ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನು ಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ …

ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಚೈತನ್ಯಮಯ ಗ್ರಂಥಕಾರ್ಯದ ಸಂದರ್ಭದಲ್ಲಿನ ವಿವಿಧ ಅಂಗಗಳ ಮಾಹಿತಿಯನ್ನು ಕೊಡುವ ಈ ಲೇಖನಮಾಲೆಯನ್ನು ಅವರ ೮೦ ವರ್ಷದ ಜನ್ಮೋತ್ಸವದ ನಿಮಿತ್ತ ಪ್ರಕಟಿಸುತ್ತಿದ್ದೇವೆ. ಕಳೆದ ವಾರದ ಬರವಣಿಗೆಯಲ್ಲಿ ‘ಪರಾತ್ಪರ ಗುರು ಡಾಕ್ಟರ್ ಇವರಿಗೆ ಗ್ರಂಥಗಳ ಬಗ್ಗೆ ಇರುವ ಭಾವ’ ಮತ್ತು ‘ಗ್ರಂಥ ಸೇವೆಯ ವಿಷಯದಲ್ಲಿ ಕಂಡು ಬಂದ ಪರಾತ್ಪರ ಗುರು ಡಾಕ್ಟರರ ಗುಣಗಳ ದರ್ಶನ’ ಈ ಮುಂತಾದ ಅಂಶಗಳ ಬಗ್ಗೆ ಹೇಳಲಾಗಿದೆ. ಈ ವಾರ ಅದರ ಮುಂದಿನ ಭಾಗವನ್ನು ನೋಡೋಣ.

(ಪೂ.) ಸಂದೀಪ ಗಜಾನನ ಆಳಶಿ

ಸಂಕಲನಕಾರರು : (ಪೂ.) ಶ್ರೀ. ಸಂದೀಪ ಆಳಶಿ (ಸನಾತನ ಗ್ರಂಥಗಳ ಓರ್ವ ಸಂಕಲನಕಾರರು), ರಾಮನಾಥಿ, ಗೋವಾ.

೨ ಆ. ಸಮಾಜಕ್ಕೆ ಗ್ರಂಥಗಳನ್ನು ಕಡಿಮೆ ಬೆಲೆಯಲ್ಲಿ ಕೊಡುವ ತಳಮಳ : ಗ್ರಂಥ ನಿರ್ಮಿತಿಯ ಆರಂಭದ ಕಾಲದಲ್ಲಿ ಕೆಲವು ಗ್ರಂಥಗಳನ್ನು ಒಂದು ಮುದ್ರಣಾಲಯದಲ್ಲಿ ಮುದ್ರಿಸಿಕೊಂಡೆವು. ಆ ಗ್ರಂಥಗಳ ಮುದ್ರಣದ ಬೆಲೆ ಬಹಳ ಹೆಚ್ಚಿರುತ್ತಿತ್ತು, ಉದಾ. ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಗ್ರಂಥದ ಮುದ್ರಣದ ಬೆಲೆ ೩೧ ರೂಪಾಯಿಗಳಷ್ಟು ಆಗಿತ್ತು. ಸಾಮಾನ್ಯ ವಾಚಕರಿಗೆ ಗ್ರಂಥಗಳು ದುಬಾರಿಯಾಗಬಾರದೆಂದು ಪರಾತ್ಪರ ಗುರುಗಳು ಆ ಸಮಯದಲ್ಲಿ ‘ಕಡಿಮೆ ಬೆಲೆಯಲ್ಲಿ ಗ್ರಂಥಗಳನ್ನು ಮುದ್ರಿಸಿ ಕೊಡುವಂತಹ’, ಮುದ್ರಣಾಲಯವನ್ನು ಹುಡುಕಲು ಹೇಳಿದರು.

