ಕರ್ನಾಟಕ ರಾಜ್ಯದಲ್ಲಿ ‘ಹಲಾಲ್’ನ ಕಡ್ಡಾಯದ ವಿರುದ್ಧ ಹಿಂದೂ ಸಮಾಜವು ರಸ್ತೆಗಿಳಿದಿದೆ. ‘ಹಲಾಲ್’ ಈ ಇಸ್ಲಾಮಿಕ್ ಪರಿಕಲ್ಪನೆಯನ್ನು ‘ಸೆಕ್ಯುಲರ್’ ಎಂದು ಕರೆದುಕೊಳ್ಳುವ ಭಾರತದಲ್ಲಿ ಬಹುಸಂಖ್ಯಾತ ಶೇ.೭೮ ರಷ್ಟು ಹಿಂದೂಗಳ ಮೇಲೆ ಹೇರಲಾಗುತ್ತಿದೆ. ಭಾರತದಲ್ಲಿ ಸರಕಾರವು ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (FSSAI) ಮತ್ತು ‘ಆಹಾರ ಮತ್ತು ಔಷಧ ಆಡಳಿತ’ (FDA) ಇಲಾಖೆಗಳು ಇರುವಾಗ, ‘ಜಮಿಯತ್ ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ನಂತಹ ಖಾಸಗಿ ಮುಸ್ಲಿಂ ಸಂಸ್ಥೆಗಳು ಭಾರತೀಯ ಉತ್ಪಾದಕರಿಂದ ಸಾವಿರಾರು ರೂಪಾಯಿಗಳನ್ನು ಪಡೆದು ‘ಹಲಾಲ್ ಪ್ರಮಾಣಪತ್ರ’ಗಳನ್ನು ನೀಡುತ್ತವೆ. ಮೂಲದಲ್ಲಿ ಕೇವಲ ಮಾಂಸಕ್ಕಾಗಿ ಇರುವ ಹಲಾಲ್ ಪ್ರಮಾಣಪತ್ರವು ಈಗ ಆಹಾರ, ಸೌಂದರ್ಯವರ್ಧಕಗಳು, ಆಯುರ್ವೇದ ಔಷಧಗಳು, ಆಸ್ಪತ್ರೆಗಳು ಸಹಿತ ಬಹುರಾಷ್ಟ್ರೀಯ ಸಂಸ್ಥೆಗಳಾದ ಮ್ಯಾಕ್‌ಡೊನಾಲ್ಡ್ಸ್, ‘ಕೆ.ಎಫ್.ಸಿ.’ಗಳಿಗೂ ವಿಸ್ತರಿಸಿದೆ. ಅವು ಭಾರತದ ತಮ್ಮ ಎಲ್ಲಾ ಅಂಗಡಿಗಳು ಶೇ. ೧೦೦ ರಷ್ಟು ‘ಹಲಾಲ್’ ಪ್ರಮಾಣೀಕೃತ’ವಾಗಿವೆ ಎಂದು ಅವರು ಘೋಷಿಸಿದ್ದಾರೆ. ‘ಮೆಕ್‌ಡೊನಾಲ್ಡ್’ಗೆ ಹೋಗುವ ಬಹುಸಂಖ್ಯಾತ ಹಿಂದೂಗಳು ಇಸ್ಲಾಮಿಕ್ ಪ್ರಕಾರ ‘ಹಲಾಲ್’ ಆಹಾರವನ್ನು ಮಾತ್ರ ತಿನ್ನುವಂತೆ ಮಾಡುವುದು ಇದು ಹಿಂದೂಗಳಿಗೆ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಗೌರವವಾಗಿದೆ. ಈ ರೀತಿಯ ಧರ್ಮದ ಆಧಾರದಲ್ಲಿ ನಡೆಸಲಾಗುತ್ತಿರುವ ‘ಇಸ್ಲಾಮಿಕ್ ಅರ್ಥವ್ಯವಸ್ಥೆ’ಯನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ‘ಹಲಾಲ್ ಅರ್ಥವ್ಯವಸ್ಥೆ’ಯ ಮೂಲಕ ಸಂಗ್ರಹವಾದ ಹಣವನ್ನು