ಉತ್ತರಪ್ರದೇಶದಲ್ಲಿ ನ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕಲು ಪ್ರಾರಂಭ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಎಲ್ಲಾ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕುವುದು ಅನಿವಾರ್ಯ ಮಾಡುವ ನಿರ್ಣಯ ಉತ್ತರಪ್ರದೇಶ ಸರಕಾರ ತೆಗೆದುಕೊಂಡ ನಂತರ ಮೆ ೧೩ ರಂದು ರಾಜ್ಯದ ಬಹುತೇಕ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಕಲಾಯಿತು.

೧. ಉತ್ತರಪ್ರದೇಶದ ಮದರಸಾ ಶಿಕ್ಷಣ ಪರಿಷತ್ ರಾಷ್ಟ್ರಗೀತೆ ಹಾಕುವ ನಿರ್ಣಯ ತೆಗೆದುಕೊಂಡಿತ್ತು. ಈ ವಿಷಯದಲ್ಲಿ ಎಲ್ಲಾ ಮದರಸಾಗಳಿಗೆ ಆದೇಶ ನೀಡಲಾಗಿದೆ. ಈ ಆದೇಶ ರಾಜ್ಯದ ಎಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಿಗೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.

೨. ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ದಾನಿಶ್ ಆಜಾದ್ ಅನ್ಸಾರಿ ಇವರು, ಈ ಆದೇಶದ ಪಾಲನೆ ನಡೆಸುವ ಸೂಚನೆ ಎಲ್ಲಾ ಜಿಲ್ಲಾ ಕಲ್ಯಾಣಾಧಿಕಾರಿಗಳಿಗೆ ನೀಡಲಾಗಿದೆ. ಈ ಆದೇಶದ ಪಾಲನೆ ನಿಯಮಿತವಾಗಿ ಆಗುತ್ತದೆ ಅಥವಾ ಇಲ್ಲವೇ ? ಇದನ್ನು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ನೋಡಿಕೊಳ್ಳುವರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಉತ್ತರಪ್ರದೇಶದ ಭಾಜಪದ ಯೋಗಿ ಆದಿತ್ಯನಾಥ ಸರಕಾರಕ್ಕೆ ಅಭಿನಂದನೆ ! ಈಗ ಆದರ ಆದರ್ಶ ತೆಗೆದುಕೊಂಡು ದೇಶದಲ್ಲಿನ ಭಾಜಪ ಆಡಳಿತವಿರುವ ಅನ್ಯ ರಾಜ್ಯಗಳು ಕೂಡ ಮುಂದೆ ಬಂದು ಈ ರೀತಿಯ ನಿರ್ಣಯ ತೆಗೆದುಕೊಳ್ಳಬೇಕು.