ಪರಾತ್ಪರ ಗುರು ಡಾಕ್ಟರರ ಈ ತಳಮಳದಿಂದಾಗಿ ಮುಂದೆ ಚಿಪಳೂಣ (ರತ್ನಾಗಿರಿ ಜಿಲ್ಲೆ)ನಲ್ಲಿನ ಓರ್ವ ಮುದ್ರಕರು ಸ್ವತಃ ಶೀವ ಆಶ್ರಮಕ್ಕೆ ಬಂದರು ಮತ್ತು ಧರ್ಮಕಾರ್ಯಕ್ಕಾಗಿ ಸಹಾಯ ಮಾಡಲು ಅವರು ಗ್ರಂಥಗಳನ್ನು ಕಡಿಮೆ ಬೆಲೆಯಲ್ಲಿ ಮುದ್ರಿಸಿ ಕೊಡಲು ಒಪ್ಪಿಕೊಂಡರು. ಇದರಿಂದಾಗಿ ೩೧ ರೂಪಾಯಿ ಬೆಲೆಯಾಗುವ ‘ಅಧ್ಯಾತ್ಮಿಕ ಪ್ರಾಸ್ತಾವಿಕ ವಿವೇಚನೆ’ ಈ ಗ್ರಂಥವು ಕೇವಲ ೭ ರೂಪಾಯಿಯಲ್ಲಿ ಮುದ್ರಣವಾಗಿ ಬಂದಿತು ! ಈ ರೀತಿ ಸನಾತನ ಗ್ರಂಥಗಳ ಬೆಲೆ ಕಡಿಮೆಯಾಯಿತು. ಮುಂದೆ ಮುಂಬೈಯಲ್ಲಿನ ‘ಸುಪ್ರೆಸಾ ಗ್ರಾಫಿಕ್ಸ್’ ಈ ಮುದ್ರಣಾಲಯದವರೂ ಕಡಿಮೆ ಬೆಲೆಗೆ ಗ್ರಂಥಗಳನ್ನು ಮುದ್ರಿಸಿಕೊಟ್ಟರು.

ಲೋಕಮಾನ್ಯ ತಿಲಕರು ತಮ್ಮ ‘ಗೀತಾರಹಸ್ಯ’ ಎಂಬ ಗ್ರಂಥ ತುಂಬಾ ದೊಡ್ಡದಾಗಿದ್ದರೂ ಎಲ್ಲರಿಗೆ ಓದಲು ಸಾಧ್ಯವಾಗಬೇಕೆಂದು, ಅದರ ಬೆಲೆಯನ್ನು ಅತ್ಯಂತ ಕಡಿಮೆ ಇಟ್ಟಿದ್ದರು. ಪರಾತ್ಪರ ಗುರು ಡಾಕ್ಟರರಲ್ಲಿಯೂ ಲೋಕಮಾನ್ಯರಂತಹ ಜನಕಲ್ಯಾಣದ ವಿಲಕ್ಷಣ ತಳಮಳ ಕಂಡು ಬರುತ್ತದೆ. ‘ಈಶ್ವರೀ ಕಾರ್ಯವಾಗಿದ್ದರೆ, ಈಶ್ವರನೇ ಆ ಕಾರ್ಯದಲ್ಲಿನ ಅಡಚಣೆಗಳನ್ನು ಹೇಗೆ ದೂರಗೊಳಿಸುತ್ತಾನೆ’, ಎಂಬುದೂ ಮೇಲಿನ ಉದಾಹರಣೆಯಿಂದ ಕಲಿಯಲು ಸಿಗುತ್ತದೆ.

೨ ಇ. ಗುರುಗಳ ಆಜ್ಞಾಪಾಲನೆ : ಪ.ಪೂ. ಬಾಬಾರವರು ಒಮ್ಮೆ ಪರಾತ್ಪರ ಗುರು ಡಾಕ್ಟರರಿಗೆ, “ಒಂದು ದೊಡ್ಡ ಗ್ರಂಥಕ್ಕಿಂತ ಬೇರೆ ಬೇರೆ ವಿಷಯಗಳ ಚಿಕ್ಕ-ಚಿಕ್ಕ ಗ್ರಂಥಗಳನ್ನು ಬರೆಯಿರಿ” ಎಂದು ಹೇಳಿದ್ದರು. ಅಂದಿನಿಂದ ಇಂದಿನವರೆಗೆ ಪರಾತ್ಪರ ಗುರು ಡಾಕ್ಟರರು ಪ್ರತಿಯೊಂದು ಗ್ರಂಥವನ್ನು ಹಾಗೆಯೇ ಮಾಡುತ್ತಾರೆ. ಕೆಲವೊಮ್ಮೆ ಯಾವುದಾದರೊಂದು ಗ್ರಂಥದ ವಿಷಯವನ್ನು ಒಟ್ಟಿಗೆ ಪ್ರಕಟಿಸಲು ಸುಲಭವಿದ್ದಲ್ಲಿ, ನಾವು ಅವರಿಗೆ ‘ಒಂದೇ ದೊಡ್ಡ ಗ್ರಂಥವನ್ನು ಮುದ್ರಿಸೋಣ’, ಎಂದು ಸೂಚಿಸುತ್ತಿದ್ದೆವು; ಆದರೆ ಅವರು ನಮಗೆ ಪ್ರತಿ ಸಲ ‘ಗ್ರಂಥದ ೨-೩ ಭಾಗಗಳಲ್ಲಿದ್ದರೂ ಆಗಬಹುದು; ಆದರೆ ಚಿಕ್ಕ-ಚಿಕ್ಕ ಗ್ರಂಥಗಳನ್ನು ಮುದ್ರಿಸೋಣ’, ಎನ್ನುತ್ತಿದ್ದರು. ಪರಾತ್ಪರ ಗುರು ಡಾಕ್ಟರರು ಗುರುಗಳ ಆಜ್ಞೆಯನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸುತ್ತಾರೆಂಬುದು ಇದರಿಂದ ಕಲಿಯಲು ಸಿಗುತ್ತದೆ. ಗುರುಗಳ ಆಜ್ಞೆಯನ್ನು ಶಿಷ್ಯನು ಕಟ್ಟುನಿಟ್ಟಾಗಿ ಪಾಲಿಸಿದಾಗಲೇ, ಗುರುಗಳು ತಮ್ಮ ಸರ್ವಸ್ವವನ್ನು ಶಿಷ್ಯನಿಗೆ ಕೊಡುತ್ತಾರೆ !

೨ ಈ. ಅಧ್ಯಯನದ ಮತ್ತು ಕೇಳಿಕೊಳ್ಳುವ ವೃತ್ತಿ : ಕೆಲವು ಸಾಧಕರಿಗೆ ಸನಾತನದ ಗ್ರಂಥಗಳು ತಿಳಿಯಲು ಕಠಿಣವಾಗುತ್ತವೆ’, ಎಂಬುದು ಪರಾತ್ಪರ ಗುರು ಡಾಕ್ಟರರಿಗೆ ತಿಳಿದಾಗ ಅವರು ಇದನ್ನು ತಕ್ಷಣ ಗುರುಗಳಿಗೆ ಹೇಳಿದರು. ಆಗ ಗುರುಗಳು, “ಅವರಿಗೆ ನಾಮಸ್ಮರಣೆ ಮಾಡಲು ಹೇಳಿರಿ (ಸಾಧನೆಯನ್ನು ಮಾಡಲು), ಅಂದರೆ ಗ್ರಂಥಗಳು ಅರ್ಥವಾಗುವುವು,” ಎಂದು ಹೇಳಿದರು. ಇಂದಿಗೂ ಸಂತರು ಮತ್ತು ಅಧ್ಯಾತ್ಮದ ಅಧ್ಯಯನಕಾರರು ಗ್ರಂಥಗಳ ಕುರಿತು ಕೆಲವು ಸುಧಾರಣೆಗಳನ್ನು ಸೂಚಿಸಿದರೆ ಪರಾತ್ಪರ ಗುರು ಡಾಕ್ಟರರು ಅವುಗಳನ್ನು ಆನಂದದಿಂದ ಸ್ವೀಕರಿಸುತ್ತಾರೆ ಮತ್ತು ಅದರಂತೆ ಗ್ರಂಥಗಳಲ್ಲಿ ಬದಲಾವಣೆಗಳನ್ನೂ ಮಾಡುತ್ತಾರೆ. ಇದರಿಂದ ಪರಾತ್ಪರ ಗುರು ಡಾಕ್ಟರರ ಅಧ್ಯಯನದ ವೃತ್ತಿ, ಹಾಗೆಯೇ ಅವರ ಕೇಳಿಕೊಳ್ಳುವ ವೃತ್ತಿಯು ಕಂಡುಬರುತ್ತದೆ.

