ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು ಸಾಧನೆಯ ಕುರಿತು ಮಾಡಿದ ಅಮೂಲ್ಯ ಮಾರ್ಗದರ್ಶನ !

ಪೂ. (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು

೧. ಪುಣ್ಯವನ್ನು ಏಕೆ ಗಳಿಸಬೇಕು ?

೧ ಅ. ‘ಈ ಶರೀರವನ್ನು ಇಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ’, ಎಂಬುದು ಗಮನದಲ್ಲಿಟ್ಟು ಮನುಷ್ಯನು ದಾನಧರ್ಮಗಳನ್ನು ಮಾಡಿ ಪುಣ್ಯವನ್ನು ಗಳಿಸಬೇಕು ! : ಮನುಷ್ಯಜನ್ಮವು ಸಿಗುವುದು ದುರ್ಲಭವಾಗಿದೆ. ಅದು ದೊರಕಿದ್ದರೆ, ಭಕ್ತಿಯನ್ನು ಮಾಡಿ ಮತ್ತು ಪುಣ್ಯವನ್ನು ಗಳಿಸಿ ಈ ದೊರಕಿದ ದೇಹವನ್ನು ಸಾರ್ಥಕಗೊಳಿಸಬೇಕು, ಎಂದು ಪುರಾಣದಲ್ಲಿ ಹೇಳಲಾಗಿದೆ. ಸತ್ಯದ ಮಾರ್ಗದಿಂದ ನಡೆಯಬೇಕು, ಧರ್ಮಕ್ಕನುಸಾರವಾಗಿ ವರ್ತಿಸಬೇಕು ಮತ್ತು ಪರೋಪಕಾರವನ್ನು ಮಾಡಬೇಕು. ಭೂದಾನ, ಗೋದಾನ, ವಸ್ತ್ರದಾನ, ಅನ್ನದಾನ, ಶ್ರಮದಾನ ಮತ್ತು ಜ್ಞಾನದಾನ ಇವುಗಳು ದಾನದ ಪ್ರಕಾರಗಳಿವೆ. ಮನುಷ್ಯನು ಜನಿಸಿದ ನಂತರ ಅವನಿಗೆ ಋಷಿಋಣ, ಪಿತೃಋಣ, ದೇವಋಣ ಮತ್ತು ಸಮಾಜಋಣ ಈ ನಾಲ್ಕು ಋಣಗಳನ್ನು ತೀರಿಸಬೇಕಾಗುತ್ತದೆ. ದೇವರು, ದೇಶ ಮತ್ತು ಧರ್ಮ ಇವುಗಳ ರಕ್ಷಣೆಯನ್ನು ಮಾಡಿರಿ. ‘ಜನಿಸುವ ಮೊದಲು ಯಾವ ಜಾಗದಲ್ಲಿ ಇರುತ್ತಿದ್ದೆವೋ, ಅಲ್ಲಿ ಒಂದು ದಿನ ಈ ಶರೀರವನ್ನು ಈ ಭೂಮಿಯ ಮೇಲೆ ಬಿಟ್ಟು ಹೋಗಬೇಕಾಗುತ್ತದೆ’, ಎಂಬುದು ಗಮನದಲ್ಲಿರಲಿ. ಮನುಷ್ಯನಿಗೆ ‘ಒಂದು ದಿನ ಈ ಶರೀರವು ಕೆಳಗೆ ಭೂಮಿಯ ಮೇಲೆ ಬೀಳುವುದು’, ಎಂಬ ನೆನಪು ದಿನಕ್ಕೆ ೩ ಬಾರಿಯಾದರೂ ಆಗಬೇಕು.

