೧. ನಿದ್ದೆಯಲ್ಲಿ ಮತ್ತು ಇತರ ಸಮಯದಲ್ಲಿ ಪೂ. ಭಾರ್ಗವರಾಮ ಮಾಡುತ್ತಿರುವ ವಿವಿಧ ಮುದ್ರೆಗಳು
ಅ. ಕೆಲವೊಮ್ಮೆ ಪೂ. ಭಾರ್ಗವರಾಮ ಇವರು ರಾತ್ರಿಯಿಡೀ ಎಚ್ಚರವಿರುತ್ತಾರೆ ಮತ್ತು ಕಣ್ಣುಬಿಟ್ಟು ಒಂದೇ ಸಮನೆ ಒಂದೆಡೆ ನೋಡುತ್ತಿರುತ್ತಾರೆ ಎಂಬುದು ಗಮನಕ್ಕೆ ಬರುತ್ತದೆ. (ಛಾಯಾಚಿತ್ರ ೧)
ಆ. ಒಮ್ಮೆ ಕೃಷ್ಣನು ಗೋವರ್ಧನ ಪರ್ವತವನ್ನು ಕಿರುಬೆರಳಿನಿಂದ ಎತ್ತಿಹಿಡಿದಂತೆ, ಪೂ. ಭಾರ್ಗವರಾಮ ಇವರು ತುಂಬ ಸಮಯ ಆ ಮುದ್ರೆಯನ್ನು ಮಾಡಿದ್ದರು. (ಛಾಯಾಚಿತ್ರ ೨)
ಇ. ಕೆಲವೊಮ್ಮೆ ಪೂ. ಭಾರ್ಗವರಾಮ ಇವರು ತಮ್ಮ ಅನಾಹತಚಕ್ರದ ಮೇಲೆ ನ್ಯಾಸವನ್ನು ಮಾಡಿ ನಾಮಜಪವನ್ನು ಮಾಡುತ್ತಿರುತ್ತಾರೆ. (ಛಾಯಾಚಿತ್ರ ೩)
ಸದ್ಗುರು ಡಾ. ಮುಕುಲ ಗಾಡಗೀಳರವರು ಪೂ. ಭಾರ್ಗವರಾಮ ಇವರತ್ತ ನೋಡಿ ‘ಪೂ. ಭಾರ್ಗವರಾಮ ಇವರು ಸಾಧಕರಿಗಾಗಿ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುತ್ತಿದ್ದಾರೆ’, ಎಂದು ಹೇಳಿದರು.
ಈ. ಒಮ್ಮೆ ಬಸ್ಸಿನ ೩ ಗಂಟೆಗಳ ಪ್ರಯಾಣ ಮಾಡುವಾಗ ಅವರು ಆಕಾಶತತ್ತ್ವದ ಮುದ್ರೆ ಮಾಡಿ ಕುಳಿತಿದ್ದರು. (‘ತರ್ಜನಿಯ ತುದಿಯನ್ನು ಹೆಬ್ಬೆರಳಿನ ಮೂಲಕ್ಕೆ ತಾಗಿಸಿದಾಗ ಅಕಾಶತ್ತ್ವದ ಮುದ್ರೆಯಾಗುತ್ತದೆ.
– ಸಂಕಲನಕಾರರು) (ಛಾಯಾಚಿತ್ರ ೪)
೨. ಅರಿವಾದ ಇತರ ಅಂಶಗಳು
೨ ಅ. ರಾತ್ರಿ ಮನೆ ಮತ್ತು ಆಶ್ರಮದಲ್ಲಿ ಎಲ್ಲರೂ ಮಲಗಿದ ನಂತರವೇ ಮಲಗುವುದು : ಅವರು ರಾತ್ರಿ ತಡವಾಗಿ ಮಲಗುತ್ತಾರೆ. ‘ಮನೆ ಮತ್ತು ಆಶ್ರಮದಲ್ಲಿನ ಎಲ್ಲರೂ ಮಲಗಿದ ನಂತರವೇ ಮಲಗುತ್ತಾರೆ’, ಎಂದು ನನಗೆ ಅರಿವಾಯಿತು. ಎಲ್ಲರೂ ಮಲಗುವ ತನಕ ಹಾಸಿಗೆಯಲ್ಲಿ ಹೀಗೆ ಮಲಗಿರುತ್ತಾರೆ; ಆದರೆ ಅವರ ಕಣ್ಣು ತೆರೆದಿರುತ್ತದೆ. ಎಲ್ಲರೂ ಮಲಗಿದ ನಂತರವೇ ಮಲಗುತ್ತಾರೆ.
– ಸೌ. ಭವನಿ ಭರತ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ, ಕರ್ನಾಟಕ (೧೫.೫.೨೦೨೧)