ಹಿಂದೂ ಉಗ್ರವಾದದ ಸುಳ್ಳನ್ನು ವಿರೋಧಿಸಿ ಹಿಂದೂ ಧರ್ಮದ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ !

ಮಾರಿಯಾ ವರ್ಥ

೨೦೦೮ ರ ಶರದ್ ಋತುವಿನಲ್ಲಿನ ನನ್ನ ವೇದನೆಗಳು ಇಂದು ಕೂಡ ತಾಜಾ ಆಗಿವೆ. ಕೆಲವು ವರ್ಷಗಳ ಹಿಂದಿನಿಂದ ನಾನು ರಾಜಕಾರಣವನ್ನು ಸಮೀಪದಿಂದ ತಿಳಿದುಕೊಳ್ಳಲು ಆರಂಭಿಸಿದ್ದೆ. ಅದಕ್ಕಾಗಿ ನಾನು ‘ಟೈಮ್ಸ್ ಆಫ್ ಇಂಡಿಯಾ’ದ ಚಂದಾದಾರಳೂ ಆಗಿದ್ದೆ. ಆ ಕಾಲಾವಧಿಯಲ್ಲಿ ಭಾರತದ ವಿವಿಧ ನಗರಗಳಲ್ಲಿ ಅನೇಕ ಬಾಂಬ್‌ಸ್ಫೋಟಗಳಾಗಿದ್ದವು. ಅವುಗಳಲ್ಲಿ ಅನೇಕ ಜನರು ಮೃತರಾಗಿದ್ದರು. ಈ ಬಾಂಬ್‌ಸ್ಫೋಟಗಳಲ್ಲಿನ ಶಂಕಿತ ಅಪರಾಧಿಗಳು ಇಸ್ಲಾಮೀ ಸಂಘಟನೆಗಳಿಗೆ ಸಂಬಂದಿಸಿದವರಾಗಿದ್ದರು. ಅಮೇರಿಕಾದ ಗುಪ್ತಚರ ವಿಭಾಗವೂ ಜಿಹಾದಿ ಉಗ್ರವಾದಿಗಳ ಕಡೆಗೇ ಬೆರಳನ್ನು ತೋರಿಸಿತ್ತು; ಆದರೆ ೨೦೦೮ ರಲ್ಲಿ ಆಶ್ಚರ್ಯಕರ ರೀತಿಯಲ್ಲಿ ‘ಹಿಂದೂ ಉಗ್ರವಾದ’, ‘ಭಗವಾ ಉಗ್ರವಾದ’ದ ಶೀರ್ಷಿಕೆಗಳು ವರ್ತಮಾನಪತ್ರಿಕೆಗಳಲ್ಲಿ ಬರತೊಡಗಿದವು. ರಾಜಕಾರಣಿಗಳು ಮತ್ತು ಪತ್ರಕರ್ತರು ಈ ಶಬ್ದಗಳನ್ನು ಸಹಜವಾಗಿ ಉಪಯೋಗಿಸುತ್ತಿರುವುದು ಕಂಡುಬಂದಿತು. ಅವರು ಯಾವತ್ತೂ ‘ಇಸ್ಲಾಮೀ ಉಗ್ರವಾದ’ ಅಥವಾ ‘ಹಸಿರು ಉಗ್ರವಾದ’ ಎಂಬ ಶಬ್ದಗಳನ್ನು ಪ್ರಯೋಗಿಸುವುದು ಎಲ್ಲಿಯೂ ಕೇಳಿಬಂದಿರಲಿಲ್ಲ. ಆ ಸಮಯದಲ್ಲಿ ಕರ್ನಲ್ ಪುರೋಹಿತ, ಸಾಧ್ವಿ ಪ್ರಜ್ಞಾಸಿಂಹ, ಸ್ವಾಮೀ ಅಸೀಮಾನಂದ ಇವರೊಂದಿಗೆ ಅನೇಕ ಹಿಂದೂಗಳನ್ನು ಬಂಧಿಸಲಾಯಿತು.

೧. ಧರ್ಮವು ಸರ್ವಸಾಮಾನ್ಯರ ಅನ್ಯಾಯಕರ ಹತ್ಯೆಯನ್ನು ಮಾಡಲು ಅನುಮತಿ ನೀಡುವುದಿಲ್ಲ !