೧ ಆ. ಪರಮಾರ್ಥದ ಲಾಭವು ಮೃತ್ಯುವಿನ ನಂತರ ದೊರಕುವುದು :

‘ಸಂಸಾರವನ್ನು ಮಾಡಿದರೂ ದುಃಖವಾಗುತ್ತದೆ ಮತ್ತು ಪರಮಾರ್ಥವನ್ನು ಮಾಡಿದರೂ ದುಃಖವು ಹೆಚ್ಚಾಗುತ್ತದೆ; ಆದರೆ ಪರಮಾರ್ಥ ಮಾಡುವುದರಿಂದ ಅದರ ಫಲವು ಸತ್ತ ನಂತರ ಸಿಗುತ್ತದೆ. ಜೀವವು ಒಳ್ಳೆಯ ಮಾರ್ಗಕ್ಕೆ, ದೇವರಿಗೆ ಭೇಟಿಯಾಗಲು ಹೋಗುತ್ತದೆ ಮತ್ತು ಮುಕ್ತವಾಗುತ್ತದೆ. ಜನ್ಮ-ಮೃತ್ಯುವಿನ ೮೪ ಲಕ್ಷ ಸುತ್ತುಗಳನ್ನು ತಪ್ಪಿಸುತ್ತದೆ’.

೨. ಜೀವನದಲ್ಲಿ ಕೇವಲ ಪರಮಾರ್ಥಕ್ಕಾಗಿ (ಪರೋಪಕಾರಕ್ಕಾಗಿ) ಸಮಯವನ್ನು ಕೊಡಬೇಕು !

‘ಹುಟ್ಟಿದಾಗಿನಿಂದ ಪರಮಾರ್ಥವನ್ನು ಮಾಡುವುದರಲ್ಲಿ ಖರ್ಚಾಗುವ ಸಮಯವು ಒಳ್ಳೆಯದಾಗಿರುತ್ತದೆ. ಸಂಸಾರದಲ್ಲಿ ಅನಾವಶ್ಯಕ ಮಾತುಗಳನ್ನಾಡುವುದರಲ್ಲಿ ಸಮಯವು ಹೋಗುತ್ತದೆ. ನನಗೆ ‘ನಮ್ಮ ಆಯುಷ್ಯವನ್ನು ಮನುಷ್ಯನು ವ್ಯರ್ಥಗೊಳಿಸಬಾರದು, ಎಂದೆನಿಸುತ್ತದೆ. ಜೀವನದಲ್ಲಿ ನಾಮಸ್ಮರಣೆ, ಧ್ಯಾನ ಮತ್ತು ಪೂಜೆ ಇಂತಹ ಶುಭಕಾರ್ಯಗಳಿಗಾಗಿ ಸಮಯವನ್ನು ಕೊಡಬೇಕು, ಅಂದರೆ ಪುಣ್ಯವು ಜಮೆ ಆಗುವುದು’.

೩. ನಿರಂತರ ಸಾಧನೆಯಲ್ಲಿರಬೇಕು !

‘ನೀವು ಕೇವಲ ಒಂದು ತಿಂಗಳು ದೇವರು (ಸಜ್ಜನ) ಮತ್ತು ೧೧ ತಿಂಗಳು ರಾಕ್ಷಸರಾಗಿರುತ್ತೀರಿ. ನನಗೆ ಹಾಗೆ ಮಾಡಿದರೆ ನಡೆಯುತ್ತದೆಯೇ ?’

