ಕಾಶಿಯಲ್ಲಿ ಜ್ಞಾನವಾಪಿಯ ಸತ್ಯ ಶೋಧನೆಯ ಭಯವೇಕೆ ?

ಸಮೀಕ್ಷೆಗೆ ಗಂಭೀರ ಬೆದರಿಕೆಯನ್ನೊಡ್ಡುವುದು ಮತ್ತು ಪ್ರತ್ಯಕ್ಷದಲ್ಲಿಯೂ ಸಮೀಕ್ಷೆಯ ಆರಂಭದಲ್ಲಿ ಗುಂಪುಕಟ್ಟಿ ವಿರೋಧಿಸುವುದು ಇದೆಲ್ಲ ನ್ಯಾಯಾಲಯದ ಅವಮಾನವಲ್ಲವೇನು ?

ಶ್ರೀ. ವಿನೋದ ಬನ್ಸಲ್

೧. ಜ್ಞಾನವಾಪಿ ಮಸೀದಿಯ ಸಮೀಕ್ಷೆಗಾಗಿ ನ್ಯಾಯಾಲಯ ನೀಡಿರುವ ಆದೇಶವನ್ನು ಮತಾಂಧರು ವಿರೋಧಿಸುವುದು ಹಾಗೂ ಜ್ಞಾನವಾಪಿ ಇಂತಜಾಮಿಯಾ ಕಮಿಟಿಯ ಕಾರ್ಯದರ್ಶಿಗಳು ಗಂಭೀರ ಎಚ್ಚರಿಕೆಯನ್ನು ನೀಡಿರುವುದು

ಜ್ಞಾನವಾಪಿ ಮಸೀದಿಯ ಪರಿಸರದ ಚಿತ್ರ

ಕಾಶಿಯ ಶೃಂಗಾರಗೌರಿದೇವಿಯ ಪೂಜೆಯ ಅಧಿಕಾರವನ್ನು ಪುನಃ ಪಡೆಯಲು ಹಿಂದೂ ಸಮಾಜವು ದಶಕಗಳಿಂದ ನಿರೀಕ್ಷಣೆಯಲ್ಲಿದೆ. ಈ ವಿಷಯದಲ್ಲಿ ಕಾಶಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರು ಜ್ಞಾನವಾಪಿ ಮಸೀದಿಯ ಪರಿಸರದ ಚಿತ್ರೀಕರಣ ಹಾಗೂ ಸಮೀಕ್ಷೆಯನ್ನು ಮಾಡಲು ಆದೇಶವನ್ನು ನೀಡಿದರು. ‘ನ್ಯಾಯಾಲಯ ಆಯುಕ್ತ’ರ ಮೂಲಕ ಈ ಕಾರ್ಯವಾಗಲಿಕ್ಕಿದೆ; ಆದರೆ ನ್ಯಾಯಾಲಯ ನೇಮಕ ಮಾಡಿರುವ ಅಧಿಕಾರಿಗಳನ್ನು ಕಥಿತಮಸೀದಿಯ ಪರಿಸರಕ್ಕೆ ಹೋಗದಂತೆ ಮತಾಂಧರು ತಡೆಯೊಡ್ಡಿದರು. ಇದರ ಹಿಂದೆ ‘ಜ್ಞಾನವಾಪಿ ಇಂತಜಾಮಿಯಾ ಕಮಿಟಿ’ಯ ಕಾರ್ಯದರ್ಶಿಗಳು ನೀಡಿರುವ ೪ ಕಾರಣಗಳು ಅತ್ಯಂತ ಗಂಭೀರವಾಗಿವೆ. ಅವರು ಹೇಳಿದ್ದು ಏನೆಂದರೆ,

ಅ. ನಾವು ಮಸೀದಿಯ ಒಳಗೆ ಮುಸಲ್ಮಾನನೇತರರಿಗೆ ಪ್ರವೇಶ ನೀಡುವುದಿಲ್ಲ.

ಆ. ನ್ಯಾಯಾಲಯ ನಮ್ಮ ಮಾತನ್ನು ಕೇಳಲಿಲ್ಲ; ಆದ್ದರಿಂದ ನಾವು ಕೂಡ ನ್ಯಾಯಾಲಯದ ಮಾತನ್ನು ಕೇಳುವುದಿಲ್ಲ.

ಇ. ಮಸೀದಿಯ ಒಳಗಿನ ಚಿತ್ರೀಕರಣ ಅಥವಾ ಛಾಯಾಚಿತ್ರಗಳನ್ನು ತೆಗೆದ ನಂತರ ಅದು ಸಾರ್ವಜನಿಕವಾಗುವುದು. ಅದರಿಂದ ನಮ್ಮ ಭದ್ರತೆಗೆ ಅಪಾಯವಾಗಬಹುದು.