೨ ಉ. ಸಂತರ ಜೊತೆಗಿರುವ ಆತ್ಮೀಯತೆಯಿಂದ ಗ್ರಂಥಗಳಿಗಾಗಿ ವಿಪುಲ ಜ್ಞಾನದ ಸಂಗ್ರಹ : ಸನಾತನದ ಗ್ರಂಥಗಳಲ್ಲಿ ತಾತ್ತ್ವಿಕ ಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನವೂ ಬಹಳಷ್ಟಿದೆ. ಈ ಪ್ರಾಯೋಗಿಕ ಜ್ಞಾನವನ್ನು ಪರಾತ್ಪರ ಗುರು ಡಾಕ್ಟರರು ಸಂತರ ಬಳಿ ಹೋಗಿ ಅವರಿಂದ ಕಲಿತುಕೊಂಡಿದ್ದಾರೆ. ಶ್ರೀ ಮಂಗಲಶಾಹಬಾಬಾ (ಮುಂಬಯಿ), ಪ.ಪೂ. ಬೆಜನ್ ದೇಸಾಯಿ (ನಾಸಿಕ) ಮತ್ತು ಪ.ಪೂ. ಶಾಮರಾವ ಮಹಾರಾಜ (ಕರ್ಲೆ, ಕೊಲ್ಲಾಪುರ), ಇವು ಅಂತಹ ಸಂತರ ಕೆಲವು ಉದಾಹರಣೆಗಳಾಗಿವೆ. ಪ.ಪೂ. ಕಾಣೆ ಮಹಾರಾಜರು (ನಾರಾಯಣಗಾವ, ಪುಣೆ) ಮತ್ತು ಗುರುದೇವ ಡಾ. ಕಾಟೆಸ್ವಾಮೀಜಿ (ಶ್ರೀರಾಮಪುರ, ನಗರ) ಇವರು ಪರಾತ್ಪರ ಗುರು ಡಾಕ್ಟರರ ಮೇಲಿರುವ ಪ್ರೀತಿಗಾಗಿ ತಮ್ಮಲ್ಲಿನ ಜ್ಞಾನದ ಭಂಡಾರವನ್ನೇ ಪರಾತ್ಪರ ಗುರು ಡಾಕ್ಟರರಿಗೆ ಕೊಟ್ಟಿದ್ದಾರೆ. ಪರಾತ್ಪರ ಗುರು ಡಾಕ್ಟರರನ್ನು ಅವರ ಹಿರಿಯ ಸಹೋದರ ಸದ್ಗುರು (ದಿ) ಅಪ್ಪಾಕಾಕಾ (ಡಾ. ವಸಂತ ಆಠವಲೆ) ಇವರು ಗುರುಗಳೆಂದೇ ನೋಡುತ್ತಿದ್ದರು. ಅವರು ಇಡೀ ಜೀವನದಲ್ಲಿ ಅತ್ಯಂತ ಪರಿಶ್ರಮಪಟ್ಟು ಅಧ್ಯಾತ್ಮದಲ್ಲಿನ ವಿವಿಧ ವಿಷಯಗಳ ಬಗ್ಗೆ ಸಂಗ್ರಹಿಸಿದ ಎಲ್ಲ ಜ್ಞಾನವನ್ನು ಪರಾತ್ಪರ ಗುರು ಡಾಕ್ಟರರಿಗೆ ಸನಾತನದ ಗ್ರಂಥಗಳಿಗಾಗಿ ನೀಡಿದರು. ಅವರು ಸ್ವತಃ ಬರೆದ ‘ಆಯುರ್ವೇದ’ ಮತ್ತು ‘ಮಕ್ಕಳ ಸಂಗೋಪನೆ ಹಾಗೂ ವಿಕಾಸ’ ಈ ಎಲ್ಲ ಗ್ರಂಥಗಳ ಮುದ್ರಣದ ಹಕ್ಕನ್ನು ಸನಾತನಕ್ಕೆ ಕೊಟ್ಟರು !