ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಯಾವಾಗ ? ವಿಷಯದ ಕುರಿತು ಪತ್ರಿಕಾಗೋಷ್ಠಿ
ಜಿಹಾದಿ ಭಯೋತ್ಪಾದಕರಿಂದ ನಮಗೆ ನಮ್ಮದೇ ದೇಶದಲ್ಲಿ ಸ್ಥಳಾಂತರಗೊಂಡು ೩೨ ವರ್ಷಗಳು ಕಳೆದಿವೆ, ಆದರೆ ಇಂದಿಗೂ ಸಹ, ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಅವರ ಭೀಕರ ಹತ್ಯೆಯ ಸರಣಿಯು ಇನ್ನೂ ನಡೆಯುತ್ತಿದೆ. ಹಿಂದೂಗಳನ್ನು ಅಕ್ಷರಶಃ ಬರ್ಬರವಾಗಿ ಕೊಲ್ಲಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಾಶ್ಮೀರದಲ್ಲಿ ೧೦ ಹಿಂದೂಗಳ ಹತ್ಯೆಯಾಗಿದೆ. ಇದರಿಂದಾಗಿ ಇಂದಿಗೂ ಹಿಂದೂಗಳು ಜೀವ ಮತ್ತು ಧರ್ಮದ ರಕ್ಷಣೆಗಾಗಿ ಕಾಶ್ಮೀರದಿಂದ ಪಲಾಯನ ಮಾಡಬೇಕಾಗುತ್ತಿದೆ. ಭಾರತವು ಸಂವಿಧಾನ ಮತ್ತು ಕಾನೂನಿನ ರಾಜ್ಯವನ್ನು ಹೊಂದಿದ್ದರೂ ಇದು ಏಕೆ ನಿಲ್ಲಲಿಲ್ಲ ? ಆರ್ಟಿಕಲ್ ೩೭೦ ರದ್ದಾದ ಹೊರತಾಗಿಯೂ, ಕಾಶ್ಮೀರವನ್ನು ಹಿಂದೂ ಇಲ್ಲದಂತೆ ಮಾಡಿ ಶೇ. ೧೦೦ ಇಸ್ಲಾಮಿಕ್ ರಾಜ್ಯ ಮಾಡಲು ಪ್ರಯತ್ನಿಸಲಾಗುತ್ತಿದೆ. ಕಾಶ್ಮೀರಿ ಹಿಂದೂಗಳ ಹತ್ಯೆಯನ್ನು ಅವರ ನರಮೇಧ ಮಾಡಲಾಗುತ್ತಿದೆ ಎಂಬುದು ಸರಕಾರ ಒಪ್ಪಿಕೊಳ್ಳಬೇಕು. ಹಿಂದೂಗಳು ಕಾಶ್ಮೀರಕ್ಕೆ ಮರಳುವುದು ಕೆಲವು ಲಕ್ಷ ಜನರ ಮರಳುವಿಕೆ ಅಲ್ಲ, ಆದರೆ ಭಾರತದ, ಭಾರತ ಪ್ರೇಮಿಗಳ ಮರಳುವಿಕೆಯಾಗಿದೆ. ೩೨ ವರ್ಷಗಳ ನಂತರವೂ ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಸ್ಥಳಾಂತರ ಮುಂದುವರಿದರೆ, ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಸಿಗುವುದು ಯಾವಾಗ ? ಎಂದು ‘ಯೂಥ್ ಫಾರ್ ಪನೂನ ಕಾಶ್ಮೀರ’ನ ಶ್ರೀ. ರಾಹುಲ ಕೌಲ ಕೇಂದ್ರ ಸರಕಾರವನ್ನು ಕೇಳಿದ್ದಾರೆ. ಅವರು ೧೦ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ನಾಲ್ಕನೇ ದಿನದಂದು ಗೋವಾದ ಫೋಂಡಾ ‘ಶ್ರೀ ರಾಮನಾಥ ದೇವಸ್ಥಾನದ ವಿದ್ಯಾಧಿರಾಜ ಸಭಾಂಗಣ’ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಈ ವೇಳೆ ವ್ಯಾಸಪೀಠದ ಮೇಲೆ ‘ಯೂತ್ ಫಾರ್ ಪನುನ್ ಕಾಶ್ಮೀರ್’ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀ. ರೋಹಿತ ಭಟ, ತಮಿಳುನಾಡಿನ ‘ಹಿಂದೂ ಮಕ್ಕಲ ಕತ್ರ್ಚಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ ಸಂಪತ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.
