ಜೂನ್ ೯ ರಂದು ಹಿಂದೂ ಪಕ್ಷದ ಅರ್ಜಿಯ ಮೇಲೆ ನಿರ್ಧಾರ
ನವ ದೆಹಲಿ : ಕುತುಬ್ ಮಿನಾರ್ ಪರಿಸರದಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಹಿಂದೂ ಪಕ್ಷವೊಂದು ಸಾಕೇತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮೇ ೨೪ರಂದು ನಡೆಯಿತು. ಈ ವೇಳೆ ಪುರಾತತ್ವ ಇಲಾಖೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ ‘ಕುತುಬ್ ಮಿನಾರ್ ನಲ್ಲಿ ಪೂಜೆ ಸಲ್ಲಿಸುವ ಹಕ್ಕು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ. ಈ ವೇಳೆ ಹಿಂದೂ ಪಕ್ಷದಿಂದ ಯುಕ್ತಿವಾದ ನಡೆಯಿತು. ಈ ಕುರಿತು ನ್ಯಾಯಾಲಯವು ತನ್ನ ತೀರ್ಪನ್ನು ಜೂನ್ ೯, ೨೦೨೨ ರಂದು ನೀಡಲಿದೆ. ಮುಂದಿನ ಒಂದು ವಾರದೊಳಗೆ ತಮ್ಮ ಹೇಳಿಕೆಗಳನ್ನು ಲಿಖಿತವಾಗಿ ಸಲ್ಲಿಸುವಂತೆ ಹಿಂದೂ ಮತ್ತು ಮುಸ್ಲಿಂ ಎರಡೂ ಪಕ್ಷಗಳಿಗೆ ನ್ಯಾಯಾಲಯ ಹೇಳಿದೆ. ಇದಕ್ಕೂ ಮುನ್ನ ಹಿಂದೂ ಪಕ್ಷದ ಬೇಡಿಕೆಯನ್ನು ಸಿವಿಲ್ ಕೋರ್ಟ್ ತಿರಸ್ಕರಿಸಿತ್ತು.
(ಸೌಜನ್ಯ : India Today)
೧. ಕುತುಬ್ ಮಿನಾರ್ ಪ್ರದೇಶದಲ್ಲಿರುವ ೨೭ ಹಿಂದೂ ಮತ್ತು ಜೈನ ದೇವಾಲಯಗಳನ್ನು ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ. ಅಲ್ಲಿ ಅನೇಕ ಹಿಂದೂ ದೇವತೆಗಳ ವಿಗ್ರಹಗಳಿವೆ. ಆದ್ದರಿಂದ ಹಿಂದೂಗಳು ಇಲ್ಲಿ ಪೂಜೆ ಮಾಡುವ ಅಧಿಕಾರ ಸಿಗಬೇಕು, ಎಂದು ಪೂ. (ನ್ಯಾಯವಾದಿ) ಹರಿ ಶಂಕರ್ ಜೈನ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಬಗ್ಗೆ ನ್ಯಾಯಾಲಯವು, ಈ ದೇವತೆಗಳು ಕಳೆದ ೮೦೦ ವರ್ಷಗಳಿಂದ ಪೂಜಿಸಲ್ಪಡದೇ ಇದೆ, ಅವುಗಳನ್ನು ಹಾಗೆಯೇ ಇರಲು ಅನುಮತಿಸಬಹುದು ಎಂದು ಹೇಳಿದೆ.
೨. ಪೂ. (ನ್ಯಾಯವಾದಿ) ಹರಿಶಂಕರ್ ಜೈನ್ ಇವರು, ೨೭ ಹಿಂದೂ ಮತ್ತು ಜೈನ ದೇವಾಲಯಗಳನ್ನು ಕೆಡವಿ ಅಲ್ಲಿ ‘ಕುವ್ವತ್ ಉಲ್ ಇಸ್ಲಾಂ’ ಹೆಸರಿನ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ನಮ್ಮ ಬಳಿ ಬಲವಾದ ಪುರಾವೆಗಳಿವೆ. ಆದುದರಿಂದ ಇಲ್ಲಿ ಪೂಜೆಗೆ ಅವಕಾಶ ನೀಡಬೇಕು. ಅಲ್ಲಿ ದೇವಸ್ಥಾನ ಟ್ರಸ್ಟ್ ಸ್ಥಾಪಿಸಬೇಕು ಎಂದು ಹೇಳಿದರು.