ಭಯೋತ್ಪಾದನೆಗೆ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಭಾರತದಲ್ಲಿಯೂ ‘ಜಮಿಯತ್ ಉಲೇಮಾ-ಎ-ಹಿಂದ್’ ಇದು ದೇಶಾದ್ಯಂತ ವಿವಿಧ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿರುವ ಸುಮಾರು ೭೦೦ ಮುಸ್ಲಿಂ ಆರೋಪಿಗಳಿಗೆ ಕಾನೂನು ನೆರವು ನೀಡುತ್ತಿದೆ. ಹಲಾಲ್ ಅರ್ಥವ್ಯವಸ್ಥೆಯಿಂದ ಭಾರತೀಯ ಅರ್ಥವ್ಯವಸ್ಥೆಗೆ ಮಾತ್ರವಲ್ಲದೇ ಭದ್ರತಾ ವ್ಯವಸ್ಥೆಗೂ ದೊಡ್ಡ ಅಪಾಯವನ್ನುಂಟು ಮಾಡಿದೆ. ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಗಾಂಭೀರ್ಯದಿಂದ ತಕ್ಷಣದ ಕ್ರಮ ಕೈಗೊಳ್ಳುವ ಅಪೇಕ್ಷಿತವಿದೆ, ಎಂದು ‘ಹಲಾಲ್ ಜಿಹಾದ್ ?’ ಈ ಗ್ರಂಥದ ಲೇಖಕ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಇವರು ಪ್ರತಿಪಾದಿಸಿದರು. ಅವರು ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ‘ಜಿಹಾದಿ ಭಯೋತ್ಪಾದನೆಗೆ ಪ್ರತಿಕಾರ’ ಈ ಭಾಗದಲ್ಲಿ ‘ಹಲಾಲ್ ಸರ್ಟಿಫಿಕೇಶನ್ ಈ ಆರ್ಥಿಕ ಜಿಹಾದ್ ?’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಹೆಚ್ಚೆಚ್ಚು ಜನರು ‘ಹಲಾಲ್ ಜಿಹಾದ್’ನ ಮಾಹಿತಿ ನೀಡಲು ‘ಹಿಂದಿ’ ಮತ್ತು ‘ಮರಾಠಿ’ ಭಾಷೆಯಲ್ಲಿನ ಈ ಗ್ರಂಥ ಪ್ರತಿಯೊಬ್ಬ ಹಿಂದೂಗಳ ವರೆಗೆ ತಲುಪಬೇಕು, ಎಂದು ಶ್ರೀ. ಶಿಂದೆಯವರು ಈ ಸಂದರ್ಭದಲ್ಲಿ ಹೇಳಿದರು. ಈ ಭಾಗದಲ್ಲಿ ‘ಯೂಥ ಫಾರ್ ಪನುನ್ ಕಾಶ್ಮೀರ್’ನ ರಾಷ್ಟ್ರೀಯ ಅಧ್ಯಕ್ಷ ಶ್ರೀ. ರಾಹುಲ ಕೌಲ, ‘ಹಿಂದೂ ಮಕ್ಕಲ ಕತ್ಛಿ’ಯ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ ಹಾಗೆಯೇ ಕರ್ನಾಟಕದ ಚಲನಚಿತ್ರ ವಿತರಕ ಮತ್ತು ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿ ಇವರೂ ಮಾರ್ಗದರ್ಶನ ಮಾಡಿದರು.