ಈ. ಕೊನೆಯ ಕಾರಣವು ಅತ್ಯಂತ ಆಕ್ಷೇಪಾರ್ಹವಾಗಿತ್ತು, ಅಂದರೆ ನ್ಯಾಯಾಲಯ ನೇಮಕ ಮಾಡಿದ ಅಧಿಕಾರಿಗೆ ನನ್ನ ಕುತ್ತಿಗೆಯನ್ನು ಕತ್ತರಿಸಿ ತನ್ನಿ, ಎಂದು ಹೇಳಿದರೆ, ಆ ಅಧಿಕಾರಿಗೆ ನಾನು ನನ್ನ ಕುತ್ತಿಗೆಯನ್ನು ಕತ್ತರಿಸಲು ಏಕೆ ಕೊಡಬೇಕು ?

ಸಭ್ಯ ಸಮಾಜದ ಹಾಗೂ ಕಾನೂನಿನ ಮೇಲೆ ವಿಶ್ವಾಸವಿಡುವ ಯಾವುದೇ ವ್ಯಕ್ತಿ ಈ ರೀತಿಯಲ್ಲಿ ನ್ಯಾಯಾಲಯದ ಮಾರ್ಗದಲ್ಲಿ ಅಡಚಣೆಯಿದೆ ಎಂದು ಹೇಳಲು ಸಾಧ್ಯವೇ ? ಈ ಮಸೀದಿಯ ಇಂತಜಾಮಿಯಾ ಕಮಿಟಿಯ ಹೇಳಿಕೆಯು ವಿದೇಶಿ ಆಕ್ರಮಕರ ಬೆಂಬಲಿಗರ ಪದ್ಧತಿ, ಚರಿತ್ರೆ ಮತ್ತು ಮುಖವಾಡವನ್ನು ತೆರೆದಿಡುತ್ತದೆ.

೨. ಕೆಲವರು ಧಾರ್ಮಿಕ ಸಮಸ್ಯೆಯೊಂದಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತಿಸುತ್ತಿದ್ದಾರೆ

ಭಾರತದ ಮಸೀದಿಗಳಿಗೆ ನ್ಯಾಯಾಲಯ ಅಥವಾ ದೇಶದ ಕಾನೂನನ್ನು ಪಾಲಿಸುವ ಸಂಸ್ಥೆಗಳಿಗೂ ಪ್ರವೇಶಿಸುವ ಅನುಮತಿ ಇಲ್ಲವೆ ? ಅಥವಾ ನ್ಯಾಯಾಲಯವನ್ನೂ ಧರ್ಮದ ದೃಷ್ಟಿಯಲ್ಲಿ ನೋಡಲಾಗುತ್ತದೆಯೇ ? ನ್ಯಾಯಾಲಯದ ಹೊರಗೆ ಜನಸಂದಣಿಯನ್ನು ನಿರ್ಮಾಣ ಮಾಡಿ ಸರಕಾರಿ ಕಾರ್ಯದಲ್ಲಿ ಅಡಚಣೆಯನ್ನುಂಟು ಮಾಡಲು ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸುವುದು ನ್ಯಾಯಾಲಯದ ಅವಮಾನವಲ್ಲವೇ ? ದೇಶದ ರಾಜಕಾರಣದಲ್ಲಿನ ಕೆಲವರು ಯಾವಾಗಲೂ ಮುಸಲ್ಮಾನ ಯುವಕರನ್ನು ಪ್ರಚೋದಿಸುವ ಕಾರ್ಯವನ್ನು ಮಾಡುತ್ತಾರೆ, ಅವರು ಜಿಹಾದಿಗಳಿಗೆ ಪ್ರೋತ್ಸಾಹ ನೀಡುತ್ತಿರುತ್ತಾರೆ; ಆದರೆ ಅವರು ಸಂವಿಧಾನ, ಕಾನೂನು ಹಾಗೂ ನ್ಯಾಯವ್ಯವಸ್ಥೆಯ ವಿಷಯದಲ್ಲಿ ಮಾತನಾಡುತ್ತಿರುತ್ತಾರೆ. ಇಂತಹ ಜನರು ಕೂಡ ತಮ್ಮ ರಾಜಕೀಯ ಬೇಳೆಬೇಯಿಸಿಕೊಳ್ಳಲು ಮತ್ತು ಹರಿಯುವ ನದಿಯಲ್ಲಿ ಕೈತೊಳೆದುಕೊಳ್ಳಲು ಧುಮುಕಿದ್ದಾರೆ.