೩. ಈ ಕುರಿತು ನ್ಯಾಯಾಲಯವು, ‘ಸ್ಮಾರಕವನ್ನು ಪೂಜಾ ಸ್ಥಳವನ್ನಾಗಿ ಮಾಡಬೇಕು ಎಂದು ನೀವು ಭಾವಿಸುತ್ತೀರಾ ?’ ಎಂದು ಕೇಳಿದಾಗ ಪೂ. (ನ್ಯಾಯವಾದಿ) ಹರಿ ಶಂಕರ್ ಜೈನ್ ಇವರು, ನಮಗೆ ಅಲ್ಲಿ ಯಾವುದೇ ದೇವಾಲಯ ಬೇಡ, ನಮಗೆ ಪೂಜೆ ಮಾಡುವ ಹಕ್ಕು ಮಾತ್ರ ಬೇಕು ಎಂದು ಹೇಳಿದರು.
೪. ನ್ಯಾಯಾಲಯವು, ಉಲ್ಲೇಖಿಸಿರುವ ಮಸೀದಿ ಪ್ರಸ್ತುತ ಬಳಕೆಯಲ್ಲಿಲ್ಲ. ಆ ಮಸೀದಿಯ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಏಕೆ ಒತ್ತಾಯಿಸುತ್ತಿದ್ದೀರಿ ? ಎಂದು ಕೇಳಿದೆ.
೫. ಈ ಕುರಿತು ಪೂ. (ನ್ಯಾಯವಾದಿ) ಹರಿ ಶಂಕರ್ ಜೈನ್ ಅವರು, ಹಿಂದೂಗಳು ಅನೇಕ ಸಂರಕ್ಷಿತ ಸ್ಮಾರಕಗಳಲ್ಲಿ ಪೂಜೆ ಮಾಡುತ್ತಾರೆ.’ ಈ ಬಗ್ಗೆ ನ್ಯಾಯಾಲಯವು, ಹೌದು; ಆದರೆ ನೀವು ಇಲ್ಲಿ ದೇವಸ್ಥಾನ ಕಟ್ಟಲು ಬೇಡಿಕೆ ಇಡುತ್ತಿದ್ದೀರಿ; ಏಕೆಂದರೆ ‘ಇಲ್ಲಿ ೮೦೦ ವರ್ಷಗಳ ಹಿಂದೆ ದೇವಸ್ಥಾನವಿತ್ತು ಅದನ್ನು ಪುನರ್ ನಿರ್ಮಾಣ ಮಾಡಬೇಕು’, ಎನ್ನುತ್ತೀರಿ. ಆದರೆ, ೮೦೦ ವರ್ಷಗಳ ಹಿಂದೆಯೇ ದೇವಾಲಯ ತನ್ನ ಅಸ್ತಿತ್ವ ಕಳೆದುಕೊಂಡಿರುವಾಗ ಇಂತಹ ಬೇಡಿಕೆ ಹೇಗೆ ಮಾಡಲು ಸಾಧ್ಯ ? ಎಂದು ಹೇಳಿದೆ.
