ಕೊನೆಗೂ ಟ್ವಿಟರ್ ಖರೀದಿಸಿದ ಅಬ್ಜಾಧೀಶ ಇಲಾನ್ ಮಸ್ಕ್

೪೪ ಅಬ್ಜ ಡಾಲರ್ಸ್ ಗೆ ನಡೆದ ವ್ಯವಹಾರ

ವಾಷಿಂಗ್ಟನ್ (ಅಮೆರಿಕಾ) – ಟೆಸ್ಲಾ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಅಬ್ಜಾಧೀಶ ಇಲಾನ್ ಮಸ್ಕ್ ಇವರು ಟ್ವಿಟರ್ ನ ಹೊಸ ಮಾಲೀಕರಾಗಿದ್ದಾರೆ. ೪೪ ಅಬ್ಜ ಡಾಲರ್ಸ್ ಅಂದರೆ ೩ ಲಕ್ಷ ೩೬ ಸಾವಿರ ಕೋಟಿ ರೂಪಾಯಿಯಲ್ಲಿ ಖರೀದಿಯ ಒಪ್ಪಂದ ಆಗಿದೆ. ಮಸ್ಕ್ ಇವರು ಟ್ವಿಟರ್ ನ ಪ್ರತಿಯೊಂದು ಶೇರ್ ಗಾಗಿ ತಲಾ ೫೪.೨೦ ಡಾಲರ್ (೪ ಸಾವಿರ ೧೪೮ ರೂಪಾಯಿ) ನೀಡಬೇಕಾಗುತ್ತದೆ. ಟ್ವಿಟರ್ನಲ್ಲಿ ಮಸ್ಕ್ ಇವರು ಮೊದಲಿನಿಂದಲೇ ಶೇಕಡ ೯ ರಷ್ಟು ಶೇರ್ (ಹೂಡಿಕೆ) ಹೊಂದಿದ್ದರು. ಅವರು ಟ್ವೀಟರ್ ನ ಎಲ್ಲಕಿಂತ ದೊಡ್ಡ ಹೂಡಿಕೆದಾರರಾಗಿದ್ದಾರೆ. ಈಗ ಆಗಿರುವ ಒಪ್ಪಂದದ ನಂತರ ಮಸ್ಕ್ ಇವರು ಟ್ವೀಟರ್ ನಲ್ಲಿ ಶೇಕಡ ೧೦೦ ರಷ್ಟು ಮಾಲೀಕತ್ವ ಇರುವುದು ಮತ್ತು ಟ್ವೀಟರ್ ಅವರ ಖಾಸಗಿ ಕಂಪನಿ ಆಗುವುದು.

ಸಿ.ಎನ್.ಎನ್.ನ ವಾರ್ತೆ ಯ ಪ್ರಕಾರ ಟ್ವೀಟರ್ ಇಲಾನ್ ಮಾಸ್ಕ್ ಇವರ ಮಾಲಿಕತ್ವದ ಕಂಪನಿ ಆದ ನಂತರ ಟ್ವೀಟರ್ ನ ಎಲ್ಲ ಶೇರ್ ಹೋಲ್ಡರ್ ಸಿಗೆ ಪ್ರತಿ ಶೇರ್ ಗೆ ೫೪.೨೦ ಡಾಲರ್ಸ್ ನಗದು ಸಿಗುವುದು.

ಟ್ವಿಟರ್ ನಲ್ಲಿ ವಾಕ್ ಸ್ವಾತಂತ್ರ್ಯ ಯಾವುದೇ ತೊಂದರೆ ಇಲ್ಲದೆ ಉಳಿಯುವುದು ಎಂಬ ಅಪೇಕ್ಷೆ !

ಖರೀದಿ ಒಪ್ಪಂದ ಅಂತಿಮವಾದ ನಂತರ ಮಸ್ಕ್ ಇವರು ವಾಕ್ ಸ್ವಾತಂತ್ರ್ಯವನ್ನು ಸಮರ್ಥಿಸುವ ಟ್ವೀಟ್ ಮಾಡಿದ್ದಾರೆ. ಜನರ ವಾಕ್ ಸ್ವಾತಂತ್ರ್ಯ ಉಳಿಯಲಿ ಎಂಬ ಉದ್ದೇಶ ಟ್ವಿಟರ್ ಕಂಡುಕೊಳ್ಳುವಲ್ಲಿ ಆಗಿತ್ತು ಎಂದೂ ಅವರು ನಮೂದಿಸಿದ್ದಾರೆ.

ಟ್ವಿಟರ್ ನ ಜಾಗತಿಕ ಪ್ರಭಾವ

ಟ್ವಿಟರ್ ಜಗತ್ತಿನಾದ್ಯಂತ ೨೧.೭ ಕೋಟೆ ಸಕ್ರಿಯ ಬಳಕೆದಾರರು ಇದ್ದಾರೆ. ಇದರಲ್ಲಿ ಎಲ್ಲಕ್ಕೂ ಹೆಚ್ಚು ೭.೭ ಕೋಟಿ ಅಮೆರಿಕಾದಲ್ಲಿದ್ದಾರೆ. ಎರಡನೆಯ ಸ್ಥಾನದಲ್ಲಿ ಜಪಾನ್ ಇರುವುದು. ಅಲ್ಲಿ ೫.೮ ಕೋಟಿ ಜನರು ಟ್ವಿಟರ್ ಉಪಯೋಗಿಸುತ್ತಾರೆ. ಇದರ ಜೊತೆಗೆ ೨.೪ ಕೋಟಿ ಬಳಕೆದಾರರೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ.