ರಾಮಾಂಜನೇಯ ಭಜನಾಮಂದಿರದಲ್ಲಿ ನಡೆದ ‘ತಾಂಬೂಲ ಪ್ರಶ್ನೆ’ಯಿಂದ ಸಿಕ್ಕಿತು ಉತ್ತರ

ಮಂಗಳೂರು – ಮಳಲಿ ಭಾಗದಲ್ಲಿ ಅಸಯ್ಯೀದ ಅಬ್ದುಲ್ಲಾಹಿಲ ಮದನಿ ಮಸೀದಿಯಲ್ಲಿ ದೇವಾಲಯದ ಅವಶೇಷ ಮತ್ತು ಚಿಹ್ನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಮೀಪದಲ್ಲಿರುವ ರಾಮಾಂಜನೇಯ ಭಜನಾ ಮಂದಿರದಲ್ಲಿರುವ ಕೇರಳದ ಖ್ಯಾತ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ ಅವರಲ್ಲಿ ‘ತಾಂಬೂಲ ಪ್ರಶ್ನೆ’ ನಡೆಯಿತು. ಅದರಲ್ಲಿ ಈ ಮಸೀದಿಯು ‘ಮಂದಿರ’ವಾಗಿತ್ತು ಎಂದು ತಿಳಿದುಬಂದಿದೆ.

ಈ ಮಾಹಿತಿಯಲ್ಲಿ ಜ್ಯೋತಿಷಿ ಗೋಪಾಲಕೃಷ್ಣ ಪಣಿಕ್ಕರ ಅವರು ‘ಸಾವಿರಾರು ವರ್ಷಗಳ ಇತಿಹಾಸವಿರುವ ದೇವಾಲಯವಿದೆ. ಯತಿಗಳು ಇಲ್ಲಿ ದೇವಸ್ಥಾನವನ್ನು ಸ್ಥಾಪಿಸಿದರು. ಆದರೆ ಯಾವ ದೇವರು? ಅದರ ಸರಿಯಾದ ಸ್ಥಳವನ್ನು (ದೇವರ ಮೂರ್ತಿ) ಹುಡುಕಬೇಕಾಗಿದೆ. ಅದನ್ನು ಹುಡುಕ ಬೇಕಾದರೆ ‘ತಾಂಬೂಲ ಪ್ರಶ್ನೆ’ ಯ ಬದಲು ‘ಅಷ್ಟಮಂಗಳ ಪ್ರಶ್ನೆ’ಯ ಮೂಲಕ ಸ್ಪಷ್ಟವಾದ ಮಾಹಿತಿ ಸಿಗಬಹುದು.