ನನಗೆ ‘ಹಿಂದೂ ಉಗ್ರವಾದ’ ಎಂಬುದೇನೂ ಅಸ್ತಿತ್ವದಲ್ಲಿಲ್ಲ ಎಂಬುದು ನಿಶ್ಚಿತವಾಗಿ ತಿಳಿದಿತ್ತು. ಹಿಂದೂ ಉಗ್ರವಾದ ಇರಲು ಸಾಧ್ಯವೇ ಇಲ್ಲ; ಏಕೆಂದರೆ ಹಿಂದೂ ಸಮಾಜವು ಧರ್ಮಾಚರಣಿ ಸಮಾಜವಾಗಿದೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ತನ್ನ ಆಚರಣೆ ಗಳನ್ನು ಯೋಗ್ಯ ರೀತಿಯಲ್ಲಿ ಇಟ್ಟುಕೊಳ್ಳುವುದೇ ಧರ್ಮವಾಗಿದೆ ! ಇಲ್ಲಿ ಪ್ರತಿಯೊಬ್ಬರ ಸದ್ವಿವೇಕಬದ್ಧಿಯು ಅವರ ಮಾರ್ಗದರ್ಶಕವಾಗಿರುತ್ತದೆ. ಇದರಲ್ಲಿ ಯಾರಿಗಾದರು ಯೋಗ್ಯ ಯಾವುದು, ಎಂಬುದು ತಿಳಿಯದಿದ್ದರೆ ಅವರು ಗುರು ಅಥವಾ ಧರ್ಮಗ್ರಂಥಗಳ ಆಧಾರವನ್ನು ಪಡೆಯುತ್ತಾರೆ.

ಒಂದು ವಿಷಯ ಮಾತ್ರ ಸ್ಪಷ್ಟ, ಸಾಮಾನ್ಯ ಜನರನ್ನು ರೈಲ್ವೇ ನಿಲ್ದಾಣದಲ್ಲಿ, ಪೇಟೆಯಲ್ಲಿ ಅಥವಾ ಉಪಹಾರಗೃಹಗಳಲ್ಲಿ ಹತ್ಯೆ ಮಾಡುವುದು ಅತ್ಯಂತ ಅಯೋಗ್ಯವಾಗಿದೆ. ಯೋಗ್ಯ ವಿಚಾರಗಳಿರುವ ವ್ಯಕ್ತಿಯು ಎಂದಿಗೂ ಇಂತಹ ಕುಕರ್ಮಗಳನ್ನು ಮಾಡುವುದಿಲ್ಲ. ಧರ್ಮವು ಇಂತಹ ವಿಷಯಗಳಿಗೆ ಅನುಮತಿ ನೀಡುವುದಿಲ್ಲ. ಯಾವುದಾದರೊಬ್ಬ ಕ್ರೂರ ಆಡಳಿತಗಾರನ ಕೊಲೆ ಮಾಡಲು ಒಂದು ವೇಳೆ ಧರ್ಮ ಅನುಮತಿ ನೀಡಬಹುದು. ಬ್ರಿಟೀಷ ಆಡಳಿತದಲ್ಲಿ ಸರದಾರ ಉಧಮ ಸಿಂಹ ಇವರು ಲೆಫ್ಟನೆಂಟ್ ಗವರ್ನರ್ ಡಾಯರನ ಹತ್ಯೆಯನ್ನು ಮಾಡಿದ್ದರು, ಇದು ಸಮರ್ಥನೀಯವಾಗಿದೆ; ಏಕೆಂದರೆ ಲೆಫ್ಟನೆಂಟ್ ಗವರ್ನರ್ ಡಾಯರನು ೧೯೧೯ ರಲ್ಲಿ ಜಲಿಯನ್‌ವಾಲಾಬಾಗ್ ಹತ್ಯಾಕಾಂಡವನ್ನು ನಡೆಸಿ ಅದರಲ್ಲಿ ಸಾವಿರಾರು ಅಮಾಯಕ ಭಾರತೀಯರನ್ನು ಗುಂಡಿಕ್ಕಿ ಕೊಂದಿದ್ದನು. ಶಾಂತಿಯಿಂದ ಜೀವಿಸುತ್ತಿರುವ ಅಜ್ಞಾತ ಜನರನ್ನು ಹತ್ಯೆಗೈಯುವುದು, ಮಾನವನ ಸದ್ವಿವೇಕಬುದ್ಧಿಯ ವಿರುದ್ಧವಾಗಿದೆ. ಅದು ಹಿಂದೂ ಧರ್ಮದ ಬೆನ್ನೆಲುಬಾಗಿರುವ ಧರ್ಮದ ವಿರುದ್ಧವಾಗಿದೆ.

೨. ಕಾಂಗ್ರೆಸ್‌ನ ದಿಗ್ವಿಜಯ ಸಿಂಹ ಮತ್ತು ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ ಕರಕರೆ ಇವರ ಒತ್ತಡದ ನಂತರ ಬದಲಾದ ತನಿಖೆಯ ದಿಕ್ಕು !