ಈ ವೇಳೆ ‘ಯೂಥ ಫಾರ್ ಪನೂನ್ ಕಾಶ್ಮೀರ್’ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀ. ರೋಹಿತ ಭಟ ಮಾತನಾಡುತ್ತಾ, ಕಾಶ್ಮೀರದಲ್ಲಿ ಹಿಂದೂಗಳನ್ನು ಹತ್ಯೆ ಮಾಡುತ್ತಿರುವ ಭಯೋತ್ಪಾದಕರ ವಿರುದ್ಧ ಸರಕಾರ ಕಠಿಣ ಸೈನ್ಯ ಕಾರ್ಯಾಚರಣೆ ಕೈಗೊಳ್ಳಬೇಕು. ‘ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್’ನಂತಹ ಇತರ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಬೇಕು ಮತ್ತು ಮೂಲಗಳ ಮೇಲೆ ಕಡಿವಾಣ ಹಾಕಬೇಕು. ೭ ಲಕ್ಷ ನಿರಾಶ್ರಿತ ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ ಮರಳಲು, ಝೀಲಂ ನದಿಯ ಪೂರ್ವ ಮತ್ತು ಉತ್ತರದಲ್ಲಿರುವ ಕಾಶ್ಮೀರ ಕಣಿವೆಯಲ್ಲಿ ಹಿಂದೂಗಳಿಗಾಗಿ ಸ್ವತಂತ್ರ ‘ಕೇಂದ್ರಾಡಳಿತ ಪ್ರದೇಶ – ಪನೂನ್ ಕಾಶ್ಮೀರ’ ರಚಿಸಬೇಕು. ವಿಶ್ವಸಂಸ್ಥೆಯ ನರಮೇಧ ಕಾಯಿದೆಗೆ ಅನುಗುಣವಾಗಿ ಭಾರತ ಸರಕಾರವು ಕ್ರಮ ಕೈಗೊಳ್ಳಬೇಕು. ‘ಕಾಶ್ಮೀರಿ ನರಮೇಧ ಮತ್ತು ದೌರ್ಜನ್ಯ ತಡೆ ಕಾಯಿದೆ ೨೦೨೦’ ಅನ್ನು ಸಂಸತ್ತು ಅಂಗೀಕರಿಸಬೇಕು ಎಂದು ಹೇಳಿದರು.
ಈ ವೇಳೆ ತಮಿಳುನಾಡಿನ ‘ಹಿಮದು ಮಕ್ಕಲ ಕತ್ಛಿ’ಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಅರ್ಜುನ ಸಂಪಥ ಮಾತನಾಡುತ್ತಾ, ಪ್ರತಿಯೊಬ್ಬ ಕಾಶ್ಮೀರಿ ಹಿಂದೂಗಳಿಗೂ ಸಶಸ್ತ್ರ ರಕ್ಷಣೆ ನೀಡಬೇಕು. ಕೇಂದ್ರ ಸರಕಾರ ಕೂಡಲೇ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಭಾರತಕ್ಕೆ ಸೇರಿಸಬೇಕು ಎಂದು ಹೇಳಿದರು. ಈ ವೇಳೆ ಶ್ರೀ. ರಮೇಶ ಶಿಂದೆ ಇವರು ಮಾತನಾಡುತ್ತಾ, ಕಾಶ್ಮೀರಿ ಹಿಂದೂಗಳು ಮತ್ತೊಮ್ಮೆ ತಮ್ಮ ದೇಶಕ್ಕೆ ಸ್ಥಳಾಂತರಗೊಳ್ಳುವ ಮುಜುಗರದ ಸಮಯ ಬರುವುದು ಇದು ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳಿಂದ ಕೇಂದ್ರ ಸರಕಾರಕ್ಕೆ ನಿಡಿರುವ ಸವಾಲಾಗಿದೆ. ಇಂದು ಭಾರತದಲ್ಲಿ ಇಂತಹ ಕಾಶ್ಮೀರ ಸೃಷ್ಟಿಯಾಗದೇ ಇರಲು, ಹಿಂದೂಗಳು ‘ಸರ್ವಧರ್ಮಸಂಭವ’ ಮತ್ತು ‘ಸೆಕ್ಯುಲರಿಸಂ’ ಎಂಬ ಭ್ರಮೆಯ ಕಲ್ಪನೆಯಿಂದ ಹೊರಬಂದು ಹಿಂದೂ ಸಮಾಜವನ್ನು ರಕ್ಷಿಸಲು ತಮ್ಮನ್ನು ತಾವು ಸಿದ್ಧಪಡಿಸಬೇಕು ಎಂದು ಹೇಳಿದರು.