ಜಗತ್ತಿನಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಕಂಡುಬಂತು ಬರ್ಡ ಫ್ಲೂ (ಹಕ್ಕಿ ಜ್ವರ)

ಚೀನಾದಲ್ಲಿ ಮೊದಲ ಮಾನವ ಸೊಂಕು ಪತ್ತೆ !

ಬೀಜಿಂಗ(ಚೀನಾ) – ಚೀನಾದ ಹೆನಾನ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ (ಹಕ್ಕಿ ಜ್ವರ) ‘ಎಚ್೩ಎನ್೮’ ಪ್ರಕಾರದ ಮೊದಲ ಮಾನವ ಸೋಂಕಿನ ವರದಿಯಾಗಿದೆ. ಇದು ಜಗತ್ತಿನಲ್ಲಿಯೇ ಮಾನವರಲ್ಲಿ ಹಕ್ಕಿ ಜ್ವರದ ಕಂಡುಬಂದ ಮೊದಲ ಪ್ರಕರಣವಾಗಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಇದನ್ನು ಬಹಿರಂಗಪಡಿಸಿದೆ. ಆದರೆ ಅದೇ ಸಮಯದಲ್ಲಿ ಇದು ಜನರಲ್ಲಿ ಹರಡುವ ಅಪಾಯವು ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಅದಕ್ಕೆ ಹೆದರುವಂತಹದ್ದೇನೂ ಇಲ್ಲ. ‘ಎಚ್೩ಎನ್೮’ ಜ್ವರವು ಮೊದಲು ಕುದುರೆ, ನಾಯಿ, ಮತ್ತು ಪಕ್ಷಿಗಳಲ್ಲಿ ಪತ್ತೆಯಾಗಿದೆ. ಆದಾಗ್ಯೂ ಇಲ್ಲಿಯವರೆಗೆ ಯಾವುದೇ ಮಾನವ ಪ್ರಕರಣಗಳು ವರದಿಯಾಗಿರಲ್ಲ.

೪ ವರ್ಷದ ಬಾಲಕನಿಗೆ ಸೋಂಕು ತಗುಲಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ತಿಳಿಸಿದೆ. ಜ್ವರ ಸೇರಿದಂತೆ ಹಲವು ರೋಗಲಕ್ಷಣಗಳು ಬೆಳೆದ ನಂತರ ಮಗುವಿಗೆ ‘ಎಚ್೩ಎನ್೮’ ವೈರಸ ಸೊಂಕು ತಗುಲಿರುವುದು ಕಂಡುಬಂದಿದೆ. ಆದರೆ ಅವನ ಸಂಪರ್ಕಕ್ಕೆ ಬಂದ ಯಾರಿಗೂ ವೈರಸ ಇರುವುದು ಪತ್ತೆಯಾಗಿಲ್ಲ. ಹುಡುಗನು ತನ್ನ ಮನೆಯಲ್ಲಿ ಸಾಕಿರುವ ಕೋಳಿ ಮತ್ತು ಕಾಗೆಗಳೊಂದಿಗೆ ಸಂರ್ಪಕಕ್ಕೆ ಬಂದಿದ್ದನು. ತದನಂತರ ಅವನಲ್ಲಿ ಜ್ವರ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದು ತಪಾಸಣೆ ನಡೆಸಿದಾಗ ಸೋಂಕು ಇರುವುದು ಪತ್ತೆಯಾಗಿದೆ.