ಭಾರತ ಮತ್ತು ಹಿಂದೂ ಧರ್ಮದ ಮೇಲೆ ಆಘಾತ ಮಾಡಲು ‘ಬಾಲಿವುಡ್ ಜಿಹಾದ್’ನ ಸಂಚು ! – ಪ್ರಶಾಂತ ಸಂಬರಗಿ, ಚಲನಚಿತ್ರ ವಿತರಕರು, ಬೆಂಗಳೂರು
‘೧೮ ರಿಂದ ೨೪ ವರ್ಷ ವಯೋಗುಂಪಿನ ಯುವಕರನ್ನು ಅವರು ಹಿಂದೂಗಳಾಗಿದ್ದಾರೆ ಎಂದು ಮರೆತು ಅವರ ಮೇಲೆ ಪಾಶ್ಚಾತ್ಯ, ಮುಸಲ್ಮಾನ ವಿಚಾರಸರಣಿಯ ಪ್ರಭಾವ ಹೇಗೆ ಬೆಳೆಸಬಹುದು, ಎಂಬ ಪ್ರಯತ್ನವನ್ನು ‘ಬಾಲಿವುಡ್’ನ ಚಲನಚಿತ್ರಗಳ ಮಾಧ್ಯಮದಿಂದ ಮಾಡಲಾಗುತ್ತಿದೆ. ೨೦೧೯ ನೇ ಇಸವಿಯಲ್ಲಿ ಗುಜರಾತನಲ್ಲಿ ೨೫೦ ಚಲನಚಿತ್ರಗಳ ಒಂದು ಸಮೀಕ್ಷೆಯನ್ನು ಮಾಡಲಾಗಿತ್ತು. ಇದಕ್ಕನುಸಾರ ಮುಸಲ್ಮಾನರ ಶ್ರದ್ಧಾಸ್ಥಾನಗಳು ಶಕ್ತಿಶಾಲಿಯಾಗಿವೆ, ಮುಸಲ್ಮಾನರು ಮಾನವತಾವಾದಿಗಳಾಗಿದ್ದಾರೆ, ಬದಲಾಗಿ ಬ್ರಾಹ್ಮಣರು ಭ್ರಷ್ಟಾಚಾರಿ ಮತ್ತು ಕೆಟ್ಟವರಿದ್ದಾರೆ, ಎಂದು ತೋರಿಸಲಾಗಿದೆ. ‘ಬಾಲಿವುಡ್’ನಲ್ಲಿ ಪ್ರತಿ ವರ್ಷ ಸುಮಾರು ೩ ಸಾವಿರ ಹಾಡುಗಳು ಪ್ರಸಾರವಾಗುತ್ತವೆ. ಅದರಲ್ಲಿ ಶೇ. ೩೦ ರಷ್ಟು ಹಾಡುಗಳಲ್ಲಿ ‘ಅಲ್ಲಾ’ನ ಗುಣಗಾನವನ್ನು ಮಾಡುವುದು ಕಂಡು ಬರುತ್ತದೆ. ತದ್ವಿರುದ್ಧ ಕೇವಲ ಶೇ. ೪ ರಷ್ಟು ಹಾಡುಗಳಲ್ಲಿ ಹಿಂದೂ ದೇವತೆಗಳ ಸ್ತುತಿ ಇರುತ್ತದೆ. ಇದರ ಹಿಂದೆ ‘ದುಬೈ ಫಂಡಿಂಗ್’ ಮತ್ತು ‘ಕರಾಚಿ ಡಿಸ್ಟ್ರಿಬ್ಯುಶನ್’ ಇವುಗಳು ಕೈವಾಡವಿದೆ. ಕುಖ್ಯಾತ ಅಪರಾಧಿಗಳ ಕಪ್ಪು ಹಣ ‘ಬಾಲಿವುಡ್’ ಚಲನಚಿತ್ರಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ. ಅದರಿಂದ ‘ಲವ್ ಜಿಹಾದ್’ಗೆ ಪ್ರೋತ್ಸಾಹ ನೀಡಲಾಗುತ್ತದೆ. ಅಫಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಅಮಲು ಪದಾರ್ಥಗಳು ಪಂಜಾಬಮಾರ್ಗವಾಗಿ ಭಾರತದಾದ್ಯಂತ ವಿತರಿಸಲಾಗುತ್ತದೆ. ಒಟ್ಟಾರೆ ಭಾರತ ಮತ್ತು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಲು ‘ಬಾಲಿವುಡ್ ಜಿಹಾದ್’ನ ಷಡ್ಯಂತ್ರವಿದೆ’, ಎಂದು ಹೇಳಿದರು. ಅವರು ‘ಬಾಲಿವುಡ್‌ನ ಡ್ರಗ್ಸ್ ಜಿಹಾದ್’ ಈ ಬಗ್ಗೆ ಮಾತನಾಡುತ್ತಿದ್ದರು.