೩. ಸಮೀಕ್ಷೆಯನ್ನು ವಿರೋಧಿಸುವುದೆಂದರೆ, ಮತಾಂಧರಿಗೆ ಭಾರತೀಯ ನ್ಯಾಯವ್ಯವಸ್ಥೆಯ ಮೇಲೆ ವಿಶ್ವಾಸವಿಲ್ಲ ಎಂಬುದರ ಸಂಕೇತವಾಗಿದೆ !

ಭಾಗ್ಯನಗರದ ಕೆಲವು ನ್ಯಾಯವಾದಿಗಳು ಹೇಳುತ್ತಾರೆ, ಏನೆಂದರೆ, ಸರಕಾರ ೧೯೯೧ ರ ಕಾನೂನನ್ನು ಕೂಡ ಮನ್ನಿಸುವುದಿಲ್ಲ. ‘ಪ್ಲೇಸಸ್ ಆಫ್ ವರ್ಶಿಪ್ ಏಕ್ಟ್ ೧೯೯೧’ರ ವಿಷಯದಲ್ಲಿ ನ್ಯಾಯಾಲಯ ವಿಚಾರ ಮಾಡಿದೆ. (ಈ ಕಾನೂನುಪ್ರಕಾರ ೧೫ಅಗಸ್ಟ್  ೧೯೪೭ ರಿಂದ ೧೯೯೧ ರ ವರೆಗೆ ಧಾರ್ಮಿಕ ಸ್ಥಳಗಳ ವಿಷಯದಲ್ಲಿ ಯಾವುದೇ ಖಟ್ಲೆ ನಡೆಯುತ್ತಿದ್ದರೆ, ಅದನ್ನು ನೇರವಾಗಿ ರದ್ದುಪಡಿಸಲಾಗುತ್ತದೆ. ಹಾಗೂ ಯಾವ ಪೂಜಾ ಸ್ಥಳಗಳು ಯಾವ ಧಾರ್ಮಿಕಸ್ಥಿತಿಯಲ್ಲಿದ್ದವೋ ಅವುಗಳು ಹಾಗೆಯೆ ಇರುವವು. ಅವುಗಳ ಧಾರ್ಮಿಕಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ.) ಆದರೂ ಅದನ್ನೆ ಗುರಾಣಿಯನ್ನಾಗಿ ಮಾಡಿಕೊಂಡು ಡೋಲು ಬಾರಿಸುವುದು ಸರಿಯೇ ? ಸತ್ಯದತನಿಖೆಯ ಮೇಲೆ ಪ್ರಹಾರವನ್ನು ಮಾಡಲಾಗುತ್ತಿದೆ. ಮಾನ್ಯ ನ್ಯಾಯಾಲಯ ನೇಮಿಸಿರುವ ನ್ಯಾಯಾಂಗ ಆಯುಕ್ತರಿಗೆ ಕೇವಲಚಿತ್ರೀಕರಣ ಮಾಡಿ ವರದಿಯನ್ನು ರಹಸ್ಯವಾಗಿ ನೀಡಲು ಹೇಳಲಾಗಿ ದೆಯೊ, ಅವರಿಗೆ ಪದೇ ಪದೇ ಕೇವಲ ಅಡ್ಡಿಪಡಿಸುವುದಲ್ಲ, ಅವರಮೇಲೆ ಪಕ್ಷಪಾತದ ಆರೋಪವನ್ನೂ ಮಾಡಲಾಗುತ್ತಿದೆ.