ಹಿಂದೂ ಉಗ್ರವಾದ ಹೇಗೆ ನಿರ್ಮಾಣವಾಯಿತು ? ಎಂಬ ಚಿತ್ರವನ್ನು ಬಲವಂತವಾಗಿ ಮೂಡಿಸಲಾಯಿತು ಮತ್ತು ಯಾರು ಇದರ ಹುಟ್ಟು ಹಾಕಿದರೋ, ಅವರಿಗೆ ತಾವು ಕುಕೃತ್ಯವನ್ನು ಮಾಡುತ್ತಿದ್ದೇವೆ ಎಂಬುದು ಗೊತ್ತಿತ್ತು. ಇಂತಹ ದುಷ್ಟ ಒಳಸಂಚು ಬೇರೆ ಇರಲಿಕ್ಕಿಲ್ಲ. ೨೦೦೬ ರಿಂದ ೨೦೧೦ ಈ ಕಾಲಾವಧಿಯಲ್ಲಿ ಗೃಹಸಚಿವಾಲಯದಲ್ಲಿ ಕಾರ್ಯನಿರತರಾಗಿದ್ದ ಆರ್.ವಿ.ಎಸ್. ಮಣಿ ಇವರು ತಮ್ಮ ‘ಹಿಂದೂ ಟೆರರ್’ ಈ ಪುಸ್ತಕದಲ್ಲಿ ಸುಳ್ಳು ಉಗ್ರವಾದದ ವಿಷಯವನ್ನು ಬರೆದಿದ್ದಾರೆ. ಅಂದಿನ ಗೃಹಸಚಿವ ಶಿವರಾಜ ಪಾಟೀಲ ಇವರು ಅವರನ್ನು ತಮ್ಮ ಕಾರ್ಯಾಲಯಕ್ಕೆ ಕರೆಸಿಕೊಂಡರು. ಆಗ ಅಲ್ಲಿ ಕಾಂಗ್ರೆಸ್ಸಿನ ಹಿರಿಯ ನೇತಾರ ದಿಗ್ವಿಜಯ ಸಿಂಹ ಮತ್ತು ಮುಂಬಯಿಯ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ ಕರಕರೆ ಉಪಸ್ಥಿತರಿದ್ದರು. ಅವರು ಆ ಅವಧಿಯಲ್ಲಾದ ಬಾಂಬ್‌ಸ್ಫೋಟಗಳ ತನಿಖೆಯ ವಿಷಯದಲ್ಲಿ ಅವರ ಮೇಲೆ ಪ್ರಶ್ನೆಗಳ ಸುರಿಮಳೆಗೈದರು. ಆ ಬಾಂಬ್‌ಸ್ಫೋಟಗಳಲ್ಲಿ ಇಸ್ಲಾಮೀ ಉಗ್ರವಾದಿ ಸಂಘಟನೆಗಳ ಸಹಭಾಗವಿದೆ ಎಂಬ ಶ್ರೀ. ಮಣಿಯವರ ನಿರ್ಣಯವನ್ನು ತಿರಸ್ಕರಿಸಿದರು. ಅವರಿಗೆ ಆ ನಿಷ್ಕರ್ಷ ಒಪ್ಪಿಗೆಯಿರಲಿಲ್ಲ. ಅನಂತರ ಮಾಲೆಗಾಂವ್, ಹೈದ್ರಾಬಾದ್ ಮತ್ತು ಸಮಝೌತಾ ಎಕ್ಸ್ಪ್ರೆಸ್ಸ್ ಬಾಂಬ್‌ಸ್ಫೋಟಗಳ ಸ್ವರೂಪಗಳೆಲ್ಲವೂ ಬದಲಾದವು. ತನಿಖೆಯ ದಿಕ್ಕನ್ನೇ ಬದಲಾಯಿಸಲಾಯಿತು. ಈ ಪ್ರಕರಣಗಳಲ್ಲಿ ಹಿಂದೂಗಳನ್ನು ಆರೋಪಿಗಳನ್ನಾಗಿ ಮಾಡಲಾಯಿತು ಮತ್ತು ಮತಾಂಧ ಆರೋಪಿಗಳ ವಿರುದ್ಧ ಈ ಬಾಂಬ್‌ಸ್ಫೋಟಗಳಲ್ಲಿ ಪಾಲ್ಗೊಂಡ ಪುರಾವೆಗಳು ಸಿಕ್ಕಿದ್ದರೂ ಅವರನ್ನು ನಿರ್ದೋಷಿಗಳೆಂದು ಬಿಡಲಾಯಿತು.

ಇದರ ಹಿಂದಿನ ಕಾರಣವೇನಿರಬಹುದು ? ಉಗ್ರವಾದದಿಂದ ಪಾಕಿಸ್ತಾನ ಮತ್ತು ಇಸ್ಲಾಮ್‌ನ ವಿಷಯದಲ್ಲಿ ನಿರ್ಮಾಣವಾಗಿರುವ ನಕಾರಾತ್ಮಕ ಚಿತ್ರಣವನ್ನು ಸೌಮ್ಯಗೊಳಿಸುವುದು ಮತ್ತು ಅವುಗಳಲ್ಲಿಸಮತೋಲನ ಕಾಯುವುದು ಅದರ ಒಂದು ಕಾರಣ ಎಂದು ಊಹಿಸಲಾಗುತ್ತದೆ. ಹಿಂದೂ ಧರ್ಮ ಮತ್ತು ಭಾರತ ಸ್ವಲ್ಪವೂ ಕೆಟ್ಟಿಲ್ಲದಿದ್ದರೂ, ಸ್ವಲ್ಪಮಟ್ಟಿಗಾದರೂ ತೊಂದರೆದಾಯಕವಾಗಿದೆ, ಎನ್ನುವ ಚಿತ್ರಣವನ್ನು ಮೂಡಿಸುವ ಒಂದು ಷಡ್ಯಂತ್ರ ಅದಾಗಿತ್ತುಅವರ ಈ ಕುಟೀಲ ನೀತಿಯು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿತ್ತು.

