Video – ಸಾಧನೆ ಮತ್ತು ಗುರುಕಾರ್ಯವನ್ನು ಮಾಡಲು ದೈವೀ ಬಾಲಕರು ಉಚ್ಚ ಲೋಕಗಳಿಂದ ಪೃಥ್ವಿಯಲ್ಲಿ ಜನ್ಮವನ್ನು ಪಡೆಯುತ್ತಾರೆ ! – ಸೌ. ಶ್ವೇತಾ ಶಾನ್ ಕ್ಲಾರ್ಕ್, ಸಂಶೋಧನೆ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ

ಸೌ. ಶ್ವೇತಾ ಶಾನ್ ಕ್ಲಾರ್ಕ್

ಗೋವಾದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ ವಿಭಾಗದ ಸೌ. ಶ್ವೇತಾ ಕ್ಲಾರ್ಕ್ ಇವರು ದೈವಿ ಬಾಲಕರ ಬಗ್ಗೆ ವಿಷಯವನ್ನು ಮಂಡಿಸುವಾಗ, ‘ದೈವೀ ಬಾಲಕರು’ ಇದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಸಂಕಲ್ಪನೆಯಾಗಿದೆ. ಉಚ್ಚ ಲೋಕಗಳಿಂದ ಸಾಧನೆ ಮತ್ತು ಗುರುಕಾರ್ಯವನ್ನು ಮಾಡಲು ಪೃಥ್ವಿಯಲ್ಲಿ ಜನ್ಮ ಪಡೆಯುವ ಬಾಲಕರು, ಎಂದರೆ ದೈವೀ ಬಾಲಕರಾಗಿದ್ದಾರೆ. ಈ ದೈವೀ ಬಾಲಕರು ಪೃಥ್ವಿಯಲ್ಲಿ ಜನಿಸುವುದು ಎಂದರೆ ದಿವ್ಯ ಮತ್ತು ಅದ್ಭುತವಾದ ಘಟನೆಯಾಗಿದೆ. ದೈವೀ ಬಾಲಕರು ಸುಂದರ ಮತ್ತು ತೇಜಸ್ವಿಯಾಗಿರುತ್ತಾರೆ. ಅವರು ತಮ್ಮ ನಗು-ಮಾತುಗಳಿಂದ ಎಲ್ಲರ ಮನಸ್ಸನ್ನು ತಕ್ಷಣ ಆಕರ್ಷಿಸಿಕೊಳ್ಳುತ್ತಾರೆ. ದೈವೀ ಬಾಲಕರಲ್ಲಿ ಸ್ವಭಾವದೋಷ ಮತ್ತು ಅಹಂನ ಪ್ರಮಾಣ ಕಡಿಮೆ ಇರುತ್ತದೆ. ಇವರ ಸ್ವಭಾವ ಮೊದಲಿನಿಂದಲೇ ಸಾತ್ತ್ವಿಕವಾಗಿರುತ್ತದೆ. ಇವರ ಮನಸ್ಸು ನಿರ್ಮಲ ಮತ್ತು ಬುದ್ಧಿ ಪ್ರೌಢವಾಗಿರುತ್ತದೆ. ಅವರು ಆಚಾರಧರ್ಮದ ಪಾಲನೆಯನ್ನು ಮಾಡುತ್ತಾರೆ. ಈ ಬಾಲಕರು ಸಾತ್ತ್ವಿಕ ವ್ಯಕ್ತಿ ಮತ್ತು ಸಂತರ ಕಡೆಗೆ ಕೂಡಲೇ ಆಕರ್ಷಿತರಾಗುತ್ತಾರೆ. ಬಾಲ್ಯದಿಂದಲೇ ಅವರಲ್ಲಿ ಸಾಧನೆಗೆ ಆವಶ್ಯಕವಾಗಿರುವ ಆಧ್ಯಾತ್ಮಿಕ ಗುಣ (ಉದಾ. ದೃಢತೆ, ನಮ್ರತೆ, ಕಲಿಯುವ ವೃತ್ತಿ) ಗಳಿರುತ್ತವೆ.

ಈ ಬಾಲಕರಿಗೆ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಅಂದರೆ ಸೂಕ್ಷ್ಮದಲ್ಲಿನ ವಿಷಯ ತಿಳಿಯುತ್ತದೆ. ಈ ಬಾಲಕರಲ್ಲಿ ಆಧ್ಯಾತ್ಮಿಕ ಉಪಾಯ ಮಾಡುವ ಕ್ಷಮತೆ ಇರುತ್ತದೆ. ಇತರ ಬಾಲಕರ ತುಲನೆಯಲ್ಲಿ ಈ ಬಾಲಕರು ಭಿನ್ನವಾಗಿರುತ್ತಾರೆ. ದೈವೀ ಬಾಲಕರಿಂದ ಆಧ್ಯಾತ್ಮಿಕ ಅನುಭೂತಿ ಬರುತ್ತದೆ. ದೈವೀ ಬಾಲಕರಿಗೆ ಈಶ್ವರನ ಬಗ್ಗೆ ಭಾವವಿರುತ್ತದೆ. ಈ ಬಾಲಕರು ಜಿಜ್ಞಾಸುಗಳಾಗಿರುವುದರಿಂದ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ದೈವೀ ಬಾಲಕರು ಮಾನಸಿಕ ಸ್ತರದಲ್ಲಲ್ಲ, ಆದರೆ ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡುತ್ತಾರೆ. ಅವರಲ್ಲಿ ಕೇಳುವ ವೃತ್ತಿ ಇರುತ್ತದೆ, ಹಾಗೆಯೇ ಅವರ ಶಾಂತ ಸ್ವಭಾವದರಾಗಿರುತ್ತಾರೆ’, ಎಂದು ಹೇಳಿದರು.