ಪರಿಸರದ ಸಮೀಕ್ಷೆ ಮಾಡಲು ಬಿಡದಿರುವುದರ ಹಿಂದೆ ಎರಡೇತರ್ಕಗಳಿರಬಹುದು. ಒಂದು ಆ ಕಥಿತ ಮಸೀದಿಯ ಒಳಗೆ ಏನಾದರೂ ಅನಿಷ್ಠಕಾರಿ ಅಥವಾ ಅನಧಿಕೃತ ಸಂಗ್ರಹವಿರಬಹುದು, ಅಂದರೆ ಯಾವುದು ಭಾರತದ ಅನೇಕ ಮಸೀದಿ, ಮದರಸಾಮತ್ತು ಮುಸಲ್ಮಾನ ಬಹುಸಂಖ್ಯಾತ ಪರಿಸರದಲ್ಲಿ ಕಂಡುಬAದಿರು ವಂತಹದ್ದು. ಅಲ್ಲಿ ಸ್ಫೋಟಕಗಳು, ಬಾಂಬ್‌ಗಳು, ಉಗ್ರವಾದಿಗಳನ್ನು ಅಡಗಿಸುವಂತದ್ದು, ಅವರಿಗೆ ಬಹಳ ಮಹತ್ವದ್ದಾಗಿರುತ್ತದೆ. ಎರಡನೆಯ ಕಾರಣವೆಂದರೆ, ಸಮೀಕ್ಷೆಯಾದರೆ ಅವರ ಎಲ್ಲ ಗುಟ್ಟುರಟ್ಟಾಗುವುದೆಂಬುದು ಖಚಿತವಾಗಿದೆ. (ಸತ್ಯ ಹೊರಗೆ ಬರುವುದು). ಈಗ ದೇಶಕ್ಕೆ ಅರಿವಾಗುತ್ತಿರುವುದು ಏನೆಂದರೆ, ಈ ಜನರು ಸತ್ಯದ ಮೇಲೆ ಅಸತ್ಯದ ಬುರ್ಖಾವನ್ನು ಧರಿಸಿ ದೇಶದಲ್ಲಿ ಧಾರ್ಮಿಕ ಅರಾಜಕತೆಯನ್ನು ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಸಮಾಜದ ಜನರಿಗೂ ಮಸೀದಿಗಳಲ್ಲಿ ಹೀಗೆ ಅಡಗಿಸುವಂತಹ ರಹಸ್ಯ ಏನಿರುತ್ತದೆ ಎಂಬುದರ ಮಾಹಿತಿಯನ್ನು ನೀಡಬೇಕಾಗಿದೆ. ಇಂದಿನ ವರೆಗೆ ಇಲ್ಲಿಗೆ ಯಾರೂ ಹೋಗಿರಲಿಲ್ಲವೆ ? ನಿಮಗೆ ಭಾರತೀಯ ನ್ಯಾಯವ್ಯವಸ್ಥೆಯ ಮೇಲೆ ವಿಶ್ವಾಸವಿಲ್ಲವೇ ?

೪. ಅಲ್ಪಸಂಖ್ಯಾತರು ಬಹುಸಂಖ್ಯ ಹಿಂದೂ ಸಮಾಜಕ್ಕೆ ಅವರ ಆರಾಧ್ಯ ದೇವತೆಗಳ ಪೂಜೆ ಮಾಡದಂತೆ ಅಡ್ಡಿಪಡಿಸುವುದು ಆಶ್ಚರ್ಯಕರವಾಗಿದೆ !

ಶೃಂಗಾರಗೌರೀದೇವಿಯ ಮಂದಿರದಲ್ಲಿ ಪೂಜೆ ಮಾಡುವುದು ಮತ್ತು ದರ್ಶನ ತೆಗೆದುಕೊಳ್ಳುವುದು ಒಂದು ದಶಕದ ಹಿಂದಿನವರೆಗೆ ನಿಯಮಿತವಾಗಿತ್ತು. ಅಲ್ಲಿಗೆ ಭಕ್ತರು ದರ್ಶನಕ್ಕಾಗಿ ಹೋಗುತ್ತಿದ್ದರು. ಆ ಮಂದಿರವನ್ನು ಮಸೀದಿಯ ಗೋಡೆಯ ಹೊರಗಿನ ಭಾಗದಲ್ಲಿ ನಿರ್ಮಿಸಲಾಗಿದೆ, ಆದರೂ ಹಿಂದೂಗಳಿಗೆ ಪೂಜೆಯಿಂದ ವಂಚಿಸುವುದೇಕೆ ? ಈ ಬಹುಸಂಖ್ಯ ಹಿಂದೂ ಸಮಾಜಕ್ಕೆ ಅವರ ಆರಾಧ್ಯ ದೇವತೆಗಳ ಪೂಜೆ ಮಾಡುವ ಅಧಿಕಾರವನ್ನೂ ಕಥಿತ ಅಲ್ಪಸಂಖ್ಯಾತ ಸಮಾಜವು ಕೊಡಲು ಸಾಧ್ಯವಿಲ್ಲವೆ ? ಈ ಕಥಿತ ಮಸೀದಿಯ ಹೆಸರಿನಲ್ಲಿಯೆ ಸಂಪೂರ್ಣ ಜಗತ್ತಿಗೆ ಅರಿವಾಗುವುದು ಏನೆಂದರೆ, ಇದರ ಹೆಸರು ‘ಜ್ಞಾನವಾಪಿ’ ಏಕೆ ? ಅದರ ವಿಚಿತ್ರ ರೂಪ ಮತ್ತು ಸಮೀಪದಲ್ಲಿರುವ ಮೂರ್ತಿಗಳಿಂದಲೇ ಅಲ್ಲಿ ಹಿಂದೂ ಶ್ರದ್ಧಾಸ್ಥಾನಗಳ ಕೇಂದ್ರಗಳನ್ನು ಕೆಡವಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸಿದ್ಧವಾಗುತ್ತದೆ