೩. ಇಸ್ಲಾಮೀ ಆಕ್ರಮಣದ ಪುರಾವೆಗಳಿದ್ದರೂ ದಿಗ್ವಿಜಯ ಸಿಂಹ ಇವರ ಕೈಯಿಂದ ‘೨೬/೧೧ : ಆರ್.ಎಸ್.ಎಸ್.ಕೀ ಸಾಜಿಶ್’ ಎಂಬ ಹೆಸರಿನ ಒಂದು ಪುಸ್ತಕ ಪ್ರಕಾಶನ !

ಮುಂಬಯಿಯ ತಾಜ್ ಹೋಟೇಲ್ ಮೇಲಿನ ಆಕ್ರಮಣವನ್ನು ಹಿಂದೂಗಳು ಮಾಡಿದ್ದಾರೆಂದು ಆರೋಪಿಸಲಾಗುತ್ತಿತ್ತು. ನಿತ್ಯದಂತೆ ಇಸ್ಲಾಮ್ ಮತ್ತು ಉಗ್ರವಾದದ ಸಂಬಂಧವನ್ನು ನಿರಾಕರಿಸಲಾಗುತ್ತಿತ್ತು. ಅದರಿಂದ ಇಸ್ಲಾಮೀ ಉಗ್ರವಾದಿ ಆಕ್ರಮಣದ ದುಷ್ಕೃತ್ಯಗಳನ್ನು ಮಚ್ಚಿಡಲು ಸಾಧ್ಯವಾಗಬಹುದಾಗಿತ್ತು. ಆ ದೃಷ್ಟಿಯಿಂದ ಈ ಷಡ್ಯಂತ್ರವನ್ನು ರಚಿಸುವ ತಂತ್ರ ಯಶಸ್ವಿಯಾಗುವುದು ಕಾಣಿಸುತ್ತಿತ್ತು. ೨೦೦೮ ರಲ್ಲಿ ೨೬/೧೧ ರ ಆಕ್ರಮಣ ನಡೆಯುತ್ತಿರುವಾಗಲೆ ಹಿಂದೂ ಸಂಘಟನೆಗಳ ಮೇಲೆ ಅದನ್ನು ಹೇರುವ ಪ್ರಯತ್ನ ಆರಂಭವಾಗಿತ್ತು. ನಾನು ಈ ಷಡ್ಯಂತ್ರಕ್ಕೆ ಸಂಬಂಧಿಸಿದ ವಾರ್ತೆಗಳನ್ನು ನೋಡಿದಾಗ ನನಗೆ ತುಂಬಾ ದುಃಖವಾಯಿತು. ಅದೇ ಸಮಯದಲ್ಲಿ ಸೌಭಾಗ್ಯ ದಿಂದ ತುಕಾರಾಮ ಓಂಬಳೆ ಎಂಬ ಪೊಲೀಸ್ ಪೇದೆ ತನ್ನಜೀವದ ಹಂಗು ತೊರೆದು ಒಬ್ಬ ಉಗ್ರವಾದಿಯನ್ನು ಜೀವಂತ ಹಿಡಿದ ವಾರ್ತೆಯನ್ನು ಓದಿದೆ. ಈ ಆಕ್ರಮಣದಲ್ಲಿನ ಯಾವುದೇ ಉಗ್ರವಾದಿಯನ್ನು ಜೀವಂತ ಹಿಡಿಯುವ ಸಾಧ್ಯತೆ ಶೂನ್ಯವಾಗಿತ್ತು; ಆದರೆ ಸುದೈವದಿಂದ ಒಬ್ಬ ಉಗ್ರವಾದಿ ಜೀವಂತ ಸಿಕ್ಕಿದ್ದನು. ಅವನ ಹೆಸರು ಕಸಾಬ ಎಂದಾಗಿತ್ತು ಮತ್ತು ಅವನು ಪಾಕಿಸ್ತಾನದ ಮತಾಂಧನಾಗಿದ್ದನು. ಅವನು ತನ್ನನ್ನು ಹಿಂದೂ ಎಂದು ತೋರಿಸಲು ನಯವಾಗಿ ಗಡ್ಡವನ್ನು ಬೋಳಿಸಿದ್ದನು ಮತ್ತು ಕೈಯಲ್ಲಿ ಕೆಂಪು ದಾರವನ್ನು ಕಟ್ಟಿಕೊಂಡಿದ್ದನು. ಆದರೂ ಈ ಉಗ್ರವಾದಿ ಆಕ್ರಮಣವನ್ನು ಹಿಂದೂ ಧರ್ಮಕ್ಕೆ ಜೋಡಿಸುವ ಪ್ರಯತ್ನ ನಡೆದೇ ಇತ್ತು. ಡಿಸೆಂಬರ್ ೨೦೧೦ ರಲ್ಲಿ ಎಲ್ಲ ಪುರಾವೆಗಳು ವಿರುದ್ಧವಾಗಿದ್ದರೂ ‘೨೬/೧೧ – ಆರ್.ಎಸ್.ಎಸ್.ಕೀ ಸಾಜಿಶ್’ ಎಂಬ ಪುಸ್ತಕವನ್ನು ದಿಗ್ವಿಜಯ ಸಿಂಹ ಇವರು ಪ್ರಕಾಶನ ಮಾಡಿದ್ದರು.

