ಬೆಳಗಾವಿಯ ಚಿ. ಅವಿರ ಕಾಗವಾಡನು (೧ ವರ್ಷ) ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದನೆಂದು ಘೋಷಣೆ !

ಎಡದಿಂದ ಶ್ರೀ. ಪ್ರತೀಕ ಕಾಗವಾಡ, ಸೌ. ನಿಕಿತಾ ಪ್ರತೀಕ ಕಾಗವಾಡ, ಸೌ. ಅವಿರ ಪ್ರತೀಕ ಕಾಗವಾಡ ಮತ್ತು ಸೌ. ತಾರಾ ಶೆಟ್ಟಿ

ಬೆಳಗಾವಿ : ಅತ್ಯಂತ ಶಾಂತ, ಸದಾ ಆನಂದ ಮತ್ತು ಹಸನ್ಮುಖನಾಗಿರುವ ಇಲ್ಲಿನ ಚಿ. ಅವಿರ ಪ್ರತೀಕ ಕಾಗವಾಡನು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ನೆಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್‌ಲೈನ್ ಮೂಲಕ ಮೇ ೨ ರಂದು ಅಂದರೆ ಅವನ ಹುಟ್ಟುಹಬ್ಬದ ದಿನದಂದು ಘೋಷಿಸಿದರು. ಇದರಲ್ಲಿ ಅಲ್ಲಿ ಉಪಸ್ಥಿತರಿದ್ದ ಎಲ್ಲರಿಗೆ ಭಾವಜಾಗೃತಿ ಆಯಿತು. ಈ ಸಮಯ ದಲ್ಲಿ ಚಿ. ಅವಿರ ಅವರ ತಂದೆ ಶ್ರೀ. ಪ್ರತೀಕ ಕಾಗವಾಡ, ತಾಯಿ ಸೌ. ನಿಕಿತಾ ಕಾಗವಾಡ, ಅಜ್ಜಿ ಸೌ. ಆಶಾ ಕಾಗವಾಡ, ಅಜ್ಜ ಶೇ. ೬೧ ಮಟ್ಟದ ಶ್ರೀ. ದಿಲೀಪ ಕಾಗವಾಡ, ಮಾವ ಶ್ರೀ. ನಚಿಕೇತ ಮತ್ತು ಸನಾತನದ ಸಾಧಕರಾದ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ತಾರಾ ಶೆಟ್ಟಿ ಹಾಗೂ ಶೇ. ೬೦ ಮಟ್ಟದ ಶ್ರೀ. ಬಾಪೂ ಸಾವಂತ ಇವರೂ ಉಪಸ್ಥಿತರಿದ್ದರು.