ಹೇರೂರು (ತುಮಕೂರು ಜಿಲ್ಲೆ) ಹಾಗೂ ಚಿಂತಾಮಣಿ (ಚಿಕ್ಕಬಳ್ಳಾಪುರ)ಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ

ತುಮಕೂರು – ತಾಲ್ಲೂಕಿನ, ಹೇರೂರಿನ ಶ್ರೀ ಲಕ್ಷ್ಮಿ ರಂಗನಾಥ ಸಮುದಾಯ ಭವನದಲ್ಲಿ, ಏಪ್ರಿಲ್ ೨೯ ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆಯು ನೆರವೇರಿತು. ಹೇರೂರಿನ ನ್ಯಾಯವಾದಿಗಳಾದ ಶ್ರೀ. ಅರವಿಂದ,  ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಶಿಧರ ಆಚಾರ್ ಮತ್ತು ಸನಾತನ ಸಂಸ್ಥೆ ವತಿಯಿಂದ ಸೌ. ಚೇತನ ಶಂಕರ್ ಇವರು ಸಭೆಯನ್ನು ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ. ಅರವಿಂದ್ ಇವರು ನಮ್ಮ ಪೂರ್ವಜರು ಮಕ್ಕಳಿಗೆ ರಾಷ್ಟ್ರ-ಧರ್ಮದ ಕುರಿತು ಒಳ್ಳೆಯ ಸಂಸ್ಕಾರಗಳನ್ನು ಹೇಳಿಕೊಡುತ್ತಿದ್ದರು ಆದರೆ ಈಗಿನ ಪೋಷಕರು ಹೆಚ್ಚಿನ ವಿದ್ಯಾಭ್ಯಾಸ ಮತ್ತು ಹಣಗಳಿಕೆಯ ಹಿಂದೆ ಮಕ್ಕಳು ಓಡುವುದನ್ನು ಕಲಿಸುತ್ತಿದ್ದಾರೆ’, ಎಂದು ಖೇದ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಯು ಇತ್ತೀಚೆಗೆ ಸಂಪನ್ನವಾಯಿತು. ಇದರ ಉದ್ಘಾಟನೆಯನ್ನು ನ್ಯಾಯವಾದಿ ನೀಲಿ ಮಂಜುನಾಥ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ಸನಾತನ ಸಂಸ್ಥೆಯ ಸೌ. ಶಾರದಾ ಯೋಗೀಶ ಇವರು ಮಾಡಿದರು. ಈ ವೇಳೆ ಮಾತನಾಡಿದ ನ್ಯಾಯವಾದಿ ನೀಲಿ ಮಂಜುನಾಥ್ ಇವರು ‘ಭಾರತೀಯರು ಮೆಕಾಲೆ ಶಿಕ್ಷಣ ಪದ್ದತಿಯನ್ನು ಸ್ವೀಕರಿಸದೆ ಗುರುಕುಲ ಪದ್ಧತಿಯಂತೆ ಶಿಕ್ಷಣವನ್ನು ಪಡೆಯಬೇಕು’, ಎಂದರು.