೪. ಧರ್ಮದ ಹೆಸರಲ್ಲಿ ನೀಡಲಾಗುವ ಸಮಾಜಘಾತುಕ ಕಲಿಕೆ

ದೇಶದ ಭಾವೀ ಪ್ರಧಾನಮಂತ್ರಿಯೆಂದು ಯಾರನ್ನು ಮುಂದಿಡಲಾಗುತ್ತಿತ್ತೊ, ಆ ರಾಹುಲ್ ಗಾಂಧಿ ‘ಹಿಂದೂ ಉಗ್ರವಾದ’ದ ಡಂಗೂರವನ್ನು ಸಾರುತ್ತ ತಿರುಗಾಡುತ್ತಿದ್ದರು. ಅವರು ಅಮೇರಿಕಾದ ರಾಯಬಾರಿ ತಿಮೋಥೀ ರೋಮರ್ ಇವರಿಗೆ, ‘ಇಸ್ಲಾಮೀ ಉಗ್ರವಾದಕ್ಕಿಂತ ಹಿಂದೂ ಉಗ್ರವಾದ ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಿದೆ’ ಎಂದು ಹೇಳಿದರು. ಅವರು ‘ಎಲ್ಲ  ಧರ್ಮಗಳಲ್ಲಿ ಉಗ್ರವಾದಿಗಳಿದ್ದಾರೆ’, ಎಂದು ಪ್ರಚಾರ ಮಾಡುತ್ತಿದ್ದರು. ಅದರಲ್ಲಿ ಸತ್ಯವಿದೆ ಎನ್ನುವ ಭಾವನೆ ಮೂಡಲು ಆರಂಭವಾಗಿತ್ತು; ಆದರೆ ಉಗ್ರವಾದಿ ಕಾರ್ಯಾಚರಣೆಗಳನ್ನು ಮಾಡುವುದರ ಹಿಂದೆ ಒಂದು ಉದ್ದೇಶ ಅಡಗಿರುತ್ತದೆ. ಇಸ್ಲಾಮ್‌ನಲ್ಲಿ ಉಗ್ರವಾದವನ್ನು ಪುರಸ್ಕರಿಸುವುದು ಕಾಣಿಸುತ್ತದೆ; ಏಕೆಂದರೆ ಕುರಾನ್‌ನಲ್ಲಿ ಮಾನವರನ್ನು’ಇಸ್ಲಾಮನ್ನು ನಂಬುವವರು ಮತ್ತು ಇಸ್ಲಾಮನ್ನು ನಂಬದವರನ್ನು (ಕಾಫೀರ)’ ಹೀಗೆ ಎರಡು ಗುಂಪಿನಲ್ಲಿ ವಿಭಜಿಸಲಾಗಿದೆ. ಅಲ್ಲಾನ ಹೆಸರಿನಲ್ಲಿ ಕಾಫೀರರ ವಿರುದ್ಧ ಯುದ್ಧ ಮಾಡಲು ಪ್ರೇರೇಪಿಸಲಾಗುತ್ತದೆ. ಕುರಾನ್‌ನ ೨.೨೧೬ ರ ಆಯತದಲ್ಲಿ, ‘ನಿನಗೆ ಇಷ್ಟವಿಲ್ಲದಿದ್ದರೂ ಯುದ್ಧ ಮಾಡುವುದು ಹಿತಕಾರಿಯಾಗಿದೆ’ ಎಂದು ಹೇಳಲಾಗಿದೆ. ನಿಜವಾಗಿಯೂ ಈ ಯುದ್ಧವೆಂದರೇನು ? ಇಸ್ಲಾಮೀ ಜಗತ್ತು ಸ್ಥಾಪಿಸುವುದು ಅದರ ಗುರಿಯಾಗಿದೆ; ಏಕೆಂದರೆ ಇತರ ಎಲ್ಲ ಧರ್ಮಗಳು ಸುಳ್ಳಾಗಿವೆ, ಎನ್ನುವ ಬೋಧನೆಯು ಇದರಲ್ಲಿದೆ. ಅಲ್ಲಾ ಕಾಫೀರರನ್ನು ತಿರಸ್ಕರಿಸುತ್ತಾನೆ. ಅವನು ಅವರನ್ನು ನರಕಕ್ಕೆ ಕಳುಹಿಸುತ್ತಾನೆ. ಕಾಫೀರರು ಜಗತ್ತಿನಲ್ಲಿನ ಎಲ್ಲರಿಗಿಂತ ಕೀಳ್ಮಟ್ಟದ ಪ್ರಾಣಿಗಳಾಗಿದ್ದು ಅವರಿಗೆ ಸ್ವಲ್ಪವೂ ದಯೆ ತೋರಿಸಬಾರದು. ಕಾಫೀರರನ್ನು ಕೊಲ್ಲುವುದರಿಂದ ಅಥವಾ ಅವರ ಮಹಿಳೆಯರ ಮೇಲೆ ಬಲತ್ಕಾರ ಮಾಡುವುದರಿಂದ ನಮಗೆ ಯಾವುದೇ ಪಾಪ ತಟ್ಟುವುದಿಲ್ಲ. ಧರ್ಮದ ಹೆಸರಿನಲ್ಲಿ ಇದನ್ನು ಕಲಿಸಲಾಗುತ್ತದೆ ಮತ್ತು ಧರ್ಮಸ್ವಾತಂತ್ರ್ಯದ ಹೆಸರಿನಲ್ಲಿ ಅವರಿಗೆ ಸುರಕ್ಷತೆಯನ್ನೂ ನೀಡಲಾಗುತ್ತದೆ. ಶಾಲೆಗಳಿಂದಲೇ ಇದನ್ನು ಕಲಿಸಲಾಗುತ್ತದೆ. ಮುಲ್ಲಾಮೌಲ್ವಿಗಳು ಬಹಿರಂಗವಾಗಿ ಇದನ್ನು ಪ್ರಸಾರ ಮಾಡುತ್ತಾರೆ. ‘ಈ ಕಲಿಕೆಯನ್ನು ಕೃತಿಯಲ್ಲಿ ತರುವವರಿಗೆ ಸ್ವರ್ಗಪ್ರಾಪ್ತವಾಗುತ್ತದೆ’, ಎನ್ನಲಾಗುತ್ತದೆ. ಆಶ್ಚರ್ಯವೆಂದರೆ, ಈ ಮತದವರು ಇದರ ಮೇಲೆ ವಿಶ್ವಾಸವನ್ನಿಡುತ್ತಾರೆ.