೪. ನಿಯಮಿತವಾಗಿ ಸಾಧನೆಯನ್ನು ಮಾಡುವುದರಿಂದಾಗುವ ಪರಿಣಾಮ

೪ ಅ. ಭಕ್ತಿ, ಜ್ಞಾನ, ವೈರಾಗ್ಯ ಧಾರಣೆ ಮಾಡಿದಾಗಲೇ ಈಶ್ವರನ ಶಕ್ತಿ ಮತ್ತು ಆನಂದವು ದೊರಕಲು ಸಾಧ್ಯವಾಗುವುದು : ಯಾರಿಗೆ ‘ಕಾಣದಿರುವುದು ಕಾಣಿಸಬೇಕು, ಎಂದೆನಿಸುವುದೋ, ಅವನು ಭಕ್ತಿ, ಜ್ಞಾನ, ವೈರಾಗ್ಯ ಧಾರಣೆಯನ್ನು ಮಾಡಬೇಕು. ಆಗಲೇ ಅವನಿಗೆ ಈಶ್ವರನ ಶಕ್ತಿಯು ಪ್ರಾಪ್ತವಾಗುವುದು. ಬಹಳಷ್ಟು ಜನರು ದೇವರಿಗಾಗಿ ಸಂಸಾರದ (ವಿಷಯದ) ಸುಖವನ್ನು ಬಿಡಲು ಸಿದ್ಧರಾಗುವುದಿಲ್ಲ. ಹೀಗಾದರೆ ಪರಮೇಶ್ವರ ಮತ್ತು ಪರಮೇಶ್ವರನ ಜ್ಞಾನವು ಹೇಗೆ  ಸಿಗುತ್ತದೆ ? ನಾಳೆಯಿಂದ ‘ದೇವರ ಹೊರತು ನನ್ನವರೆಂದು ಯಾರೂ ಇಲ್ಲ, ಎಂದು ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಹೇಳುತ್ತಿರು. ಆಗ ನೋಡು, ಸುಖವು ನಿನ್ನ ಶರೀರದಲ್ಲಿ ನೀರು ತುಂಬುವುದು. ಈ ಅವ್ಯಕ್ತವು, ಯಾರಿಗೂ ಕಾಣಿಸದಿರುವ ಸುಖವನ್ನು (ಆನಂದವನ್ನು) ನಾನು ಅನುಭವಿಸು ತ್ತಿದ್ದೇನೆ. ಸುಳ್ಳು, ಅಂದರೆ ಮಾಯೆಯಲ್ಲಿನ ಸುಖವನ್ನು ನಾನು ಎಸೆದಿದ್ದೇನೆ ಮತ್ತು ಶಾಶ್ವತ, ದೊಡ್ಡ ಸುಖವನ್ನು ಪಡೆದಿದ್ದೇನೆ. ಈಗ ಎಲ್ಲಿ ನೋಡಿದರೂ ನನಗೆ ಆನಂದ ಕಾಣಿಸುತ್ತಿದೆ.

೪ ಆ. ಶರೀರದಲ್ಲಿನ ಷಡ್ರಿಪುಗಳ ಕಸವನ್ನು ಪ್ರತಿದಿನ ತೆಗೆದರೆ, ಶರೀರವು ಪ್ರತಿದಿನ ಉತ್ಸಾಹಿತ ಮತ್ತು ಆನಂದವಾಗಿರುವುದು :

‘ಪ್ರತಿದಿನವೂ ಮನೆಯಲ್ಲಿನ ಕಸವನ್ನು ತೆಗೆಯುತ್ತೀರಿ’, ಆದರೆ ಶರೀರರೂಪದ ಮನೆಯಲ್ಲಿನ ಕಸವನ್ನು ಏಕೆ ತೆಗೆಯುವುದಿಲ್ಲ ? ಶರೀರದಲ್ಲಿನ ಷಡ್ರಿಪುಗಳ ಕಸವನ್ನೂ ಪ್ರತಿದಿನ ತೆಗೆದರೆ, ಪ್ರತಿದಿನ ಶರೀರವು ಉತ್ಸಾಹಿತ ಮತ್ತು ಆನಂದವಾಗಿರುತ್ತದೆ. ದೇವರ ಒಳ್ಳೆಯ ಕಥೆಗಳನ್ನು ಕೇಳುವುದರಿಂದ ದೇಹವು ತನ್ನಷ್ಟಕ್ಕೆ ಸ್ವಚ್ಛವಾಗುತ್ತದೆ. ‘ಸಮಯ ಇಲ್ಲ’, ಎಂದು ಹೇಳಬೇಡಿ. ನಿರಂತರವಾಗಿ ಪೂಜೆ, ಧ್ಯಾನ ಮತ್ತು ನಾಮಸ್ಮರಣೆ ಇವುಗಳನ್ನು ಮಾಡಿರಿ. ಇದರಿಂದಾಗಿ ದೇಹವು ಸ್ವಚ್ಛ ಮತ್ತು ನಿರ್ಮಲವಾಗುತ್ತದೆ. ‘ದೇವರ ನಾಮಜಪವೇ (ಇದೇ) ಸಾಬೂನು ಆಗಿದೆ’.

