ಮಂಗಳೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಶಾಲೆ ಸಂಪನ್ನ

ಮಂಗಳೂರು – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ೨ ದಿನಗಳ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಶಾಲೆ ಸಂಪನ್ನವಾಯಿತು. ಮಂಗಳೂರು ಮತ್ತು ಉಡುಪಿಯಲ್ಲಿ ಸನಾತನ ಸಂಸ್ಥೆಯ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಸೌ. ಮಂಜುಳಾ ಗೌಡ ಇವರು ಮಾರ್ಗದರ್ಶನ ಮಾಡಿದರೆ ಹಾಗೂ ಶಿವಮೊಗ್ಗದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಇವರು ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಅದೇ ರೀತಿ ಮಂಗಳೂರು ಮತ್ತು ಉಡುಪಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಶೇ. ೬೪ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಗುರುಪ್ರಸಾದ ಗೌಡ ಹಾಗೂ ಶಿವಮೊಗ್ಗದಲ್ಲಿ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿಜಯ ರೇವಣಕರ ಇವರು ಹಿಂದೂ ರಾಷ್ಟ್ರದ ಆವಶ್ಯಕತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಉಪಸ್ಥಿತ ಧರ್ಮಪ್ರೇಮಿಗಳು ಕಾರ್ಯಶಾಲೆಯಲ್ಲಿ ಉತ್ತಮವಾಗಿ ಸ್ಪಂದಿಸಿದರು,

ಶಿಬಿರಾರ್ಥಿಗಳ ಮನೋಗತ

೧. ಶಿಬಿರದ ಹಿಂದಿನ ದಿನ ಶಾರೀರಿಕ ಅಡಚಣೆ ಇತ್ತು. ಆದರೆ ಯಾವುದೇ ವೈದ್ಯರ  ಸಹಾಯವಿಲ್ಲದೆ ಶಿಬಿರದ ಮಾಧ್ಯಮದಿಂದ ನಾನು ಗುಣಮುಖವಾಗಲು ಸಾಧ್ಯವಾಯಿತು. – ಸೌ. ಉಷಾ ರಾಜೇಶ, ಶಿಕಾರಿಪುರ

೨. ಶಿಬಿರದ ಚೈತನ್ಯದಿಂದ ಮನಸ್ಸು ಹಾಗೂ ಬುದ್ಧಿಯ ಶುದ್ಧೀಕರಣವಾಗಿ ಶಾಂತವೆನಿಸಿತು. – ಶ್ರೀ. ಧನುಷ್, ಮಂಗಳೂರು