೫. ಮತಾಂತರವಾದವರ ಭವಿಷ್ಯ ಅಪಾಯಕಾರಿ !

ಮತಾಂಧರಿಗೆ ಚಿಕ್ಕಂದಿನಿಂದಲೂ ಇಂತಹ ಬೋಧನೆ ನೀಡಲಾಗುತ್ತದೆ. ಆದ್ದರಿಂದ ಅವರು ಹಾಗೆ ವರ್ತಿಸುತ್ತಾರೆ, ಎಂಬುದನ್ನುಅರ್ಥ ಮಾಡಿಕೊಳ್ಳಬಹುದು; ಆದರೆ ಖಲಿದ ಮಸೂದ (ಪೂರ್ವಾಶ್ರಮದ ಎಡ್ರಿಯನ್ ಎಲ್ಮ್ಸ್) ಇವನಂತಹ ಮತಾಂತರಿತ ಮತಾಂಧನೂ ಅಲ್ಲಾನ ಹೆಸರಿನಲ್ಲಿ ಹತ್ಯೆ ಮಾಡುತ್ತಿದ್ದಾನೆ. ಯಾರು ನಿಜವಾದ ಕ್ರೈಸ್ತರು ಮತ್ತು ನಿಜವಾದ ಮುಸಲ್ಮಾನರಲ್ಲವೋ, ಅವರ ಭವಿಷ್ಯವು ಭಯಾನಕವಾಗಿದೆ, ಎನ್ನುವ ಭವಿಷ್ಯವಾಣಿಯನ್ನು ಅನುಕ್ರಮವಾಗಿ ಚರ್ಚ್ ಮತ್ತು ಇಸ್ಲಾಮ್ ಮಾಡುತ್ತಿವೆ.

‘ಕಾಫೀರರ ಹತ್ಯೆಯನ್ನು ಮಾಡಿದರೆ ಖಚಿತವಾಗಿ ನಿಮಗೆ ಸ್ವರ್ಗ ಪ್ರಾಪ್ತವಾಗುವುದು’, ಎಂದು ಈ ಅಪರಾಧಿಗಳ ಮನಸ್ಸಿನ ಮೇಲೆ ಬಿಂಬಿಸಲಾಗುತ್ತದೆ. ‘ನಿರಪರಾಧಿಗಳ ಹತ್ಯೆ ಮಾಡಿದರೆ ಸ್ವರ್ಗ ಸಿಗುವುದಿಲ್ಲ’, ಎಂಬುದು ಖಚಿತ; ಆದರೆ ಯಾರೂ ಅವರಿಗೆ ಈ ವಿಷಯವನ್ನು ತಿಳಿಸಿಹೇಳುವುದಿಲ್ಲ. ತದ್ವಿರುದ್ಧ ವಿದ್ಯಾವಂತರು ಮತ್ತು ವ್ಯಾಪಾರಿ ಮುಸಲ್ಮಾನರು ಅವರ ಮನಸ್ಸಿನಲ್ಲಿ ಸಂಶಯದ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಾರೆ.