೫. ಪರಸ್ಪರರ ಸಂಸ್ಕೃತಿ, ಪರಂಪರೆ ಹಾಗೂ ವಿಶ್ವಾಸವನ್ನು ಗೌರವಿಸುವುದರಿಂದ ಭಾರತೀಯರೆಲ್ಲರೂ ಮನಸ್ಸಿನಿಂದ ಸೌಹಾರ್ದತೆಯಿಂದ ಇರಬಹುದು !

ಯಾರು ಬಂಧುಭಾವದ ಬಗ್ಗೆ ಅಥವಾ ಒಟ್ಟಾಗಿ ಕುಳಿತು ಸಮಸ್ಯೆಗಳ ನಿವಾರಣೆಯ ಬಗ್ಗೆ ಮಾತನಾಡುತ್ತಾರೊ, ಅವರು ‘ಹಿಂದೂ ಧರ್ಮದ ಆರಾಧ್ಯ ಭಗವಾನ ಶಂಕರನ ಪವಿತ್ರ ಸ್ಥಳವನ್ನು ಇಸ್ಲಾಮೀ ಆಕ್ರಮಕರಿಂದ ಕೆಡಿಸಲ್ಪಟ್ಟ ಪಾಪದ ಪರಿಮಾರ್ಜನೆ ಮಾಡಿ ಅದನ್ನು ಹಿಂದೂ ಸಮಾಜಕ್ಕೆ ಏಕೆ ಹಿಂತಿರುಗಿಸಬೇಕು’, ಎನ್ನುವ ವಿಷಯವನ್ನು ಸಂಬಂಧಪಟ್ಟವರಿಗೆ ಮನದಟ್ಟು ಮಾಡಬೇಕು. ಕೊನೆಗೆ ನ್ಯಾಯಾಲಯದ ಮಾರ್ಗವನ್ನೇ ಸ್ವೀಕರಿಸಲಿಕ್ಕಿದ್ದರೆ, ನ್ಯಾಯಮಾರ್ಗದಲ್ಲಿ ಅಡಚಣೆಯನ್ನಂತೂ ಉಂಟು ಮಾಡಬೇಡಿ. ನ್ಯಾಯಾಲಯವು ಸತ್ಯಶೋಧನೆಯ ಮೊದಲ ಮೆಟ್ಟಿಲನ್ನು ಏರಿದೆ, ಆ ಮೆಟ್ಟಿಲನ್ನೆ ಮುರಿಯಲು ಪ್ರಯತ್ನಿಸಬೇಡಿ. ಈಗ ದೇಶ ಜಾಗೃತವಾಗುತ್ತಿದೆ. ಈಗ ಅದನ್ನು ಇನ್ನೂಹೆಚ್ಚಿನ ಭ್ರಮನಿರಸನ ಮಾಡಲು ಸಾಧ್ಯವಿಲ್ಲ. ಯಾವಾಗ ನಾವು ಪರಸ್ಪರರ ಸಂಸ್ಕೃತಿ, ಪರಂಪರೆ ಹಾಗೂ ವಿಶ್ವಾಸವನ್ನು ಗೌರವಿಸುವೆವೋ, ಆಗಲೆ ಎಲ್ಲ ಭಾರತೀಯರು ಮನಸ್ಸಿನಿಂದ ಸೌಹಾರ್ದತೆಯಿಂದ ಇರಬಹುದು. ಆದ್ದರಿಂದ ಪರಕೀಯ ಆಕ್ರಮಕರೊಂದಿಗೆ ತಾವು, ತಮ್ಮ ಕುಟುಂಬದವರು ಅಥವಾ ಸಮಾಜವನ್ನು ಜೋಡಿಸುವ ಪಾಪದಿಂದ ದೂರವಿರಬೇಕು.

– ಶ್ರೀ. ವಿನೋದ ಬನ್ಸಲ್, ವಕ್ತಾರರು, ವಿಶ್ವಹಿಂದೂ ಪರಿಷತ್ತು