ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಹತ್ಯೆಯ ಬೆದರಿಕೆ

ನೂಪುರ ಶರ್ಮ ಇವರನ್ನು ಸಮರ್ಥಿಸಿದುದರ ಪರಿಣಾಮ

(ಎಡದಿಂದ) ಇಕ್ಬಾಲ್ ಕಾಸರ್  ಮತ್ತು  ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ

ಭೋಪಾಲ (ಮಧ್ಯಪ್ರದೇಶ) – ಇಲ್ಲಿಯ ಭಾಜಪಾದ ಶಾಸಕ ಮತ್ತು ಹಿಂದುತ್ವನಿಷ್ಠ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಮ ನ ಸಹೋದರ ಇಕ್ಬಾಲ್ ಕಾಸರ್ ಇವರ ಕಡೆಯವರು ಎಂದು ಹೇಳುತ್ತಾ ಅಪರಿಚಿತರು ಸಂಚಾರ ವಾಣಿಯಲ್ಲಿ ಹತ್ಯೆಯ ಬೆದರಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಸಾಧ್ವಿ ಪ್ರಜ್ಞಾಸಿಂಗ್ ಇವರು, ದೂರವಾಣಿ ಕರೆ ಮಾಡುವವನು ನಿನ್ನ ಹತ್ಯೆ ನಡೆಯಲಿದೆ ಎಂದು ಹೇಳಿರುವುದಾಗಿ ತಿಳಿಸಿದರು. ಸಾಧ್ವಿ ಪ್ರಜ್ಞಾ ಠಾಕೂರ್ ಇವರು ನೂಪುರ ಶರ್ಮ ಇವರ ಪೈಗಂಬರರ ಬಗ್ಗೆ ತಥಾಕಥಿತ ಅವಮಾನದ ಪ್ರಕರಣದ ಸಮರ್ಥನೆ ಮಾಡಿದ್ದರು.