ತಾಜಮಹಲ್ ಯಾರು ಕಟ್ಟಿಸಿದರು ಇದರ ಶೋಧಕಾರ್ಯ ನಡೆಸಿ !

ತಾಜಮಹಲ್ ಪ್ರಕರಣ ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ್ ಉಚ್ಚ ನ್ಯಾಯಾಲಯ !

ತಾಜಮಹಲದಲ್ಲಿನ ೨೨ ಮುಚ್ಚಿರುವ ಕೋಣೆಗಳು ತೆರೆಯುವಂತೆ ಒತ್ತಾಯಿಸಿದ ಪ್ರಕರಣ

ಪ್ರಯಾಗರಾಜ (ಉತ್ತರ ಪ್ರದೇಶ) – ತಾಜ್‌ಮಹಲ್ ಶಹಜಹಾನ್ ಕಟ್ಟಿಸಲಿಲ್ಲ, ಇದರ ಮೇಲೆ ನಿಮಗೆ ವಿಶ್ವಾಸ ಇದೆ ? ನಾವು ಇಲ್ಲಿ ತೀರ್ಪು ನೀಡಲು ಬಂದಿದ್ದೇವೆಯೆ ? ‘ಅದು ಯಾರು ಕಟ್ಟಿದರು ಅಥವಾ ತಾಜ್‌ಮಹಲ್ ಎಷ್ಟು ಹಳೆಯದು ?’ ನಿಮಗೆ ತಿಳಿದಿಲ್ಲವಾದರೆ ಈ ವಿಷಯದ ಮೇಲೆ ಶೋಧಕಾರ್ಯ ನಡೆಸಿ, ಎಂ.ಎ. ಮಾಡಿಕೊಳ್ಳಿ. ಪಿಹೆಚ್ಡಿ ಮಾಡಿಕೊಳ್ಳಿ ಅಥವಾ ಯಾವುದಾದರೂ ಸಂಸ್ಥೆ ನಿಮಗೆ ಸಂಶೋಧನೆ ಮಾಡಲು ಬಿಡದಿದ್ದರೆ, ಆಗ ನಮ್ಮ ಹತ್ತಿರ ಬನ್ನಿ. ಈ ಮನವಿಯ ವಿಚಾರಣೆ ನಾವು ಮುಂದಕ್ಕೆ ಹಾಕುವುದಿಲ್ಲ, ಎಂಬ ಶಬ್ದಗಳಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ತಾಜಮಹಲ್‌ನ ಮುಚ್ಚಿರುವ ೨೨ ಕೋಣೆ ತೆರೆದು ಅದರ ಕಲೆ ಹಾಕುವಂತೆ ಒತ್ತಾಯಿಸಿದ ಅರ್ಜಿದಾರನಿಗೆ ಚಾಟಿ ಬೀಸುತ್ತಾ ಈ ಅರ್ಜಿಯನ್ನು ತಿರಸ್ಕರಿಸಲಾಯಿತು. ಇದರ ನಂತರ ಅರ್ಜಿದಾರನು ಈ ತೀರ್ಪಿನ ವಿರೋಧದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಸವಾಲು ಹಾಕಲಾಗುವುದು ಎಂದು ಹೇಳಿದ್ದಾರೆ.

ಈ ಕುರಿತು ಅರ್ಜಿದಾರನು ನ್ಯಾಯಾಲಯಕ್ಕೆ, ‘ನಾವು ಪ್ರಾಧಿಕರಣದಿಂದ ಮಾಹಿತಿ ಕೇಳಿದ್ದೇವೆ ಎಂದು ಹೇಳಿದರು’ ಅದಕ್ಕೆ ನ್ಯಾಯಾಲಯವು, ‘ಒಂದು ವೇಳೆ ಅವರು ಏನಾದರೂ ಸುರಕ್ಷೆಯ ಕಾರಣದಿಂದಾಗಿ ಕೋಣೆಗಳನ್ನು ಮುಚ್ಚಿದ್ದೇವೆ ಎಂದು ಹೇಳಿದ್ದಾರೆ, ಆಗ ಆ ಮಾಹಿತಿ ಇದೆ. ಆದ್ದರಿಂದ ನಿಮಗೆ ಸಮಾಧಾನವಾಗುತ್ತಿರಲಿಲ್ಲ ಎಂದರೆ ಪ್ರಶ್ನಿಸಿ. ಸಾರ್ವಜನಿಕ ಹಿತಾಸಕ್ತಿಯ ದುರುಪಯೋಗ ಮಾಡಬೇಡಿ.