಿತು !
ಅಲೀಗಡ (ಉತ್ತರಪ್ರದೇಶ) – ಕೇಂದ್ರ ಸರಕಾರದ ಸೈನಿಕರಿಗಾಗಿರುವ ‘ಅಗ್ನಿಪಥ’ ಯೋಜನೆಯ ವಿರುದ್ಧ ದೇಶದ ಅನೇಕ ರಾಜ್ಯಗಳಲ್ಲಿ ಹಿಂಸಾತ್ಮಕ ಆಂದೋಲನಗಳನ್ನು ನಡೆಸಲಾಯಿತು. ಉತ್ತರಪ್ರದೇಶದಲ್ಲಿನ ಅಲೀಗಡದಲ್ಲಿಯೂ ಹಿಂಸಾಚಾರ ನಡೆಯಿತು. ಪೊಲೀಸರು ಇವುಗಳ ಹಿಂದೆ ಸೈನ್ಯಕ್ಕೆ ಸೇರಲು ಪ್ರಯತ್ನಿಸುವ ತರುಣರಿಗೆ ತರಬೇತಿ ನೀಡುವ ಕೆಲವು ಕೋಚಿಂಗ್ ಸೆಂಟರ್‌ಗಳ ಸಂಚಾಲಕರು ಇರುವ ಬಗ್ಗೆ ತಿಳಿದಾಗ ೯ ಸಂಚಾಲಕರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಚಾಲಕರು ವಿದ್ಯಾರ್ಥಿಗಳನ್ನು ಸರಕಾರದ ವಿರುದ್ಧ ಕೆರಳಿಸಿ ಹಿಂಸಾಚಾರ ಮಾಡಲು ಪ್ರವೃತ್ತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಓರ್ವ ಸಂಚಾಲಕನನ್ನು ಬಂಧಿಸಲಾಗಿದ್ದು ಅವನು ಶಸ್ತ್ರವನ್ನು ಕೈಗೆತ್ತಿಕೊಳ್ಳಲು ಕರೆ ನೀಡಿರುವ ಪೊಸ್ಟನ್ನು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿದ್ದನು. ಕೆಲವರು ಈ ವಿಷಯದಲ್ಲಿ ವಿಡಿಯೋ ಮಾಡಿ ಪ್ರಸಾರ ಮಾಡಿದ್ದರು.
Role of coaching centers found in Agnipath protest: Police arrests 9 Coaching Directorshttps://t.co/NW0Gv9z8RD#coachingcenters #Agnipathprotest #Policearrests
— NewsX (@NewsX) June 19, 2022