‘ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಬಗ್ಗೆ ಮಹರ್ಷಿಗಳ ಭವಿಷ್ಯವಾಣಿ !

‘ಮಹರ್ಷಿಗಳು ಹೇಳುತ್ತಾರೆ, ‘ಸಾಧಕರ ಮನಸ್ಸಿನಲ್ಲಿ ‘ಹಿಂದೂ ರಾಷ್ಟ್ರ ಎಂದು ಬರಲಿದೆ ?’, ಎಂಬ ಪ್ರಶ್ನೆ ಬರುತ್ತದೆ. ಮಗುವು ೭ ನೇಯ ತಿಂಗಳಲ್ಲಿ ಅಥವಾ ೯ ನೇಯ ತಿಂಗಳಲ್ಲಿ ಜನಿಸಬಹುದು. ೭ ನೇಯ ತಿಂಗಳಲ್ಲಿ ಹುಟ್ಟಿದ ಮಗುವಿಗೆ ಹೆಚ್ಚಾಗಿ ಏನಾದರೂ ದೋಷವಿರುತ್ತದೆ. ೯ ನೆಯ ತಿಂಗಳಲ್ಲಿ ಹುಟ್ಟಿದ ಮಗು ಸದೃಢವಾಗಿರುತ್ತದೆ. ‘ಹಿಂದೂ ರಾಷ್ಟ್ರವು ಸಹ ಒಂದು ಮಗುವಿನ ಹಾಗೆ. ನಮಗೆ ೭ ನೇಯ ತಿಂಗಳಲ್ಲಿ ಹುಟ್ಟಿದ ಮಗು ಬೇಕೋ ಅಥವಾ ೯ ನೇಯ ತಿಂಗಳಲ್ಲಿ ಹುಟ್ಟಿದ ಮಗು ಬೇಕೋ ?’, ಎಂಬುದನ್ನು ನೀವೇ ನಿರ್ಧರಿಸಬೇಕು. ಒಳ್ಳೆಯ ಮತ್ತು ಸದೃಢ ಮಗುವೆಂದರೆ ಸ್ಥಿರ ‘ಹಿಂದೂ ರಾಷ್ಟ್ರ ಬೇಕಾದರೆ ನಮಗೆ ಇನ್ನೂ ಕೆಲವು ಕಾಲ ಕಾಯಬೇಕಾಗುತ್ತದೆ. ಬೆಟ್ಟದ ಮೇಲೆ ಬಹಳ ವೇಗದಿಂದ ಹತ್ತಿದರೆ, ಕೆಳಗೆ ಇಳಿಯುವಾಗ ತೊಂದರೆಯಾಗುತ್ತದೆ ಮತ್ತು ನಿಧಾನವಾಗಿ ಹತ್ತಿದರೆ ಕೆಳಗೆ ಇಳಿಯುವಾಗ ಕಡಿಮೆ ತೊಂದರೆಯಾಗುತ್ತದೆ. (‘ಮಹರ್ಷಿಗಳು ಹಿಂದೂ ರಾಷ್ಟ್ರವನ್ನು ನವಜಾತ ಶಿಶುವಿಗೆ ಹೋಲಿಸಿದ್ದಾರೆ. ಮಹರ್ಷಿಗಳು ಹಿಂದೂ ರಾಷ್ಟ್ರದ ಬಗ್ಗೆ ಸುಂದರವಾದ ಉದಾಹರಣೆ ಕೊಟ್ಟಿದ್ದಾರೆ ಮತ್ತು ‘ಹಿಂದೂ ರಾಷ್ಟ್ರ ಬಂದೇ ಬರುವುದು, ಇದರ ಬಗ್ಗೆ ಸಾಧಕರಿಗೆ ಭರವಸೆಯನ್ನು ನೀಡಿದ್ದಾರೆ’. – ಸಂಕಲನಕಾರರು)