೬. ಪೂ. (ನ್ಯಾಯವಾದಿ) ಹರಿಶಂಕರ್ ಜೈನ್ ಅವರು ಈ ಕುರಿತು, ಅಯೋಧ್ಯೆಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ದೇವತೆಗಳು ಯಾವಾಗಲೂ ಇರುತ್ತಾರೆ. ದೇವರಿಗೆ ಸೇರಿದ ಭೂಮಿ, ಅದು ಮುಳುಗುವವರೆಗೂ ಯಾವಾಗಲೂ ದೇವತೆಗಾಗಿ ಇರುತ್ತದೆ. ಇದನ್ನು ಸರ್ವೋಚ್ಚ ನ್ಯಾಯಾಲಯವು ೫ ನ್ಯಾಯಮೂರ್ತಿಗಳ ಪೀಠವೂ ಒಪ್ಪಿಕೊಂಡಿತ್ತು. ಯಾವುದೇ ದೇವರ ವಿಗ್ರಹಗಳನ್ನು ಒಡೆದು ದೇವಾಲಯಗಳನ್ನು ಕೆಡವಿದರೂ, ದೇವತೆಗಳು ತಮ್ಮ ದಿವ್ಯತೆ ಮತ್ತು ಪವಿತ್ರತೆಯನ್ನು ಕಳೆದುಕೊಳ್ಳುವುದಿಲ್ಲ. ಕುತುಬ್ ಮಿನಾರ್ ಪ್ರದೇಶದಲ್ಲಿ ಇಂದಿಗೂ ಭಗವಾನ ಮಹಾವೀರ, ಶ್ರೀ ಗಣಪತಿ ಮುಂತಾದವರ ವಿಗ್ರಹಗಳಿವೆ. ದೇವತೆಗಳ ಅಸ್ತಿತ್ವ ಇದ್ದರೆ ಪೂಜೆ ಮಾಡುವ ಹಕ್ಕು ಕೂಡ ಇದೆ. ಆ ಸ್ಥಳವನ್ನು ವಿವಾದಾತ್ಮಕ ಎಂದು ಕರೆಯಲಾಗುವುದಿಲ್ಲ; ಏಕೆಂದರೆ ಕಳೆದ ೮೦೦ ವರ್ಷಗಳಲ್ಲಿ ಅಲ್ಲಿ ನಮಾಜ್ ಮಾಡಿಲ್ಲ ಎಂದು ಹೇಳಿದರು.
೭. ಯುಕ್ತಿವಾದದ ಸಮಯದಲ್ಲಿ ಪುರಾತತ್ವ ಇಲಾಖೆಯ ನ್ಯಾಯವಾದಿ ಸುಭಾಷ ಗುಪ್ತಾ ಇವರು, ಕುತುಬ್ ಮಿನಾರ್ ಒಂದು ಸ್ಮಾರಕವಾಗಿದೆ. ಹಾಗಾಗಿ ಇಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ. ಅದರ ಸ್ವರೂಪವನ್ನು ಬದಲಾಯಿಸಲಾಗುವುದಿಲ್ಲ. ಆದ್ದರಿಂದ ಅರ್ಜಿಯನ್ನು ತಿರಸ್ಕರಿಸಬೇಕು. ಪುರಾತತ್ವ ಇಲಾಖೆಗೆ ಕುತುಬ್ ಮಿನಾರ್ ಬಂದಾಗ ಅಲ್ಲಿ ಪೂಜೆ ನಡೆಯುತ್ತಿರಲಿಲ್ಲ. ಕಿರಿಯ ನ್ಯಾಯಾಲಯವು ತನ್ನ ಆದೇಶದಲ್ಲಿ, ಪೂಜೆ ಮಾಡುವವರಿಗೆ ಅವರ ಧರ್ಮದ ಪ್ರಕಾರ ಅಧಿಕಾರಗಳಿವೆ; ಆದರೆ ಈ ಸಂದರ್ಭದಲ್ಲಿ ಪೂಜೆ ಮಾಡುವ ಹಕ್ಕಿಲ್ಲ. ಪುರಾತತ್ವ ಇಲಾಖೆಗೆ ಬಂದಾಗ ಸ್ಮಾರಕದ ನೋಟ ಹಾಗೆಯೇ ಉಳಿದಿದೆ. ಹಾಗಾಗಿ ಕೆಲವೆಡೆ ಪೂಜೆ ಸರಿ, ಕೆಲವೆಡೆ ಅಲ್ಲ ಎಂದು ಹೇಳಿದರು.