ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರ ಕೋಣೆಗೆ ಕೆಲವು ದಿನಗಳಿಂದ ಪಾತರಗಿತ್ತಿಗಳು ಬರುವುದು ಮತ್ತು ಅವರ ಸುತ್ತಲೂ ತಿರುಗಾಡುವುದು

ರಾಮನಾಥಿ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಸೇವೆಯನ್ನು ಮಾಡುವ ಕೋಣೆಯ ಕಿಟಕಿಯ ನೆಟ್‌ಲಾನ್‌ನ ಹೊರಗಿನ ಬದಿಗೆ ಪಾತರಗಿತ್ತಿಗಳು ಕುಳಿತುಕೊಳ್ಳುತ್ತವೆ. ಕೆಲವೊಮ್ಮೆ ಅವು ಸೇವೆಯನ್ನು ಮಾಡುವ ಕೋಣೆಯ ಹೊರಗಿನ ಮಾರ್ಗದಲ್ಲಿ ಕುಳಿತುಕೊಳ್ಳುತ್ತವೆ ಮತ್ತು ಕೆಲವೊಮ್ಮೆ ಅವು ಕೋಣೆಯೊಳಗೆ ಬರುತ್ತವೆ. ಯಾವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸೇವೆಯ ಕೋಣೆಯ ಪಕ್ಕದಲ್ಲಿರುವ ಅವರ ವಾಸಿಸುವ ಕೋಣೆಗೆ ಹೋಗುತ್ತಾರೋ, ಆಗ ಆ ಪಾತರಗಿತ್ತಿಗಳೂ ಅವರ ಹಿಂದಿನಿಂದ ಅವರ ವಾಸಿಸುವ ಕೋಣೆಗೆ ಹೋಗುತ್ತವೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಅವರ ಸೇವೆಯ ಕೋಣೆಗೆ ಬರುವಾಗ ಅವು ಅವರೊಂದಿಗೆ ಪುನಃ ಬರುತ್ತವೆ. ಅವು ಅವರ ಸಹವಾಸದಲ್ಲಿ ೧-೨ ದಿನ ಆನಂದದಿಂದ ಹಾರಾಡುತ್ತವೆ. ಅವು ಕೆಲವೊಮ್ಮೆ ದೇವರಕೋಣೆಯ ದೀಪದ ಬಳಿ ಕುಳಿತು ಅಲ್ಲಿಯ ಚೈತನ್ಯವನ್ನು ಗ್ರಹಣ ಮಾಡುತ್ತವೆ. ಅವುಗಳಲ್ಲಿನ ಕೆಲವು ಪಾತರಗಿತ್ತಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಯಲ್ಲಿ ಪ್ರಾಣತ್ಯಾಗ ಮಾಡುತ್ತವೆ. ಒಂದು ಪಾತರಗಿತ್ತಿಯಂತೂ ಅವರ ಚರಣಗಳ ಮೇಲೆಯೇ ದೇಹತ್ಯಾಗ ಮಾಡಿತು. ಈ ಕುರಿತು ಸೂಕ್ಷ್ಮ-ಜ್ಞಾನದಲ್ಲಿ, ಪಾತರಗಿತ್ತಿಯಂತಹ ಸಾತ್ತ್ವಿಕ ಜೀವಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ಪ್ರಕ್ಷೇಪಿತವಾಗುವ ಚೈತನ್ಯವನ್ನು ಗ್ರಹಣ ಮಾಡಲು ಅವರ ಕೋಣೆಗೆ ಬರುತ್ತವೆ. ೧-೨ ದಿನ ಚೈತನ್ಯದಲ್ಲಿ ಆನಂದದಿಂದ ಹಾರಾಡಿದ ನಂತರ ಅವುಗಳ ಸಾವು ಸುಖಕರವಾಗಿ ಬರುತ್ತದೆ ಮತ್ತು ಅವುಗಳಿಗೆ ಮುಂದಿನ ಸದ್ಗತಿ ಸಿಗುತ್ತದೆ. ಎಂಬ ಮಾಹಿತಿ ಸಿಕ್ಕಿದೆ.

– ಶ್ರೀ. ಸೋಹಮ ನೀಲೇಶ ಸಿಂಗಬಾಳ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಗ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೧.೨೦೨೨)

ಸೂಕ್ಷ್ಮ :  ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವುಗಳು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯ ಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ ಎಂದಾಗಿದೆ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಸೂಕ್ಷ್ಮದ ವಿಷಯಗಳು ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚ ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ದಿವ್ಯದೃಷ್ಟಿ ಜಾಗೃತವಾಗುವುದೆಂದರೆ, ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ, ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದ ಕೇಳಿಸುತ್ತದೆ.