ತನ್ನ ಉಜ್ವಲ ಭವಿಷ್ಯಕ್ಕಾಗಿ ಕಾಫೀರರನ್ನು ಹತ್ಯೆಗೊಳಿಸುವ ಕಲಿಕೆಯನ್ನು ಇಸ್ಲಾಮ್ ನೀಡುತ್ತದೆ. ಕ್ರೈಸ್ತ ಪಂಥದಲ್ಲಿಯೂ ಕ್ರೈಸ್ತರಲ್ಲದ ಲಕ್ಷಗಟ್ಟಲೆ ಜನರನ್ನು ಹತ್ಯೆಗೊಳಿಸಲಾಗಿದೆ. ಸಾಮ್ಯವಾದ ಮತ್ತು ನಾಝೀವಾದಿಗಳು ಕೂಡ ಅವರ ವಿಚಾರಶೈಲಿಯನ್ನು ಒಪ್ಪದ ಲಕ್ಷಗಟ್ಟಲೆ ಜನರನ್ನು ಹತ್ಯೆ ಮಾಡಿದ್ದಾರೆ. ಇಸ್ಲಾಮ್ ಮತ್ತು ಕ್ರೈಸ್ತರಲ್ಲಿ ವ್ಯತ್ಯಾಸವೆಂದರೆ, ಕ್ರೈಸ್ತರು ‘ದೇವರಿಗೆ ಇಷ್ಟವೆಂದು ಇತರರನ್ನು ಹತ್ಯೆಗೊಳಿಸುತ್ತೇವೆ’, ಎಂದು ಹೇಳುವುದಿಲ್ಲ.

೬. ಹಿಂದೂ ಧರ್ಮವು ವಿಶ್ವಬಂಧುತ್ವದ ಶಿಕ್ಷಣ ನೀಡುತ್ತದೆ !

ಹಿಂದೂ ಧರ್ಮ ಮಾತ್ರ ಸಂಪೂರ್ಣ ಬೇರೆ ಮತ್ತು ಪರೋಪಕಾರಿ ಧರ್ಮವಾಗಿದೆ. ಬ್ರಹ್ಮನು ಈ ವಿಶ್ವದ ಮೂಲವಾಗಿದ್ದು ಅವನು ಎಲ್ಲರಲ್ಲಿಯೂ ಇದ್ದಾನೆ. ಅವನು ಸರ್ವವ್ಯಾಪಿಯಾಗಿದ್ದಾನೆ. ಅವನು ಆತ್ಮಸ್ವರೂಪಿಯಾಗಿರುವುದರಿಂದ ಅವನನ್ನು ನಂಬುವ ಜನರು ಮತ್ತು ನಂಬದಿರುವ ಜನರು ಎಂಬ ಭೇದವನ್ನು ಅವರು ಮಾಡುವುದಿಲ್ಲ ಆತ್ಮವು ಎಲ್ಲರಲ್ಲಿಯೂ ಇದೆ ಮತ್ತು ಎಲ್ಲರಿಗೂ ಜೀವಿಸುವ ಹಕ್ಕು ಇದೆ. ಹಿಂದೂ ಧರ್ಮವು ವಿಶ್ವಬಂಧುತ್ವದ ಶಿಕ್ಷಣವನ್ನು ನೀಡುತ್ತದೆ. ತಮ್ಮ ಗುಂಪಿಗಷ್ಟೆ ಸೀಮಿತ ಬಂಧುತ್ವದ ಬೋಧನೆಯನ್ನು ನೀಡುವುದಿಲ್ಲ.

ಈ ಜಗತ್ತಿನಲ್ಲಿ ಬಹಳಷ್ಟು ಜನರು ಹಿಂದೂ ಹೆಸರನ್ನು ಇಟ್ಟುಕೊಂಡಿರುತ್ತಾರೆ ಆದರೆ ಹಿಂದೂ ಧರ್ಮದಂತೆ ನಡೆದುಕೊಳ್ಳುವುದಿಲ್ಲ. ಇಂತಹ ಜನರೂ ಇದ್ದಾರೆ. ಅವರು ಸ್ವಾರ್ಥ, ವಾಸನೆ ಅಥವಾ ದ್ವೇಷಭಾವನೆಯಿಂದ ಅಪರಾಧಗಳನ್ನು ಮಾಡುತ್ತಾರೆ. ಅವರಿಗೆ ಶಿಕ್ಷೆಯಾಗುವುದು ಆವಶ್ಯಕವಾಗಿದೆ. ಹಿಂದೂ ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರಲ್ಲಿ ಉಗ್ರವಾದವನ್ನು ಹುಟ್ಟಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನ ಕೆಲವು ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ‘ಹಿಂದೂ ಉಗ್ರವಾದ’ವನ್ನು ಹುಟ್ಟಿಸುವುದು ಒಂದು ಅತ್ಯಂತ ಭಯಂಕರ ಹಾಗೂ ವಿಶ್ವಾಸಘಾತಕ ಷಡ್ಯಂತ್ರವಾಗಿದೆ.

