ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದರೆ ಹಿಂದೂರಾಷ್ಟ್ರದ ಸ್ಥಾಪನೆಯಾಗಬಹುದು ! – ಕಾಲೀಚರಣ ಮಹಾರಾಜ

ಅಲೀಗಡ (ಉತ್ತರಪ್ರದೇಶ) – ಈ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳನ್ನು ಕೆಡವಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರಗಳಾದವು. ಹಿಂದೂ ರಾಷ್ಟ್ರವಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುವವು. ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬಹುದು, ಎಂಬ ಹೇಳಿಕೆಯನ್ನು ಕಾಲೀಚರಣ ಮಹಾರಾಜರು ಅಲೀಗಡದಲ್ಲಿನ ಸಂತ ಸಮ್ಮೇಳನದಲ್ಲಿ ನೀಡಿದರು. ಕೆಲವು ತಿಂಗಳುಗಳ ಹಿಂದೆ ಕಾಲೀಚರಣ ಮಹಾರಾಜರು ಮ. ಗಾಂಧಿಯವರ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಬಂಧನಕ್ಕೊಳಗಾಗಿದ್ದರು.

ಹಿಂದೂಗಳು ಧರ್ಮದ ಆಧಾರದಲ್ಲಿ ಮತದಾನ ಮಾಡಬೇಕು !

ಕಾಲೀಚರಣ ಮಹಾರಾಜರು ಮಾತನಾಡುತ್ತ ಹಿಂದೂ ರಾಷ್ಟ್ರದ ನಿರ್ಮಿತಿಗಾಗಿ ಎಲ್ಲ ಹಿಂದೂಗಳು ಸಂಘಟಿತರಾಗಬೇಕು. ಕೇವಲ ಸನಾತನ ಧರ್ಮವೇ ಏಕೈಕ ಧರ್ಮವಾಗಿದೆ, ಭಾರತದಲ್ಲಿ ಇಸ್ಲಾಮ ಮತ್ತು ಕ್ರೈಸ್ತ ಧರ್ಮಗಳಿಲ್ಲ. ಇರಾಕ, ಇರಾನ, ಅಫಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳು ನಮ್ಮ ಕೈತಪ್ಪಿ ಹೋಗಿವೆ ಮತ್ತು ಅವು ಇಸ್ಲಾಮೀ ದೇಶಗಳಾಗಿವೆ, ಎಂದು ಹೇಳಿದರು.