ಬಂಗಾಲ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದಿಲ್ಲ, ಅಂದರೆ ಕೇಂದ್ರೀಯ ಭದ್ರತಾ ಪಡೆಯನ್ನು ಕರೆಸಿಕೊಳ್ಳಿ.

ಹಿಂಸಾಚಾರದ ಪ್ರಕರಣದಿಂದಾಗಿ ಕೋಲಕಾತಾ ಉಚ್ಚನ್ಯಾಯಾಲಯದಿಂದ ತೃಣಮೂಲ ಕಾಂಗ್ರೆಸ್ಸಿಗೆ ತಪರಾಕಿ

ಕೋಲಕಾತಾ (ಬಂಗಾಲ) – ಏನಾದರೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪೊಲೀಸರಿಗೆ ಕಾಪಾಡಲು ಬರುತ್ತಿಲ್ಲವಾದರೆ ಕೇಂದ್ರ ಸುರಕ್ಷಾ ದಳ ಕರೆಸಿರಿ, ಎಂಬ ಕಟು ಶಬ್ದಗಳಲ್ಲಿ ಎಚ್ಚರಿಸಿದೆ. ನೂಪುರ ಶರ್ಮ ಇವರು ನೀಡಿರುವ ಪೈಗಂಬರ್ ಅವರ ವಿಷಯವಾಗಿ ಕಪೋಲಕಲ್ಪಿತ ಅವಹೇಳನಕಾರಿ ಹೇಳಿಕೆಯಿಂದ ರಾಜ್ಯಾದ್ಯಂತ ನಡೆದಿರುವ ಹಿಂಸಾಚಾರದ ಪ್ರಕರಣದಲ್ಲಿ ನ್ಯಾಯಾಲಯವು ಸರಕಾರಕ್ಕೆ ತಪರಾಕಿ ನೀಡಿದೆ. ಹಿಂಸಾಚಾರದ ಸಂದರ್ಭದಲ್ಲಿ ಕೆಲವು ಮನವಿ ದಾಖಲಿಸಲಾಗಿದೆ. ಇದರ ಮೇಲೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

೧. ನ್ಯಾಯಾಲಯ ಹೇಳಿದೆ ಏನೆಂದರೆ, ಹಿಂಸಾಚಾರ ನಡೆದಿರುವ ಭಾಗದಲ್ಲಿ ನ ಸಿಸಿ ಟಿವಿಯ ಚಿತ್ರೀಕರಣಗಳನ್ನು ಒಗ್ಗೂಡಿಸಿ. ಅದರ ಮೂಲಕ ಹಿಂಸಾಚಾರದಲ್ಲಿ ಸಹ ಭಾಗಿಯಾಗಿರುವವರ ಗುರುತು ಪತ್ತೆ ಹಚ್ಚಲು ಮತ್ತು ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಯಾವ ಜನರ ಸಂಪತ್ತಿಯ ನಾಶವಾಗಿದೆ ಅವರಿಗೆ ಪರಿಹಾರ ನೀಡುವ ಬಗ್ಗೆ ಸರಕಾರವು ತನ್ನ ಭೂಮಿಕೆಯನ್ನು ಸ್ಪಷ್ಟಪಡಿಸಬೇಕು. ಈ ಸಂದರ್ಭದಲ್ಲಿ ವರದಿ ಪ್ರಸ್ತುತಪಡಿಸಿ.

೨. ನೀಲಾದ್ರಿ ಸಾಹಾ ಇವರು ದಾಖಲಿಸಿರುವ ಮನವಿಯಲ್ಲಿ ಹೇಳಿದೆನೆಂದರೆ, ಯಾವಾಗ ಭಾಜಪಾದ ಕಾರ್ಯಾಲಯ ಬೆಂಕಿಯಿಂದ ಸುಡಲಾಯಿತೋ ಆಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

೩. ಇನ್ನೊಂದು ಮನವಿಯಲ್ಲಿ ಹೇಳಲಾಗಿದೆ ಏನೆಂದರೆ, ಜೂನ್ ೯ ರಂದು ಹಾವಾಡಾ ದ ಅಂಕುರಹಾಟಿಯಲ್ಲಿ ರಾಷ್ಟ್ರೀಯ ಮಹಾಮಾರ್ಗ ತಡೆದು ಸಾರ್ವಜನಿಕ ಸಂಪತ್ತನ್ನು ನಾಶಗೊಳಿಸಿದರು. ಹಿಂಸಾಚಾರ ನಡೆಸುವವರ ಗುರುತು ಪತ್ತೆ ಹಚ್ಚಿ, ಅವರಿಂದ ಪರಿಹಾರ ವಸೂಲಿ ಮಾಡುವಂತೆ ಬೇಡಿಕೆ ಸಲ್ಲಿಸಲಾಗಿದೆ.

೪. ಬಂಗಾಲದ ಹಾವಡಾ, ಮುರ್ಷಿದಾಬಾದ, ೨೪ ಪರಗಣಾ, ನದಿಯಾ ಮುಂತಾದ ಸ್ಥಳಗಳಲ್ಲಿ ಮುಸಲ್ಮಾನರು ಹಿಂಸಾಚಾರ ನಡೆಸಿದ್ದಾರೆ. ಅಲ್ಲಿಯ ಪೊಲೀಸರ ಮೇಲೆ ಕಲ್ಲುತೂರಾಟ ಮಾಡುವುದರ ಜೊತೆಗೆ ಅನೇಕ ಹಿಂದೂಗಳ ಮನೆಗಳನ್ನು ಸುಟ್ಟು ಹಾಕಿದ್ದಾರೆ. ಹಾಗೂ ರೈಲುಗಳ ಮೇಲೆ ಆಕ್ರಮಣ ನಡೆಸಿ ಅದನ್ನು ನಾಶ ಗೊಳಿಸಿದ್ದಾರೆ. ಇದರಲ್ಲಿ ಕೆಲವು ಪ್ರವಾಸಿಗಳು ಗಾಯಗೊಂಡಿದ್ದಾರೆ.

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವಾಗಲೋ ನಾಶವಾಗಿದೆ ಆದ್ದರಿಂದ ಈಗ ನ್ಯಾಯಾಲಯವೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೇಂದ್ರ ಸುರಕ್ಷಾ ದಳವನ್ನು ನೇಮಕಗೊಳಿಸುವ ಆದೇಶ ನೀಡಬೇಕು, ಎಂದು ಇಲ್ಲಿಯ ಹಿಂದೂಗಳಿಗೆ ಅನಿಸುತ್ತದೆ.