ಭಾರತ ದೇಶವು ತುಕಾರಾಮ ಓಂಬಳೆಯವರಿಗೆ ಕೃತಜ್ಞವಾಗಿದೆ. ಅವರಿಂದಾಗಿ ೨೦೦೮ ರಲ್ಲಿ ಹಿಂದೂಗಳ ವಿರುದ್ಧದ ಒಂದು ದೊಡ್ಡ ಷಡ್ಯಂತ್ರ ತಪ್ಪಿತು. ಆದರೆ ಅದರಿಂದಾಗಿ ಅಪಾಯ ಮಾತ್ರ ಇನ್ನೂ ದೂರವಾಗಿಲ್ಲ. ಹಿಂದೂ ಧರ್ಮವನ್ನು ಕೀಳ್ಮಟ್ಟದ ಧರ್ಮವೆಂದು ನೋಡುವ ಶಕ್ತಿಗಳು ಇನ್ನೂ ಸಕ್ರಿಯವಾಗಿವೆ. ಹಿಂದೂಗಳು ಸತರ್ಕರಾಗಿರಬೇಕು ಹಾಗೂ ಅವರು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಬೇಕು. ಅದೇ ರೀತಿ ಧರ್ಮಾಚರಣೆಯ ಮಾರ್ಗವನ್ನು ಅವಲಂಬಿಸಬೇಕು.

೭. ಹಿಂದೂ ಧರ್ಮದ ರಕ್ಷಣೆಯನ್ನು ಮಾಡುವುದು ಮಾನವತೆಯ ದೃಷ್ಟಿಯಿಂದ ನಮ್ಮ ಕರ್ತವ್ಯವೇ ಆಗಿದೆ !

ಹಿಂದೂ ಧರ್ಮವು ಸಮುದ್ರದಂತಹ ಒಂದು ದೊಡ್ಡ ತೆರೆಯಾಗುವುದು ಆವಶ್ಯಕವಾಗಿದೆ, ಅದು ಸಂಪೂರ್ಣ ಜಗತ್ತನ್ನು ಸ್ವಚ್ಛಗೊಳಿಸುವುದು ಮತ್ತು ಎಲ್ಲ ಜನರನ್ನು ಸತ್ಯದ ಸಮೀಪ ತರಬಹುದು. ಸತ್ಯವು ಪುಸ್ತಕಗಳಲ್ಲಿಲ್ಲ. ಹಿಂದೂ ಧರ್ಮವು ಸತ್ಯವನ್ನುಆಧರಿಸಿದರಿಂದ ನಾವು ಅದರ ಅನುಭೂತಿಯನ್ನು ಪಡೆಯಬಹುದು. ನಾವು ಯಾರಾಗಿದ್ದೇವೆ ಎಂಬುದನ್ನು ಗುರುತಿಸುವುದೇ ನಮ್ಮ ಜೀವನದ ಮುಖ್ಯ ಧ್ಯೇಯವಾಗಿದ್ದು ಅದುವೇ ನಿಜವಾದ ಆನಂದವಾಗಿದೆ.

ದುರಾಗ್ರಹಿಗಳನ್ನು ಮತ್ತು ಕಟ್ಟರತಾವಾದಿ ಪಂಥಗಳನ್ನು ಮುಗಿಸುವ ಶಕ್ತಿ ಹಿಂದೂ ಧರ್ಮದಲ್ಲಿದೆ, ಎಂಬುದು ತಿಳಿದಿದೆ. ಈ ಪಂಥದವರಿಗೆ ಯಾವಾಗ ಅವರ ಹೇಳಿಕೆಯ ಅಸತ್ಯದ ಅರಿವಾಗುವುದೋ, ಆಗ ಆ ಪಂಥಗಳ ಪ್ರಭಾವ ಕ್ಷೀಣವಾಗುವುದು. ಇತ್ತೀಚೆಗೆ ಪಾಶ್ಚಾತ್ಯ ದೇಶಗಳಲ್ಲಿ ಕ್ರೈಸ್ತ ಪಂಥದ ಪ್ರಭಾವ ಕಡಿಮೆಯಾಗಿದೆ. ಎಲ್ಲರೂ ಹಿಂದೂ ಧರ್ಮವನ್ನು ಪಾಲಿಸಬೇಕು, ಹಿಂದೂ ಧರ್ಮದಂತೆ ನಡೆದುಕೊಳ್ಳಬೇಕು. ಅದೇ ಈ ಭೂಮಿಯ ಮೇಲಿನ ಪ್ರಾಚೀನ ಋಷಿ-ಮುನಿಗಳ ಬಗೆಗಿನ ನಮ್ಮ ಕರ್ತವ್ಯವಾಗಿದೆ ಹಾಗೂ ವ್ಯಾಪಕವಾಗಿ ಮಾನವತೆಯ ಬಗೆಗಿನ ನಮ್ಮ ಕರ್ತವ್ಯವೂ ಆಗಿದೆ.’

– ಮಾರಿಯಾ ವರ್ಥ, ಜರ್ಮನ್ ಲೇಖಕಿ.