೪ ಇ. ಸಾಧನೆ ಮಾಡುವವನಿಗೆ ಮನುಷ್ಯನ ಸ್ಥಿತಿಯು ತಿಳಿಯುವುದು :

‘ಅಧ್ಯಾತ್ಮದ ಅಧ್ಯಯನವನ್ನು ಮಾಡಿ ಮತ್ತು ಪ್ರತಿಯೊಬ್ಬ ಮನುಷ್ಯನ ವರ್ತನೆಯ ಸೂಕ್ಷ್ಮ ನಿರೀಕ್ಷಣೆಯನ್ನು ಮಾಡಿದರೆ, ‘ಆ ಮನುಷ್ಯನು ಹೇಗಿದ್ದಾನೆ ?’, ಎಂಬುದು ತಿಳಿಯುತ್ತದೆ. ಕಾಮವಾಸನೆಯಿಂದ ತುಂಬಿದ ಕಣ್ಣುಗಳು, ಮದ್ಯಪಾನದಿಂದ ಆಗಿರುವ ಕೆಂಪು ಕಣ್ಣುಗಳು, ದುಃಖದಿಂದ ಬಳಲುತ್ತಿರುವನು, ನೊಂದವನು ಮತ್ತು ರೋಗಿ ವ್ಯಕ್ತಿಯೆಂದು ಗಮನಕ್ಕೆ ಬರುತ್ತದೆ. ಬಡವ ಮತ್ತು ಶ್ರೀಮಂತರ ಮುಖದ ಮೇಲಿನ ಹಾವಭಾವಗಳಿಂದ ತಿಳಿಯುತ್ತದೆ. ಕಳ್ಳರ ದೃಷ್ಟಿಯನ್ನು ನೋಡಿದಾಗಲೇ ‘ಅವನು ಏನು ಮಾಡುತ್ತಾನೆ ?’, ಎಂಬುದು ತಿಳಿಯುತ್ತದೆ. ಮೋಸಗಾರ, ಸುಲಿಗೆ, ಸುಳ್ಳು ಹೇಳುವನು, ಜಗಳ ಹಚ್ಚುವವನನ್ನು ಸಹ ಗುರುತಿಸಬಹುದು. ವಿನಮ್ರ ಮತ್ತು ಗರ್ವಿಷ್ಠನಾಗಿರುವ ಮನುಷ್ಯನನ್ನೂ ಗುರುತಿಸಬಹುದು. ಅದರೊಂದಿಗೆ ಭಕ್ತಿಯಿಂದ ತುಂಬಿರುವ ಜೀವವನ್ನು ಗುರುತಿಸುವುದಕ್ಕೂ ಬರುತ್ತದೆ. – ಪೂಜ್ಯ (ಹ.ಭ.ಪ.) ಸಖಾರಾಮ ರಾಮಜಿ ಬಾಂದ್ರೆ (೭೦ ವರ್ಷ), ಕಾತಳವಾಡಿ, ತಾ. ಚಿಪಳೂಣ, ಜಿಲ್ಲೆ ರತ್ನಾಗಿರಿ, ಮಹಾರಾಷ್ಟ್ರ.

(ಪೂ. ಸಖಾರಾಮ ಬಾಂದ್ರೆ ಮಹಾರಾಜರ ಈ ಬರವಣಿಗೆಯು ೨೦೦೫ ರಿಂದ ೨೦೨೦ ಈ ಕಾಲಾವಧಿಯಲ್ಲಿ ಬರೆಯಲಾಗಿದೆ.)