ಎಲ್ಲಾ ಹಿಂದೂಗಳು ಜಾತಿ ಭೇದವನ್ನು ನೋಡದೆ ಒಂದಾಗಬೇಕಿದೆ ! – ಶ್ರೀನಿವಾಸ ರೆಡ್ಡಿ, ಭಾರತೀಯ ಕಿಸಾನ್ ಸಂಘ

ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರಜಾಗೃತಿ ಸಭೆ ಸಂಪನ್ನ !

ಬೆಂಗಳೂರು (ಬೊಮ್ಮಸಂದ್ರ) : ನಮ್ಮ ಧರ್ಮದ ಮೇಲೆ ಸದ್ಯ ಅನೇಕ ಆಘಾತಗಳಾಗುತ್ತಿವೆ. ನಮ್ಮ ಭಾರತದ ಪರಂಪರೆಯಲ್ಲಿ ಅತಿಥಿ ಸತ್ಕಾರ ಗುರುಕುಲ ಪದ್ಧತಿ ಇಂತಹ ಅನೇಕ ಸದಾಚರಣೆಗಳಿದ್ದವು. ಆದರೆ ಇಂದು ಶಾಲಾ-ಕಾಲೇಜುಗಳಲ್ಲಿ ನಮ್ಮ ಸಂಸ್ಕೃತಿಯ ಆಚರಣೆ ಮಾಡಲು ಕುಂಕುಮ, ಬಳೆಗಳನ್ನು ಧರಿಸಲು ಅವಕಾಶ ನೀಡುವುದಿಲ್ಲ ನನ್ನ ಮಕ್ಕಳನ್ನು ಸುಸಂಸ್ಕೃತಗೊಳಿಸುವುದು ನಮ್ಮದೇ ಜವಾಬ್ದಾರಿಯಾಗಿದೆ ಎಂದು ಶ್ರೀ. ಶ್ರೀನಿವಾಸ್ ರೆಡ್ಡಿಯವರು ಹಿಂದೂ ರಾಷ್ಟ್ರಜಾಗೃತಿ ಸಭೆಯಲ್ಲಿ ಉಪಸ್ಥಿತ ಹಿಂದೂಗಳಿಗೆ ಕರೆ ನೀಡಿದರು. ಅವರು ಸಭೆಯಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಮಹತ್ವ ಈ ವಿಷಯದ ಕುರಿತು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಳಿಗ್ಗೆ ೧೦ ಗಂಟೆಗೆ ಆಯೋಜಿಸಿದ ಈ ಸಭೆಯನ್ನು ಶಂಖನಾದ ಹಾಗೂ ದೀಪಪ್ರಜ್ವಲನೆಯೊಂದಿಗೆ ಪ್ರಾರಂಭಿಸಲಾಯಿತು. ೧೫೦ ಕ್ಕೂ ಅಧಿಕ ಹಿಂದೂಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಆನೇಕಲ್ ವಕೀಲ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಪಟಾಪಟ ಪ್ರಕಾಶ್ ಇವರು ಮಾತನಾಡುತ್ತಾ “ಬಹುಜಾತಿಗಳಿಂದ ಕೂಡಿರುವ ನಮ್ಮ ದೇಶದ ವಿವಿಧತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಸದ್ಯ ನಮ್ಮ ದೇಶದಲ್ಲಿ ನಮ್ಮ ಅಸ್ತಿತ್ವವನ್ನು ಹುಡುಕಬೇಕಾದ ಪರಿಸ್ಥಿತಿ ನಮಗೆ ಬಂದೊದಗಿದೆ. ನಾವೆಲ್ಲರೂ ಒಂದೇ ಎಂಬ ಪದ ಹೃದಯಕ್ಕೆ ಮುಟ್ಟಬೇಕಿದೆ, ಆಗ ಮಾತ್ರ ನಾವು ಸಮಾನತೆ, ಭ್ರಾತತ್ವದಿಂದ ದೇಶವನ್ನು ಕಟ್ಟಬಹುದಾಗಿದೆ ಎಂದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ, ನಮ್ಮ ದೇಶದ ಇತಿಹಾಸದಲ್ಲಿ ಮೊಘಲರ ಆಕ್ರಮಣ ಕಾಲದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಮಾವಳೆಯರನ್ನು ಸಂಘಟಿಸಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತದಲ್ಲಿ ಹಕ್ಕ-ಬುಕ್ಕರು ಹಿಂದೂ ಧರ್ಮದ ರಕ್ಷಣೆಯನ್ನು ಮಾಡಿದರು. ಹಾಗೆಯೇ ನಾವೆಲ್ಲರೂ ಧರ್ಮದ ರಕ್ಷಣೆಗಾಗಿ ಪ್ರಯತ್ನಿಸಬೇಕಿದೆ ಎಂದರು.

ಅಶಾಂತಿ ಮತ್ತು ವಿನಾಶದತ್ತ ಪಾಶ್ಚಾತ್ಯ ರಾಷ್ಟ್ರಗಳು 

‘ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಜನರ ಪರಿಸ್ಥಿತಿ ತುಂಬಾ ಕರುಣಾಮಯವಾಗಿದೆ. ಆ ಜನರು ಯಾವಾಗಲೂ ‘ಫ್ಯಾಶನ್’ ಬದಲಾಯಿಸುತ್ತಾರೆ, ‘ಬಟ್ಟೆ, ಫರ್ನಿಚರ್, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲ, ಪತ್ನಿಯನ್ನೂ ಬದಲಾಯಿಸುತ್ತಾರೆ ! ‘ಕೆಲವಡೆಗಳಲ್ಲಿಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಕುಡಿಯುತ್ತಾರೆ ಮತ್ತು ತಮ್ಮ ಪತ್ನಿಯರನ್ನು ಆನಂದಿಸಲು ಬಿಡುತ್ತಾರೆ. ಆದರೂ ಬಡಪಾಯಿಗಳಿಗೆ ಸುಖ ಸಿಗುವುದಿಲ್ಲ. ದಿನೇ ದಿನೇ ಅವರು ಅಶಾಂತಿ ಮತ್ತು ಸರ್ವನಾಶದತ್ತ ಸಾಗುತ್ತಿದ್ದಾರೆ’. (ಆಧಾರ : ಋಷಿ ಪ್ರಸಾದ, ಮೇ ೨೦೦೦)

ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !

‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತವಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಿದೆ. ರಾಜದಂಡವು ಆ ಕಾರ್ಯವನ್ನು ನಿರ್ವಹಿಸದಿದ್ದರೆ ಸಮಾಜದಲ್ಲಿ ಮಾತ್ಸ್ಯನ್ಯಾಯ(ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ನುಂಗುತ್ತವೆ.) ಉದ್ಭವಿಸುತ್ತದೆ.

– ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೬.೧.೨೦೧೧)